ಸೇಲ್ ಡೀಡ್ ಹೀಗಿರಲಿ
ಸೇಲ್ ಡೀಡ್ ಅಥವಾ ಮಾರಾಟ ಒಪ್ಪಂದ ಪ್ರಾಪರ್ಟಿ ಖರೀದಿಯಲ್ಲಿ ಮಹತ್ವದ ದಾಖಲೆ. ಆದ್ದರಿಂದ ಅದನ್ನು ಸಿದ್ಧಪಡಿಸುವಾಗ ಹತ್ತು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದರ ವಿವರ ಇಲ್ಲಿದೆ. ಸೇಲ್ ಡೀಡ್ ಅಥವಾ ಮಾರಾಟ ಒಪ್ಪಂದ ಪ್ರಾಪರ್ಟಿ ಖರೀದಿಯಲ್ಲಿ ಮಹತ್ವದ ದಾಖಲೆ. ಆದ್ದರಿಂದ ಅದನ್ನು ಸಿದ್ಧಪಡಿಸುವಾಗ ಹತ್ತು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದರ ವಿವರ ಇಲ್ಲಿದೆ. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಆಸ್ತಿ ವರ್ಗಾವಣೆ ಮಾಡುವಾಗ ಕನ್‌ವೇಯನ್ಸ್ ಡೀಡ್ ಮಾಡಿಕೊಳ್ಳುತ್ತಾರೆ. ಅದೇ ರೀತಿ ಮಾರಾಟ ಮಾಡುವಾಗ ಅಂದರೆ ನಿಗದಿತ ಹಣ ನೀಡಿ ಮಾಲೀಕತ್ವ ವರ್ಗಾವಣೆ ಮಾಡಿಸಿಕೊಳ್ಳುವಾಗ ಇಬ್ಬರ ಮಧ್ಯೆ ಮಾರಾಟದ ಕುರಿತು ಒಪ್ಪಂದವಾಗಬೇಕಾಗುತ್ತದೆ. ಇದನ್ನು ಸೇಲ್ ಡೀಡ್ ಎಂದು ಕರೆಯುತ್ತಾರೆ. ದಾಖಲೆಗಳ ನೋಂದಣಿ ಮೂಲಕ ಇಂತಹ ವರ್ಗಾವಣೆ ಮಾಡಲಾಗುತ್ತದೆ. ಅಂದರೆ ತಾನು ಮಾರಾಟ ಮಾಡಿದ ಪ್ರಾಪರ್ಟಿಯನ್ನು ಖರೀದಿದಾರ ಕಾನೂನು ಪ್ರಕಾರ ಸ್ವಾಧೀನ ಮಾಡಿಕೊಳ್ಳಲು ಮಾಡಿಕೊಂಡ ಒಪ್ಪಂದ ಇದಾಗಿರುತ್ತದೆ. ಕನ್ವೇಯನ್ಸ್ ಡೀಡ್‌ಗೆ ಮೊದಲು ಸೇಲ್ ಡೀಡ್ ಮಾಡಬೇಕಾಗುತ್ತದೆ. ಇದು ಯಾರ ಹೆಸರಿನಲ್ಲಿ ಕನ್ವೇಯನ್ಸ್ ಡೀಡ್ ಮಾಡಿಕೊಳ್ಳುತ್ತೇವೆಯೋ ಅವರ ಹೆಸರಿನಲ್ಲಿ ಕಾನೂನು ಪ್ರಕಾರ ಬರೆದ ದಾಖಲೆ ಇದಾಗಿರುತ್ತದೆ. ಇದನ್ನು ನಾನ್-ಜ್ಯುಡಿಷಿಯಲ್ ಸ್ಟಾಂಪ್ ಪೇಪರ್‌ನಲ್ಲಿ ಬರೆಯಲಾಗುತ್ತದೆ ಹಾಗೂ ಇಬ್ಬರೂ ಅದಕ್ಕೆ ಸಹಿ ಮಾಡಬೇಕಾಗುತ್ತದೆ. ಇದಕ್ಕೆ ...