ಕಾಸರಕೋಡ್ ಇಕೋ ಬೀಚ್,ಪೊನ್ಮುಡಿ
ದಣಿದ ಮನಸ್ಸಿಗೊಂದು ವಿಶ್ರಾಂತಿಯ ತಾಣ * ಬಳಕೂರು ವಿ. ಎಸ್ ನಾಯಕ್ ಧರೆಯ ಸೌಂದರ್ಯದ ಮುಕುಟಮಣಿಯಾಗಿ ಮೇಳೈಸಿರುವ ಜಿಲ್ಲೆಯೇ ಉತ್ತರ ಕನ್ನಡ ಒಂದು ಕಾಲದಲ್ಲಿ ಚೆನ್ನಾಬೈರಾದೇವಿ ಆಡಳಿತದ ಸಂದರ್ಭ ಹೊನ್ನಾವರವು ಹೆಚ್ಚಾಗಿ ಕಾಳು ಮೆಣಸನ್ನು ರಫ್ತು ಮಾಡುವ ಪ್ರಮುಖ ಸ್ಥಳವಾಗಿದೆ. ಸರ್ವಧರ್ಮ ಸಮನ್ವಯತೆಗೆ ಒಂದು ಉದಾಹರಣೆಯಾಗಿತ್ತು. ಶಾಂತಿ ಮಂತ್ರವನ್ನು ಉಪದೇಶಿಸುತ್ತಾ ಬಂದ ಜೈನರ ನೆಲೆವೀಡು ಇದಾಗಿತ್ತು. ಇಂದಿನ ಸಂಸ್ಕೃತಿ ಆಧುನಿಕತೆಯ ಭರಾಟೆಯೊಂದಿಗೆ ಸತ್ವ ಕಳೆದುಕೊಂಡರೂ ಹೊನ್ನಾವರವು ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ಮೀನುಗಾರಿಕೆಯು ಮುಖ್ಯ ಉದ್ಯೋಗವಾಗಿದ್ದು ಕೃಷಿ ಆಧಾರಿತ ಕುಟುಂಬಗಳು ಇಲ್ಲಿ ಹಲವಾರು ರೀತಿಯ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಕಾಣಬಹುದು. ಚೌಪದಿ ಬ್ರಹ್ಮ ದಿನಕರ ದೇಸಾಯಿ ಅವರು ಈ ಜಿಲ್ಲೆಯನ್ನು ಈ ರೀತಿಯಾಗಿ ಹಾಡಿ ಹೊಗಳಿದ್ದಾರೆ. 'ಒಂದು ಬದಿ ಸಹ್ಯಾದ್ರಿ ಇನ್ನೊಂದು ಬದಿ ಕಡಲು/ ನಡುಮಧ್ಯದಲ್ಲಿ ಅಡಿಕೆ ತೆಂಗುಗಳ ಮಡಲು /ಸಿರಿಗನ್ನಡದ ಚಪ್ಪರವೇ ನನ್ನ ಈ ಜಿಲ್ಲೆ /ಇನ್ನೊಮ್ಮೆ ಇಲ್ಲಿ ಹುಟ್ಟಿ ಬರುವೇ ನಾ ಅಲ್ಲೆ' ಎಂದು ಹೇಳಿದ್ದು ಅವರ ಅಭಿಮಾನಕ್ಕೆ ಸಾಕ್ಷಿ. ಸದಾ ನಗುಮುಖದವರು ಜ್ಞಾನಿಗಳು, ಸಹೃದಯರು ತುಂಬಿರುವ ಈ ಜಿಲ್ಲೆಯಲ್ಲಿ ಸೊಬಗಿದೆ ಸೌಂದರ್ಯವಿದೆ. ಅದೇ ಕಾಸರಕೋಡು ಇಕೋ ಬೀಚ್ ಎಂದರೆ ಅತಿಶೋಯಕ್ತಿಯಲ್ಲ . ಹೀಗಿದೆ ಹೊನ್ನಾವರ ಹೊನ್ನಾವರದ ಮೊದಲ ಹೆಸರು ಹೊನ್ನಪುರಿ ನ...