ಜನಕೇಂದ್ರಿತ ರಾಜಕೀಯ; ಜನರದೇ ಕರ್ತವ್ಯ
ಹೊಸ ಕನಸು | ಡಾ.ಆರ್.ಬಾಲಸುಬ್ರಹ್ಮಣ್ಯಂ ನಮ್ಮ ಸುತ್ತಮುತ್ತ ಅಪಾರ ರಾಜಕೀಯ ವಿದ್ಯಮಾನಗಳು ನಡೆಯುತ್ತಿವೆ . ಅಮೆರಿಕದಲ್ಲಿ ಕಳೆದ 18 ತಿಂಗಳಿನಿಂದ ಶ್ವೇತಭವನದ ಗದ್ದುಗೆಗಾಗಿ ನಡೆದ ಚುನಾವಣಾ ಸಮರ , ಅಧ್ಯಕ್ಷ ಬರಾಕ್ ಒಬಾಮ ಅವರ ಮರು ಆಯ್ಕೆಯೊಂದಿಗೆ ಇತ್ತೀಚೆಗಷ್ಟೇ ಕೊನೆಗೊಂಡಿದೆ . ಅಲ್ಲಿ ಹಾದಿ ಬದಿಯಿಂದ ಹಿಡಿದು ಪ್ರಮುಖ ಟಿ . ವಿ ವಾಹಿನಿಗಳವರೆಗೆ ಸಾಕಷ್ಟು ಚರ್ಚೆ ಮತ್ತು ಸಂವಾದಗಳು ನಡೆದದ್ದನ್ನು ನಾವು ಕಂಡೆವು . ಅವರೆಲ್ಲರೂ ಗೆಲುವಿನ ಬಗ್ಗೆ ಭವಿಷ್ಯ ನುಡಿಯುತ್ತಿದ್ದರಾದರೂ ಇದ್ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣದ ಮತದಾರರು ಮಾತ್ರ ಒಬಾಮ ಅವರನ್ನು ಮರಳಿ ಶ್ವೇತಭವನದಲ್ಲಿ ಕೂರಿಸುವ ತೀರ್ಮಾನ ಕೈಗೊಂಡರು . ನಮ್ಮ ದೇಶದಲ್ಲಿ ನಾವೂ ನಮ್ಮದೇ ಆದ ರಾಜಕೀಯ , ರಾಜಕಾರ...