ಅಂದು ಮತ ಹಾಕುವ ಮುನ್ನ ಇವನ್ನೆಲ್ಲ ಯೋಚಿಸಿ!
ಚುನಾವಣೆ ಘೋಷಣೆಯಾಗಿದೆ. ನಾವು ಇದನ್ನು 'ಮಹಾಯುದ್ಧ' ಎಂದು ಕರೆದಿದ್ದೇವೆ. ಇದಕ್ಕಿಂತ ಪ್ರಬಲವಾದ, ಎಲ್ಲರಿಗೂ ಅರ್ಥವಾಗುವ ಪದವಿದ್ದಿದ್ದರೆ, ಆ ಹೊತ್ತಿನಲ್ಲಿ ಹೊಳೆದಿದ್ದರೆ ಅದನ್ನೇ ಇಡುತ್ತಿದೆ. World war ಗೆ ನಾವು ಮಹಾಯುದ್ಧ ಎಂದು ಕರೆದಿದ್ದೇವೆ. ಭಾರತದಲ್ಲಿನ ಚುನಾವಣೆ ಅಂದ್ರೆ ಯಾವ ದೃಷ್ಟಿಯಿಂದಲೂ ಅದಕ್ಕಿಂತ ಕಡಿಮೆ ಇರುವುದಿಲ್ಲ. ಇದನ್ನು mother of all battles ಅಂತಾನೂ ಕರೆಯುವುದುಂಟು. ಅದೂ ಸಹ ನಿಜ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಇದರ ವಿರಾಟದರ್ಶನ ವಿಶ್ವಕ್ಕೆ ಮತ್ತೊಮ್ಮೆ ಗೊತ್ತಾಗಲಿದೆ. ಎಲ್ಲ ರಾಜಕೀಯ ಪಕ್ಷಗಳು, ಆ ಪಕ್ಷಗಳ ನೇತಾರರು, ಹುರಿಯಾಳುಗಳು, ಕಾರ್ಯಕರ್ತರು ತೆರೆಮರೆಯಲ್ಲಿ ಈ ಹೋರಾಟಕ್ಕೆ ಮೌನವಾಗಿ ಸಜ್ಜಾಗುತ್ತಿದ್ದಾರೆ. ಈ ದೇಶ ಕಂಡು ಕೇಳರಿಯದ ಮತ್ತೊಂದು ಮಹಾಯುದ್ಧಕ್ಕೆ ನಾವೆಲ್ಲ ಸಾಕ್ಷಿಯಾಗಲಿದ್ದೇವೆ. ಹಾಗಾದರೆ ಈ ಚುನಾವಣೆಯಲ್ಲಿ ನನ್ನ ಪಾತ್ರವೇನು, ನಾನು ಏನು ಮಾಡಬೇಕು, ನನ್ನ ಮುಂದಿರುವ ಸವಾಲುಗಳೇನು, ಆಯ್ಕೆಯೇನು, ಹೊಸ ಸರ್ಕಾರ ರಚನೆಯಲ್ಲಿ ನಾನು ಹೇಗೆ ತೊಡಗಿಸಿಕೊಳ್ಳಬೇಕು. ಈ ಎಲ್ಲ ಪ್ರಶ್ನೆಗಳೂ ನಮ್ಮೆಲ್ಲರ ಮುಂದೆ ಮೂಡಲಾರಂಭಿಸಿವೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ನಾವೆಲ್ಲ ಈ ಚುನಾವಣೆ ಸುಳಿಯಲ್ಲಿ ಸಿಲುಕಿ ತಿರುಗುತ್ತಿರುವ ಈ ಸಂದರ್ಭದಲ್ಲಿ ಇತ್ತೀಚೆಗೆ ನಾನು 'ಫಾರ್ಚೂನ್' ಮ್ಯಾಗಜಿನ್‌ನ ಹಿರಿಯ ಸಂಪಾದಕ ಹಿಂದೋಲ್ ಸೇನಗುಪ್ತಾ...