ಮರೆಯಾದ ಫುಟ್ಬಾಲ್ ಮಾಂತ್ರಿಕ ಮರಡೋನಾ
.jpeg)
ಮರೆಯಾದ ಫುಟ್ಬಾಲ್ ಮಾಂತ್ರಿಕ ಮರಡೋನಾ ಫುಟ್ಬಾಲ್ ಅಥವಾ ಸಾಕರ್ ಕ್ರೀಡೆ ತನ್ನಲ್ಲಿ ಸರಳತೆಯನ್ನು ಇಟ್ಟುಕೊಂಡಿದೆ ಯಾವುದೇ ಆಡಂಬರ ವಿಶೇಷ ಸೌಲಭ್ಯವನ್ನು ಇದು ಬಯಸುವುದಿಲ್ಲ ಇದರಿಂದಾಗಿ ಅನೇಕ ಬಡ ಪ್ರತಿಭಾನ್ವಿತ ಯುವಕರ ಭರವಸೆಯ ಬೆಳಕಾಗಿದೆ, ಇದರ ಫಲವಾಗಿಯೇ ಈ ಜಗತ್ತು ನಿರೀಕ್ಷಿಸದ ಪರಿಯಲ್ಲಿ ಅನೇಕ ಅದ್ಭುತವನ್ನು ಸೃಷ್ಟಿಸು ಮಾಂತ್ರಿಕರನ್ನ ನಿರ್ಮಾಣ ಮಾಡಿತು ಅದಕ್ಕೆ ಡೀಗೊ ಮರಡೋನಾ ಹೊರತಲ್ಲ. ಈ ಮಹಾನ್ ಪ್ರತಿಭೆ ಇತ್ತೀಚೆಗೆ ನಮ್ಮನ್ನಗಲಿದ್ದಾರೆ ಮರಡೋನಾ ಬೆಳೆಯುವ ಪೈರು ಮೊಳಕೆಯಲ್ಲೇ ಎಂಬಂತೆ ತನ್ನ ಹುಟ್ಟಿನೊಂದಿಗೆಯೇ ಕಾಲ್ ಚಳಕದ ಮಾಂತ್ರಿಕತೆಯನ್ನ ವರವಾಗಿ ಪಡೆದುಕೊಂಡು ಈ ಧರೆಗೆ ಬಂದ ಶ್ರೇಷ್ಠ ಆಟಗಾರ. ಡಿಗೋ ಅರ್ಮಂಡೋ ಮರಡೋನಾ ಅಕ್ಟೋಬರ್ 30, 1960ರಲ್ಲಿ ಬ್ಯೂನಸ್ ಐರಿಸ್ ನಗರದ ಹೊರವಲಯವಾದ ಶೆನ್ಟಿಟೌನ್ನ ಬಡಕುಟುಂಬದಲ್ಲಿ ಜನನವಾಯಿತು. ನಾಲ್ಕು ಹಿರಿಯ ಸಹೋದರಿಯರು ಮತ್ತು ಇಬ್ಬರು ಕಿರಿಯ ಸಹೋದರಾದ ಯುಗೋ ಮತ್ತು ರಹೌಲ್ ಕೂಡ ವೃತ್ತಿಪರ ಫುಟ್ಬಾಲ್ ಆಟಗಾರರಾಗಿದ್ದರು. ಬಾರ್ಸಿಲೋನಾ ಕ್ಲಬ್ಬಿಗೆ ಸೇರಿದ ಮರಡೋನಾ ಮಹಾನಗರದ ಮಾದಕತೆಗೆ ಮೋಹಗೊಂಡು ಅದರೊಳಗೆ ಹಾಸುಹೊಕ್ಕಾಗಿದ್ದ ಮಾದಕ ವಸ್ತುಗಳ ವ್ಯಸನಿಯಾಗಿ ತನ್ನ ಶಕ್ತಿ ಕುಂದುವಿಕೆಗೆ ತಾನೇ ಕಾರಣೀಭೂತನಾದ, ಇಲ್ಲಿನಿಂದ ಆತನ ಅವನತಿ ಆರಂಭಗೊಂಡು ವಿಪರ್ಯಾಸ ದುರಂತದಲ್ಲಿ ಕೊನೆಗೊಂಡಿತ್ತು, ಇಷ್ಟಾದರೂ ಆತನ ಮೇಲ...