Posts

Showing posts with the label Ramachandra Guha Articles

ಮಂಡೇಲಾರ ಭಾರತೀಯ ನಂಟು

Image
ಈ ತಿಂಗಳ ಆರಂಭದಲ್ಲಿ ನೆಲ್ಸನ್‌ ಮಂಡೇಲಾ ಸತ್ತಾಗ ಭಾರತದ ಗಣ್ಯರು ಸಲ್ಲಿಸಿದ ಶ್ರದ್ಧಾಂಜಲಿಗಳಲ್ಲಿ ದೇಶಭಕ್ತಿ­ಯನ್ನು ಎತ್ತಿಹಿಡಿಯುವ ದನಿ ಇತ್ತು. ಮಂಡೇಲಾ ಅವರ ನೈತಿಕ ಸ್ಥೈರ್ಯ, ಸ್ನೇಹಪರತೆ ಹಾಗೂ ಹೊಂದಾ­ಣಿಕೆ ಗುಣ ಮಹಾತ್ಮ ಗಾಂಧಿ ಅವರಿಗೆ ಹೋಲಿಕೆ­ಯಾಗುವಂತಿವೆ ಎಂದು ಹೊಗಳ­ಲಾಯಿತು (ಅದು ಹಾಗಿರುವುದು ಸತ್ಯ). ಮತ್ತೆ ಕೆಲವರು ಮಂಡೇಲಾ ಅವರ ಹೀರೊ ನೆಹರೂ ಆಗಿದ್ದರೇ ವಿನಾ ಗಾಂಧೀಜಿ ಅಲ್ಲ ಎಂದು ಹೇಳಿದರು (ಅದೂ ನಿಜವೇ). ಆದರೆ, ಈ ನುಡಿನಮನಗಳಲ್ಲಿ  ಮಹತ್ವದ ಅಂಶವೊಂದು ಬಿಟ್ಟುಹೋಗಿತ್ತು.   ಭಾರತೀಯ ಮೂಲದ ದಕ್ಷಿಣ ಆಫ್ರಿಕನ್ನರ ಜತೆ ಮಂಡೇಲಾ ಹೊಂದಿದ್ದ ಆಪ್ತ ಸಂಬಂಧವನ್ನು ವಿವರಿಸುವ ವಿವರಗಳು ಅಲ್ಲಿ ಕಾಣಲಿಲ್ಲ. 1940ರ ದಶಕ­ದಲ್ಲಿ ಮಂಡೇಲಾ, ಜೋಹಾನ್ಸ್‌ಬರ್ಗ್‌­ನಲ್ಲಿ ವಾಸಿ­ಸುತ್ತಿದ್ದಾಗ  ಅವರಿಗೆ ಯುವ  ಕ್ರಾಂತಿಕಾರಿ­ಗಳಾದ ಇಸ್ಮಾಯಿಲ್‌ ಮೀರ್‌ ಹಾಗೂ ಜೆ.ಎನ್‌. ಸಿಂಗ್‌ ಅವರ ಸ್ನೇಹ ಲಭಿಸಿತ್ತು. ಅವರಿಬ್ಬರ ಮೂಲಕ ಮಂಡೇಲಾಗೆ ಭಾರತದ ಸ್ವಾತಂತ್ರ್ಯ ಚಳವಳಿ ಹಾಗೂ ಗಾಂಧೀಜಿ ಪ್ರಭಾವದ ಅರಿವಾಯಿತು. 1946ರಲ್ಲಿ ತಾರತಮ್ಯದಿಂದ ಕೂಡಿದ ಭೂಕಾಯ್ದೆಯ ವಿರುದ್ಧ  ನಟಾಲ್‌ ಹಾಗೂ ಟ್ರಾನ್ಸ್‌ವಾಲ್‌ನಲ್ಲಿ ಭಾರತೀಯರು ನಡೆಸಿದ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಗಾಂಧಿ ಮಾದರಿಯ ಸತ್ಯಾಗ್ರಹ ವಿಧಾನ ಎಂಥದ್ದು ಎಂಬುದು ಅವರಿಗೆ ಮನದಟ್ಟಾಯಿತು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಸಹ...

ಹಿಮಾಲಯದಲ್ಲಿ ತಪ್ಪು ಹೆಜ್ಜೆಗಳು, ವಿನಾಶಕ್ಕೆ ನಾಂದಿ

ಮ ಹಾತ್ಮ ಗಾಂಧಿ ಅವರ ಬ್ರಿಟಿಷ್ ಶಿಷ್ಯೆ ಮೀರಾ ಬೆನ್ ಅವರು ಉತ್ತರಾಖಂಡ ಹಿಮಾಲಯದಲ್ಲಿ 1940ರ ದಶಕದಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದರು. ಗಿರಿಶ್ರೇಣಿಗಳಲ್ಲಿ ಪಯಣಿಸುತ್ತಿದ್ದಾಗ, ಬಾಂಜ್ ಓಕ್‌ನ ಕಾಡುಗಳನ್ನು ಚಿರ್‌ಪೈನ್‌ನ ಏಕಸಂಸ್ಕೃತಿಯ ಕಾಡುಗಳಾಗಿ ಪರಿವರ್ತಿಸುವ ಅರಣ್ಯ ಇಲಾಖೆಯ ಪ್ರಯತ್ನಗಳಿಂದ ಅವರು ದಿಗಿಲುಗೊಂಡಿದ್ದರು. ಈ ಕ್ರಮದ ಹಿಂದಿದ್ದ ಮುಖ್ಯ ಪ್ರೇರಣೆ ವಾಣಿಜ್ಯ ಉದ್ದೇಶ. ಕೈಗಾರಿಕಾ ಟಿಂಬರ್ ಹಾಗೂ ರೆಸಿನ್ (ಪ್ಲಾಸ್ಟಿಕ್ ತಯಾರಿಕೆಗೆ ಅಗತ್ಯವಾದ ಮರದಿಂದ ಒಸರುವ ದ್ರವ್ಯ ಪದಾರ್ಥ) ಮೂಲವಾಗಿ ಚಿರ್‌ಮರಗಳಿಗೆ ಬಹಳ ಬೇಡಿಕೆಯಿತ್ತು. ಆದರೆ ಸ್ಥಳೀಯ ರೈತಸಮುದಾಯದ ಹಿತಗಳಿಗೆ ಇದು ವಿರುದ್ಧವಾಗಿತ್ತು. ಏಕೆಂದರೆ ಅವರಿಗೆ ಇಂಧನ, ಮೇವಿನ ಅಮೂಲ್ಯ ಮೂಲವಾಗಿದ್ದುದು ಬಾಂಜ್. 1952ರಲ್ಲಿ ಬರೆದ `ಸಮ್‌ಥಿಂಗ್ ರಾಂಗ್ ಇನ್ ದಿ ಹಿಮಾಲಯ' ಎಂಬ ಲೇಖನದಲ್ಲಿ, ಬಾಂಜ್ ಜಾಗದಲ್ಲಿ ಚಿರ್‌ಮರಗಳನ್ನು ನೆಡುವುದು ಸಾಮಾಜಿಕವಾಗಿ ಅನ್ಯಾಯವಾದದ್ದು ಹಾಗೂ ಪರಿಸರ ದೃಷ್ಟಿಯಿಂದ ತಪ್ಪು ಮಾರ್ಗದರ್ಶನದಿಂದ ಕೂಡಿದ್ದು ಎಂದು ಮೀರಾ ಬೆನ್ ಎಚ್ಚರಿಸಿದ್ದರು. ಓಕ್ ಅರಣ್ಯಗಳಿಂದಾಗಿ ಹುಲುಸಾಗಿ ಕೆಳಗೆ ಬಿದ್ದ ಉದುರೆಲೆಗಳು ಮುಂಗಾರು ಮಳೆಯ ನೀರನ್ನು ಹೀರಿಕೊಂಡು `ಸುಂದರವಾದ ಸಿಹಿಯಾದ ತಂಪಾದ ನೀರಿನ ಬುಗ್ಗೆ'ಗಳನ್ನು ಸೃಷ್ಟಿಸುತ್ತವೆ. ಹಳ್ಳಿಗರಿಗೂ ಇವೇ ಕುಡಿಯುವ ನೀರಿನ ಮುಖ್ಯ ಮೂಲ. ಆದರೆ ಚಿರ್‌ಅರಣ್ಯಗಳಲ್ಲಿ ಬರೀ ಬರಿದಾದ ಇಳಿಜಾರುಗಳು, ಜೊತೆ...

ಹಿಮಾಲಯದಲ್ಲಿ ಸಾಧನೆ ಮೆರೆದ ಮಹಿಳೆಯರ ಸ್ಫೂರ್ತಿಗಾಥೆ

Image
ಮಹಾತ್ಮ ಗಾಂಧಿಯವರ ನಿಕಟವರ್ತಿ ಯಾಗಿ ಪರಿವರ್ತಿತರಾದ ಬ್ರಿಟಿಷ್ ನೌಕಾಧಿಕಾರಿಯ ಪುತ್ರಿ ಮೀರಾ ಬೆನ್ ಅವರ ಪರಿಸರ ಸಂಬಂಧಿ ಕೆಲಸಗಳ ಬಗ್ಗೆ ಕಳೆದ ಅಂಕಣದಲ್ಲಿ ಬರೆದಿದ್ದೆ. ಈ ಬಾರಿ ಸುಂದರ ಹಾಗೂ ಸೂಕ್ಷ್ಮವಾದ ಹಿಮಾಲಯದ ಕುರಿತಾಗಿ ಇನ್ನೂ ಹೆಚ್ಚಿನ  ಸೂಕ್ಷ್ಮ ಗ್ರಹಿಕೆಗಳಿರುವ ಮತ್ತೊಬ್ಬರು ಇಂಗ್ಲಿಷ್ ಮಹಿಳೆಯ ಬಗ್ಗೆ ಬರೆಯುತ್ತಿದ್ದೇನೆ. ಜರ್ಮನ್- ಇಂಗ್ಲಿಷ್ ತಂದೆ ತಾಯಿ ಹೊಂದಿದ್ದ ಕ್ಯಾಥೆರಿನ್ ಮೇರಿ ಹೈಲ್‌ಮನ್ ಜನಿಸಿದ್ದು ಲಂಡನ್‌ನಲ್ಲಿ 1901ರಲ್ಲಿ. ಅಕ್ಕಸಾಲಿಗ ವೃತ್ತಿ ಮಾಡುತ್ತಿದ್ದ ಆಕೆಯ ತಂದೆಯನ್ನು ಜನಾಂಗೀಯ ದೃಷ್ಟಿಯಿಂದ `ಪರಕೀಯ' ಎಂದು ಪರಿಗಣಿಸಿ ಮೊದಲ ಮಹಾಯುದ್ಧ ಸಂದರ್ಭದಲ್ಲಿ ಅವರನ್ನು ಗಡಿ ಬಿಟ್ಟು ತೆರಳಬಾರದೆಂದು ನಿರ್ಬಂಧಿಸಲಾಗಿತ್ತು. ಯುದ್ಧದ ಸಂದರ್ಭ ಹಾಗೂ ನಂತರದ ದಿನಗಳಲ್ಲಿ ಮಗಳೂ ಕೂಡ ಜನಾಂಗದ್ವೇಷಿ ಜನರಿಂದ ಶತ್ರುತ್ವವನ್ನು ಅನುಭವಿಸಿದ್ದರು. ಆ ನಂತರ, ಕೆಲವು ಭಾರತೀಯ ವಿದ್ಯಾರ್ಥಿಗಳನ್ನು ಅವರು ಭೇಟಿಯಾದರು. ಅವರಿಂದ ಗಾಂಧಿ ಹಾಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದುಕೊಂಡರು. 1932ರಲ್ಲಿ ಭಾರತಕ್ಕೆ ಬಂದು ಉದಯಪುರದ ಶಾಲೆಯಲ್ಲಿ ಸಿಬ್ಬಂದಿಯಾಗಿ ಸೇರಿಕೊಳ್ಳಲು ಕ್ಯಾಥೆರಿನ್‌ಗೆ ಇದೇ ಪ್ರೇರಣೆಯಾಯಿತು. ಇದಾದ ಎರಡು ವರ್ಷಗಳ ನಂತರ ಮೊದಲ ಬಾರಿಗೆ ಅವರು ಗಾಂಧಿಯನ್ನು ಭೇಟಿಯಾದರು. ನಂತರದ ಕೆಲವು ವರ್ಷಗಳು ಸೇವಾಗ್ರಾಮದಲ್ಲೇ ಇದ್ದು ಗಾಂಧಿತತ್ವಗಳನ್ನು ಆಧರಿಸಿದ ಮೂಲ ಶಿಕ್ಷಣದ ಪ್ರಯೋಗಗ...