Posts

Showing posts with the label Dr.R.Balasubramanyam Articles

ಬನ್ನಿ, ಬದಲಾವಣೆಯ ಕಾಲ ಇದೆನ್ನಿ

Image
ಮತ್ತೆ ಚುನಾವಣೆ ಬಂದಿದೆ. ಆಕರ್ಷಣೆ ಕೇಂದ್ರ ಬಿಂದುವಾಗಿರುವ ಜನಸಾಮಾನ್ಯ ಇನ್ನೊಮ್ಮೆ `ಕೊಡುವವನ' ಪಾತ್ರ ನಿರ್ವಹಿಸಲು ಸಜ್ಜಾಗುತ್ತಿದ್ದಾನೆ. ಕೊಡುವುದನ್ನು ಕೊಡಲೇಬೇಕು; ಆದರೆ ಅದಕ್ಕೆ ಮುನ್ನ ಅತ್ಯಂತ ಜಾಗರೂಕನಾಗಿ, ವಿಶ್ಲೇಷಣಾತ್ಮಕವಾಗಿ, ಪ್ರಜ್ಞಾಪೂರ್ವಕವಾಗಿ ಮತ್ತು ಪ್ರಶ್ನೆಗಳನ್ನು ಒಡ್ಡುವ ಮೂಲಕ `ಕೊಡುವ' ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಹೀಗೆ ಅವನು ಈಗ ಕೊಡುವ ಮತ, ಕರ್ನಾಟಕದ ಮುಂದಿನ ಐದು ವರ್ಷಗಳ ಹಣೆಬರಹವನ್ನಷ್ಟೇ ನಿರ್ಧರಿಸುವುದಿಲ್ಲ; ಇನ್ನೂ ಹೆಚ್ಚು ಕಾಲ ರಾಜ್ಯದ ಸ್ಥಿತಿಗತಿಯ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯಕ್ಕೆ ಏನು ಬೇಕೋ ಅದೆಲ್ಲವನ್ನೂ ಮಾಡಿ ಮುಗಿಸಲು ಐದು ವರ್ಷ ಸಾಕಾಗದೇ ಇರಬಹುದು; ಆದರೆ ಅಲ್ಪಸ್ವಲ್ಪವಾದರೂ ನಾವು ಹೆಮ್ಮೆ ಪಟ್ಟುಕೊಳ್ಳುವಂತಹುದು ಏನಿದೆಯೋ ಅದೆಲ್ಲವನ್ನೂ ಹಾಳು ಮಾಡಿ ಮುಗಿಸಲು ನಿರ್ಲಜ್ಜರಿಗೆ ಇಷ್ಟು ಸಮಯ ಸಾಕು ಎಂಬುದನ್ನು ಜನ ಮರೆಯಬಾರದು. ಕಳೆದ ಕೆಲ ವಾರಗಳಿಂದ ನಾನು ವಿವಿಧ ಕ್ಷೇತ್ರಗಳ ಹಲವಾರು ಜನರನ್ನು ಭೇಟಿ ಮಾಡಿ ಸಂವಾದ ನಡೆಸಿದ್ದೇನೆ. ಇವರಲ್ಲಿ ಹಲವರು ಈಗಷ್ಟೇ 18 ವರ್ಷ ತುಂಬಿದ ವಿದ್ಯಾರ್ಥಿಗಳಾಗಿದ್ದು, ಇತ್ತೀಚೆಗೆ ಮತದಾನದ ಹಕ್ಕು ಪಡೆದಿದ್ದಾರೆ. ರಾಜಕಾರಣಿಗಳ ಬಗ್ಗೆ ಹತಾಶ ಮನೋಭಾವ ಹೊಂದಿರುವ ಬಹುತೇಕರು, ಇದೇ ಕಾರಣವನ್ನು ಮುಂದಿಟ್ಟು ಮುಂಬರುವ ಚುನಾವಣೆಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದ್ದಾರೆ. ಅವರೆಲ್ಲ ಕೇಳುವ ಒಂದು ಸಾಮಾನ್ಯ ಪ್ರಶ್ನೆಯೆಂದ...

ಹದಗೆಡದಿರಲಿ `ಆರೋಗ್ಯ' ವ್ಯವಸ್ಥೆ

Image
  ಡಾ . ಆರ್ . ಬಾಲಸುಬ್ರಹ್ಮಣ್ಯಂ ಮೈಸೂರಿನಲ್ಲಿ ನಾನು ವಾಸಿಸುತ್ತಿರುವ ಅಪಾರ್ಟ್ ‌ ಮೆಂಟ್ ‌ ನ ವಾಚ್ ‌ ಮನ್ ಮಗ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ . ಅವನನ್ನು ತೋರಿಸಲು ಒಬ್ಬ ಒಳ್ಳೆಯ ವೈದ್ಯರ ಬಗ್ಗೆ ತಿಳಿಸುವಂತೆ ಆ ವಾಚ್ ‌ ಮನ್ ನನ್ನನ್ನು ಕೇಳಿಕೊಂಡ . ನಾನು ಕೂಡಲೇ , ಮೈಸೂರಿನ ಸರ್ಕಾರಿ ಕೆ . ಆರ್ . ಆಸ್ಪತ್ರೆಯಲ್ಲಿರುವ ನನ್ನ ಪರಿಚಯದ ವೈದ್ಯರ ಬಳಿ ಕರೆದೊಯ್ಯುವಂತೆ ತಿಳಿಸಿದೆ . ಇದರಿಂದ ಅವನಿಗೆ ಅಷ್ಟೇನೂ ಸಮಾಧಾನ ಆದಂತೆ ಕಾಣಲಿಲ್ಲ . ಖಾಸಗಿ ಆಸ್ಪತ್ರೆಯಲ್ಲಿ ಯಾರಾದರೂ ತಿಳಿದವರು ಇದ್ದರೆ ಹೇಳಿ ಎಂದು ಅವನು ಕೋರಿದ . ಕೆಲವು ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳೇ ಉತ್ತಮವಾಗಿರುತ್ತವೆ ಎಂಬ ನನ್ನ ವಿವರಣೆ ಅವನ ಮನಸ್ಸಿಗೆ ನಾಟಲಿಲ್ಲ .  ಇಂತಹ ಉದಾಹರಣೆಗಳು ವಿರಳವೇನಲ್ಲ . ಶಾಲೆ ಇರಲಿ ಅಥವಾ ಆಸ್ಪತ್ರೆಯೇ ಆಗಿರಲಿ ನಾವು ಬಹುತೇಕರು ಸರ್ಕಾರಿ ವ್ಯವಸ್ಥೆಯ ಬಗ್ಗೆ ಈಗ ನಂಬಿಕೆಯನ್ನೇ ಕಳೆದುಕೊಂಡುಬಿಟ್ಟಿದ್ದೇವೆ . ಸರ್ಕಾರಿ ವ್ಯವಸ್ಥೆಯಲ್ಲಿ ಉತ್ತಮ ಗುಣಮಟ್ಟವನ್ನು ನಿರೀಕ್ಷಿಸಲಾಗದು , ಆದರೆ ಖಾಸಗಿ ವ್ಯವಸ್ಥೆಯಲ್ಲಿ ಇಂತಹ ಪರಿಸ್ಥಿತಿ ಇರುವುದಿಲ್ಲ   ಎಂಬ ನಂಬಿಕೆ ನಮ್ಮಲ್ಲಿ ಬೇರೂರಿದೆ . ಹಾಗಿದ್ದರೆ ಎಲ್ಲ ಸಂದರ್ಭದಲ್ಲೂ ನಮ್ಮ ಈ ನಂಬಿಕೆ ನಿಜ ಆಗಿರುತ್ತದೆಯೇ ? ...