Posts

Showing posts with the label A.R Manikanta's Articles

ಎಲ್ಲರಿಗೂ ICON ಆಗಬಲ್ಲ 'ಐ ಕ್ಯಾನ್‌' ಪಾಂಡುರಂಗ

- ಎ.ಆರ್.ಮಣಿಕಾಂತ್ ನಮ್ಮ ಕಥಾನಾಯಕನ ಹೆಸರು ಎನ್. ಪಾಂಡುರಂಗರಾವ್. ಮೈಸೂರಿನ ವಿಜಯನಗರ 3ನೇ ಹಂತದಲ್ಲಿರುವ ಈತ 'ಐ ಕ್ಯಾನ್‌' 'ಟೆಕ್ನಾಲಜೀಸ್‌ನ ಸಂಸ್ಥಾಪಕ. ಆ ಕಂಪನಿಯ ಸಿಇಒ. ವಿಶೇಷವೇನು ಗೊತ್ತೆ? ಪಾಂಡು, ಮಗುವಾಗಿದ್ದಾಗಲೇ ಸೆರೆಬ್ರಲ್ ಪಾಲ್ಸಿ ಎಂಬ ಅಂಗವಿಕಲತೆಗೆ ತುತ್ತಾದವರು. ಪರಿಣಾಮವಾಗಿ, ಅವರ ದೇಹದ ಅಂಗಾಂಗಗಳು ಭಾಗಶಃ ಸ್ವಾಧೀನ ಕಳೆದುಕೊಂಡಿವೆ. ಈ ಕಾರಣದಿಂದಾಗಿ ಪಾಂಡು ನಮ್ಮ ನಿಮ್ಮಂತೆ ಸಹಜವಾಗಿ ನಡೆದಾಡುವುದಿಲ್ಲ. ಸಹಜವಾಗಿ ನಗುವುದಿಲ್ಲ. ಸರಾಗವಾಗಿ ಮಾತಾಡಲು ಅವರಿಂದ ಸಾಧ್ಯವಿಲ್ಲ. ನಾಲ್ಕು ಪದಗಳನ್ನು ಉಚ್ಚರಿಸಲು ಆತ ಎರಡು ನಿಮಿಷ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಅವರು ಹೇಳುವುದು ಎದುರು ಕೂತವರಿಗೆ ಅರ್ಥವೇ ಆಗುವುದಿಲ್ಲ. ಆದರೆ, ಕಂಪ್ಯೂಟರ್‌ನ ಮುಂದೆ ಕೂತರೆ ಸಾಕು; ಪಾಂಡುವಿನ ಮುಖ ಅರಳುತ್ತದೆ. ಕೀಬೋರ್ಡ್‌ನ ಮೇಲೆ ಆತನ ಕೈ, ಪಾದರಸದಂತೆ ಹರಿದಾಡುತ್ತದೆ. ಕಂಪ್ಯೂಟರಿನ ಅನಂತ ಸಾಧ್ಯತೆಗಳ ಬಗ್ಗೆ, ತನ್ನ ಕಂಪನಿಯ ಬಗ್ಗೆ, ಇತ್ತೀಚಿನ ಆವಿಷ್ಕಾರಗಳ ಬಗ್ಗೆ ಆತ ವಿವರಿಸುತ್ತಾ ಹೋಗುತ್ತಾರೆ. ಅಷ್ಟೆ ಅಲ್ಲ, ಕಂಪ್ಯೂಟರ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ ಕೇಳಿದರೂ ಕೀಬೋರ್ಡ್‌ನ ಅಕ್ಷರಗಳ ಮೂಲಕ ತಕ್ಷಣವೇ ಉತ್ತರಿಸುತ್ತಾರೆ! ಸೆರೆಬ್ರಲ್ ಪಾಲ್ಸಿಯಂಥ ಅಂಗವೈಕಲ್ಯಕ್ಕೆ ತುತ್ತಾದ ಮಕ್ಕಳು ಕೆಲವು ಸಂದರ್ಭಗಳಲ್ಲಿ ಬದುಕುವುದೇ ಕಷ್ಟ. ವಾಸ್ತವ ಹೀಗಿರುವಾಗ, ಛಲ ಮತ್ತು ಪ್ರಚಂಡ ಆತ್ಮವಿಶ...

ಕಷ್ಟಗಳ ದೀವಾರ್ ಕೆಡವಿ ಸುಖದ ಸೌಧ ಕಟ್ಟಿದ ದತ್ತಾ!

Image
ಭಾವತೀಯನ - ಎ.ಆರ್.ಮಣಿಕಾಂತ್ ಕೇವಲ ಸೆಕೆಂಡ್ ಪಿಯುಸಿ ಓದಿರುವ ಸುದೀಪ್ ದತ್ತಾ, 600 ಎಂಬಿಎ - ಬಿಇ ಪದವೀಧರರಿಗೆ ಕೆಲಸ ನೀಡಿದ್ದಾನೆ... ಇದು 1989ರ ಮಾತು. ಕೋಲ್ಕತಾ ಸಮೀಪದ ಹಳ್ಳಿಯವನಾದ ಸುದೀಪ್ ದತ್ತಾ ಎಂಬ 17 ವರ್ಷದ ಹುಡುಗ, ಪುಟ್ಟ ಲಗೇಜಿನೊಂದಿಗೆ ರೈಲು ಹತ್ತಿ ಮುಂಬಯಿಗೆ ಬಂದ. ಹೊಟ್ಟೆಪಾಡಿಗೆ ಯಾವುದಾದರೂ ಕೆಲಸ ಹುಡುಕುವುದು ಅವನ ಉದ್ದೇಶವಾಗಿತ್ತು. ಮುಂಬಯಿಯಲ್ಲಿ ಅವನಿಗೆ ಸ್ನೇಹಿತರಿರಲಿಲ್ಲ. ಬಂಧುಗಳಿರಲಿಲ್ಲ. ಗಾಡ್‌ಫಾದರ್‌ಗಳೂ ಇರಲಿಲ್ಲ. ಹಾಗಾಗಿ, ಮೊದಲ ಎರಡು ವರ್ಷ ಥೇಟ್ ಭಿಕ್ಷುಕರ ಥರಾ ಬದುಕಿಬಿಟ್ಟ. ಬಾಡಿಗೆ ಮನೆ ಮಾಡುವಂಥ ಆರ್ಥಿಕ ಚೈತನ್ಯವಿಲ್ಲದ ಕಾರಣದಿಂದ, ತಾನು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯ ಒಂದು ಮೂಲೆಯಲ್ಲಿ ಮಲಗುತ್ತಿದ್ದ. ಸಂಬಳದ ಹಣ ಬೇಗನೇ ಮುಗಿದು ಹೋದಾಗ, ನೀರು ಕುಡಿದೇ ಹೊಟ್ಟೆ ತುಂಬಿಸಿಕೊಂಡ. ಅಂಥವನು ಇವತ್ತು, ಅದೇ ಮುಂಬಯಿಯಲ್ಲಿ, ವರ್ಷಕ್ಕೆ 1000 ಕೋಟಿ ರೂ. ವಹಿವಾಟು ನಡೆಸುವ ಕಂಪನಿಯೊಂದರ 'ಬಾಸ್‌' ಆಗಿದ್ದಾನೆ. ದೇಶದ ಅತಿ ಹೆಚ್ಚು ಶ್ರೀಮಂತರ ಪಟ್ಟಿಯಲ್ಲಿ ಜಾಗ ಪಡೆದುಕೊಂಡಿದ್ದಾನೆ. ನಂಬೋದೇ ಕಷ್ಟ ಎಂಬಂತಿರುವ ತಮ್ಮ ಬದುಕಿನ ಸಕ್ಸಸ್ ಸ್ಟೋರಿಯನ್ನು ಸದ್ಯ ಹಾಂಕಾಂಗ್ ಪ್ರವಾಸದಲ್ಲಿರುವ ಸುದೀಪ್ ದತ್ತಾ ಅವರೇ ವಿವರಿಸಿದ್ದು ಹೀಗೆ: ಕೋಲ್ಕೊತಾಗೆ ಹತ್ತಿರವಿರುವ ದುರ್ಗಾಪುರ ನನ್ನ ಹುಟ್ಟೂರು. ಅಲ್ಲಿನ ಹಿಂದೂಸ್ತಾನ್ ಫರ್ಟಿಲೈಸರ್ ಕಂಪನಿಯಲ್ಲಿ ನಮ್ಮ ತಂದೆ ಸೆಕ್ಯೂರಿಟಿ ಗಾ...

ನೀರು, ಬೆಳಕು, ಗಾಳಿಗಿಲ್ಲದ ಜಾತಿ ನಮಗೇಕೆಂದ ಹ್ಯಾಲಿ

ಭಾವತೀರಯಾನ - ಎ.ಆರ್.ಮಣಿಕಾಂತ್ 1940- 50ರ ದಶಕದಲ್ಲಿ ಇಂಗ್ಲೆಂಡ್-ಅಮೆರಿಕ ಸೇರಿದಂತೆ ಎಲ್ಲ ಯುರೋಪ್ ರಾಷ್ಟ್ರಗಳಲ್ಲಿಯೂ ವರ್ಣಬೇಧ ನೀತಿ ಒಂದು ಆಚರಣೆಯಂತೆಯೇ ಜಾರಿಯಲ್ಲಿತ್ತು. ನಾವೇ ಶ್ರೇಷ್ಠರು ಎಂಬ ಭಾವನೆ ಬಹುಪಾಲು ಬಿಳಿಯರಿಗಿತ್ತು. ಕರಿಯ ಮೈಬಣ್ಣದ ಜನ ಬಿಳಿಯರ ಸೇವೆ ಮಾಡಲೆಂದೇ ಹುಟ್ಟಿದವರು ಎಂದು ಹೆಚ್ಚಿನ ಬಿಳಿಯರು ನಂಬಿದ್ದರು. ಹಾಗಂತಲೇ ವಾದಿಸುತ್ತಿದ್ದರು. ಕರಿಯ ಜನಾಂಗದ ವಿದ್ಯಾರ್ಥಿಗಳು ಶಾಲೆಗೆ ಹೋದರೆ, ಅವರ ಮೇಲೆ ಹಲ್ಲೆ ಮಾಡುತ್ತಿದ್ದರು, ಹೆದರಿಸುತ್ತಿದ್ದರು. ಹೀಯಾಳಿಸುತ್ತಿದ್ದರು. ಹಿಂಸಿಸುತ್ತಿದ್ದರು. ವರ್ಣಬೇಧ ನೀತಿಯನ್ನು ಆಚರಿಸುವಂತಿಲ್ಲ ಎಂಬ ಕಾನೂನು ಕಾಗದದ ಮೇಲೆ ಮಾತ್ರ ಜಾರಿಯಲ್ಲಿತ್ತು. ಬಿಳಿಯ ವಿದ್ಯಾರ್ಥಿಗಳ ದಬ್ಬಾಳಿಕೆ ತಡೆಯಲಾಗದೆ, ಕರಿಯ ಜನಾಂಗದ ಅದೆಷ್ಟೋ ವಿದ್ಯಾರ್ಥಿಗಳು ಅರ್ಧಕ್ಕೇ ಶಾಲೆ ಬಿಟ್ಟರು. ದೈಹಿಕ ಹಲ್ಲೆಯ ಕಾರಣದಿಂದ ಹಲವರು ಅಂಗವಿಕಲರಾದರು. ತಿರುಗಿ ಬಿದ್ದ ಕೆಲವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಜೈಲಿಗೆ ತಳ್ಳಲಾಯಿತು. ಪರಿಸ್ಥಿತಿ ಹೀಗಿದ್ದಾಗಲೇ ಜಾರ್ಜ್ ಹ್ಯಾಲಿ ಎಂಬ ನೀಗ್ರೋ ಯುವಕ, ಬಿಳಿಯರ ಎಲ್ಲ ಕಿರುಕುಳವನ್ನು ಸಹಿಸಿಕೊಂಡು ಕಾನೂನು ಪದವಿ ಓದಿದ. ಮುಂದೆ ಅಮೆರಿಕದ ಸರ್ಕಾರದಲ್ಲಿ ಅತ್ಯಂತ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ. ರಿಚರ್ಡ್ ನಿಕ್ಸನ್‌ನಿಂದ ಆರಂಭಿಸಿ, ಬಿಲ್ ಕ್ಲಿಂಟನ್‌ವರೆಗೆ ಎಲ್ಲ ಅಧ್ಯಕ್ಷರ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದ. ವಿದ್ಯಾರ್ಥಿ ಜೀವನದಲ್ಲಿ ಆತ...

ಶಾಂತಿಗಾಗಿ ಹಂಬಲಿಸಿದ; ಅಶಾಂತಿಯೇ ಬದುಕಾಯಿತು!

ಭಾವತೀರಯಾನ - ಎ.ಆರ್.ಮಣಿಕಾಂತ್ ಶ್ರೀಮಂತಿಕೆಯೊಂದಿದ್ದರೆ ಸಾಕು; ಅದರಿಂದ ನಾವು ಬಯಸಿದ್ದನ್ನೆಲ್ಲ ಪಡೆಯಬಹುದು, ಖರೀದಿಸಬಹುದು, ಗೆಲ್ಲಬಹುದು! ಬಯಸಿದ್ದೆಲ್ಲ ಸಿಕ್ಕಿದ ಮೇಲೆ ಇನ್ನೇನಿದೆ? ಆನಂತರದ ದಿನಗಳಲ್ಲಿ ಸಂಭ್ರಮವೆಂಬುದು ನಮ್ಮ ಬದುಕಾಗುತ್ತದೆ. ನೆಮ್ಮದಿ ಕೈ ಹಿಡಿಯುತ್ತದೆ. ಕೈ ತುಂಬ ಕಾಸಿದೆ ಎಂಬ ಕಾರಣದಿಂದಲೇ ಬಯಸಿದಂಥ ಮನೆ ಮಾತ್ರವಲ್ಲ, ಮನೆಯೊಡತಿ ಕೂಡ ಸಿಕ್ಕುತ್ತಾಳೆ. 'ಹಣವಂತ' ಎಂಬ ಕಾರಣದಿಂದಲೇ ಸಮಾಜದಲ್ಲಿ ಗೌರವ ಸಿಗುತ್ತದೆ. ಬಂಧುಗಳು-ಸ್ನೇಹಿತರ ಸಂಖ್ಯೆ ಸಾವಿರವಾಗುತ್ತದೆ. ಅಲ್ಲಲ್ಲಿ, ಅಭಿಮಾನಿಗಳೂ ಹುಟ್ಟಿಕೊಳ್ಳುತ್ತಾರೆ. ಅಷ್ಟೇ ಅಲ್ಲ; ಶ್ರೀಮಂತ ಅನ್ನಿಸಿಕೊಂಡವನನ್ನು, ಆತ ಮಧ್ಯವಯಸ್ಸು ತಲುಪಿದ ನಂತರವೂ ಪ್ರೀತಿಸುವ, ಆರಾಧಿಸುವ, ಆಸೆ ಪಡುವ, ಅವನ ಒಂದೇ ಒಂದು ಅಪ್ಪುಗೆಗಾಗಿ, ಆಲಿಂಗನಕ್ಕಾಗಿ ಕಾತರಿಸುವ ಹೆಣ್ಣುಗಳ ಹಿಂಡೇ ಇರುತ್ತದೆ. ಅದಕ್ಕೆ ಹೇಳೋದು: ಶ್ರೀಮಂತಿಕೆ ಎಂಬುದು ಜೊತೆಗಿದ್ದರೆ, ಸುಖದ ಬದುಕು ನಮ್ಮದಾಗುತ್ತದೆ!' ಇಂಥದೊಂದು ನಂಬಿಕೆ ಹಲವರಿಗಿದೆ. ಆದರೆ, ವಾಸ್ತವ ಏನೆಂದರೆ- ದುಡ್ಡಿದೆ ಎಂದ ಮಾತ್ರಕ್ಕೆ ಅದರಿಂದ ನೆಮ್ಮದಿಯನ್ನಾಗಲಿ, ಸಂತೋಷವನ್ನಾಗಲಿ, ಬಯಸಿದಂಥ ಹೆಂಡತಿಯನ್ನಾಗಲಿ (ಗಂಡನನ್ನಾಗಲಿ) ಪಡೆಯಲು ಸಾಧ್ಯವೇ ಇಲ್ಲ. ಈ ಮಾತಿಗೆ ಸಾಕ್ಷಿಯಾಗಿ, ಆಲ್‌ಫ್ರೆಡ್ ನೊಬೆಲ್‌ನ ಬದುಕಿನ ಕಥೆಯಿದೆ. ತನ್ನ ಜೀವಿತಾವಧಿಯ ಸಾಧನೆಗಾಗಿ ವ್ಯಕ್ತಿಯೊಬ್ಬ ಪಡೆಯಬಹುದಾದ ಸರ್ವಶ್ರೇಷ್ಠ ಪ್ರಶಸ...

ಕಷ್ಟ ಬಂದಾಗ ಆಕೆ ಬಾಗಲಿಲ್ಲ, ಬಾಳಿ ತೋರಿಸಿದಳು!

ಕಷ್ಟ ಬಂದಾಗ ಆಕೆ ಬಾಗಲಿಲ್ಲ, ಬಾಳಿ ತೋರಿಸಿದಳು! ಭಾವತೀರಯಾನ - ಎ.ಆರ್.ಮಣಿಕಾಂತ್ ಕಷ್ಟಗಳು, ಬೇಡುವುದನ್ನು ಮಾತ್ರವಲ್ಲ, ಬಾಳುವುದನ್ನೂ ಕಲಿಸುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ ಪಟ್ರೇಸಿಯಾ ನಾರಾಯಣ್ ಎಂಬ ಹೆಣ್ಣು ಮಗಳ ಯಶೋಗಾಥೆ ಇಲ್ಲಿದೆ. ಅದನ್ನೂ ಆಕೆಯ ಮಾತುಗಳಲ್ಲೇ ಕೇಳೋಣ: 'ನಿಜ ಹೇಳಬೇಕೆಂದರೆ ನನ್ನ ಬದುಕೇ ಆಕಸ್ಮಿಕಗಳ ಸರಮಾಲೆ. ಗೃಹಿಣಿಯಾಗಿ ಜೀವನ ನಡೆಸಬೇಕು ಎಂಬುದಷ್ಟೇ ನನ್ನ ಆಸೆಯಾಗಿತ್ತು. ಆದರೆ ಗಂಡ ಅನ್ನಿಸಿಕೊಂಡಾತ ನನ್ನ ಪಾಲಿಗೆ ಒಂದು ಶಾಪವಾದ. ಆತ ತನ್ನ ಜವಾಬ್ದಾರಿ ಮರೆತ. ಹೊಡೆದು ಬಡಿದು ಚಿತ್ರಹಿಂಸೆ ನೀಡಿದ. ಬಿಟ್ಟೂ ಬಿಡದೆ ಕಾಡಿದ. ಈ ಮಧ್ಯೆಯೇ ಇಬ್ಬರು ಮಕ್ಕಳಾದರು. ಆನಂತರವಾದರೂ ಗಂಡ ಬದಲಾಗಲಿಲ್ಲ.  ಪರಿಣಾಮ, ಹೊಟ್ಟೆಪಾಡಿನ ಕಾರಣಕ್ಕೆ ನಾನು ದುಡಿಯಲು ನಿಂತೆ. ಮೊದಲ ದಿನ ಸಂಪಾದಿಸಿದ್ದು ಕೇವಲ 50 ಪೈಸೆ. ಆದರೆ ಈಗ ದಿನಕ್ಕೆ ಎರಡೂವರೆ ಲಕ್ಷ ಸಂಪಾದಿಸ್ತಾ ಇದೀನಿ. 30 ವರ್ಷಗಳ ಹಿಂದೆ ಒಂದು ತಳ್ಳುಗಾಡಿಯ ಮೊಬೈಲ್ ಕ್ಯಾಂಟೀನ್ ಹೊಂದಿದ್ದವಳು, ಈಗ 14 ಎ.ಸಿ. ಹೋಟೆಲುಗಳ ಮಾಲೀಕಳಾಗಿದೀನಿ. ಒಮ್ಮೆ ಹಿಂತಿರುಗಿ ನೋಡಿದ್ರೆ ನಡೆದಿರುವುದೆಲ್ಲಾ ನಂಬಲಾಗದಂಥ ಪವಾಡ ಅನ್ನಿಸ್ತಿದೆ... ನಮ್ಮದು ಸಂಪ್ರದಾಯಸ್ತ ಕ್ರಿಶ್ಚಿಯನ್ ಕುಟುಂಬ. ಅಪ್ಪನಿಗೆ ಅಂಚೆ ಮತ್ತು ತಂತಿ ಇಲಾಖೆಯಲ್ಲಿ, ಅಮ್ಮನಿಗೆ ದೂರವಾಣಿ ಇಲಾಖೆಯಲ್ಲಿ ನೌಕರಿಯಿತ್ತು. ನನಗೆ ಇಬ್ಬರು ಸೋದರರು. ಚೆನ್ನೈನ ಮರೀನಾ ಬೀಚ್‌ಗೆ ಹತ್ತಿರದಲ್ಲೇ ನಮ್...