Posts

Showing posts from February, 2012

ನೋವು ಕ್ಷಣಿಕ, ಶರಣಾಗತಿ ಕೊನೆತನಕ!

Image
Yuvi, I want you to know that the entire LIVESTRONG team is here for you. We say it all the time, and truly believe in it: Knowledge is Power, Unity is Strength, and Attitude is Everything. Please know that we are here to help you and your family in any way possible. Go Yuvi!! Livestrong! ವಿಶ್ವವಿಖ್ಯಾತ ಸೈಕ್ಲಿಂಗ್ ಚಾಂಪಿಯನ್ ಲ್ಯಾನ್ಸ್ ಆರ್ಮ್್ಸ್ಟ್ರಾಂಗ್ ಕಳುಹಿಸಿರುವ ಈ ಸಂದೇಶವನ್ನು ನಮ್ಮ ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ತಮ್ಮ ಟ್ವಿಟ್ಟರ್ ಪುಟದ ಮೇಲೆ ಹಾಕಿಕೊಂಡಿ ದ್ದಾರೆ. ‘ @lancearmstrong makes me feel better! Thank you lance means a lot hope we can meet’  ಎಂದು ತಮ್ಮ ಧನ್ಯತೆಯನ್ನೂ ವ್ಯಕ್ತಪಡಿಸಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್್ಗೆ ತುತ್ತಾಗಿರುವ ಯುವರಾಜ್ ಸಿಂಗ್ ಅಮೆರಿಕದ ಬೋಸ್ಟನ್್ನಲ್ಲಿ ಕೀಮೋಥೆರಪಿಗೆ ಒಳಗಾಗಿದ್ದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಮತ್ತಾರೂ ಅಲ್ಲ, ಸೈಕ್ಲಿಂಗ್್ನಲ್ಲಿ ಸತತ 7 ಬಾರಿ ಪ್ರತಿಷ್ಠಿತ ‘ಟೂರ್ ಡಿ ಫ್ರಾನ್ಸ್್’ ಗೆದ್ದಿರುವ ಅಮೆರಿಕದ ಲ್ಯಾನ್ಸ್ ಆರ್ಮ್್ಸ್ಟ್ರಾಂಗ್ ಅವರನ್ನು ಗುಣಪಡಿಸಿದ ಡಾ. ಲಾರೆನ್ಸ್. ಆಸ್ಪತ್ರೆಯ ಹಾಸಿಗೆಯ ಮೇಲೆ ಕುಳಿತಿರುವ ಯುವಿ, ಕ್ಯಾನ್ಸರ್ ವಿರುದ್ಧದ ತಮ್ಮ ಹೋರಾಟಕ್ಕೆ ಪ್ರೇರಣೆ ಮತ್ತು ಆತ್ಮಸ್ಥೈರ್ಯ ಪಡೆದುಕೊಳ್ಳಲು ಕೈಯಲ್ಲಿ ಹಿಡಿದುಕೊಂಡಿದ್ದಾರೆ- “It’...

ಜನಸೇವೆಗೆ ರಾಜಕೀಯವೇ ಬೇಕಾಗಿಲ್ಲ, ಹೀಗೂ ಮಾಡಬಹುದು!

Image
ಬಿಹಾರ, ಪಾಟ್ನಾ! ಹೀಗೆಂದ ತಕ್ಷಣ ನಮ್ಮ ಕಣ್ಮುಂದೆ ಲಾಲೂ ಪ್ರಸಾದ್ ಯಾದವ್, ರಾಬ್ಡಿದೇವಿಯ ಚಿತ್ರಗಳು ಬಂದು ನಿಲ್ಲುತ್ತವೆ. ಅದರ ಹಿಂದೆಯೇ, ಬಿಹಾರದ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿರುವ ಕಳ್ಳರು, ಸುಳ್ಳರು, ಕೊಲೆಗಡುಕರು, ಕ್ರಿಮಿನಲ್‌ಗಳ ಮುಖಗಳೂ ಮೆರವಣಿಗೆ ಹೊರಡುತ್ತವೆ. ಇದೇ ಕಾರಣಕ್ಕೆ ಬಿಹಾರವನ್ನು ‘ಗೂಂಡಾರಾಜ್ಯ’ ಎಂದು ಕರೆಯುವ ಪರಿಪಾಠವೂ ಇದೆ. ಬಿಹಾರ ಅಂದ್ರೆ ಎಲ್ಲ ಅಕ್ರಮ, ಅವ್ಯವಹಾರಗಳಿಗೆ ಪರ್ಯಾಯ ಪದವೆನ್ನುವಂತಾಗಿದೆ. ಆದರೆ, ಈಗ ಅದೇ ಪಾಟ್ನಾದಿಂದ ದೇವರಂಥ ವ್ಯಕ್ತಿಯೊಬ್ಬ ಎದ್ದು ಬಂದಿದ್ದಾನೆ. ಅವನ ಹೆಸರು ಆನಂದಕುಮಾರ್. ಇವತ್ತು ಪಾಟ್ನಾದ ಬಸ್‌ನಿಲ್ದಾಣ ಅಥವಾ ರೈಲು ನಿಲ್ದಾಣದಲ್ಲಿ ನಿಂತು- ನಾಲ್ಕು ಮಂದಿಯ ಮುಂದೆ ಆನಂದಕುಮಾರ್ ಅಂದು ನೋಡಿ; ಜನ ಕಣ್ಣರಳಿಸುತ್ತಾರೆ. ನಿಂತಲ್ಲೇ ಕೈಮುಗಿಯುತ್ತಾರೆ. ‘ಓಹ್, ನಿಮ್ಗೆ ಮೇಷ್ಟ್ರು ಬೇಕಿತ್ತಾ’ ಎನ್ನುತ್ತಾರೆ. ಮರುಕ್ಷಣದಲ್ಲೇ ಈ ಆನಂದಕುಮಾರ್ ಅವರ ವಿಳಾಸವನ್ನು ಹೇಳುತ್ತಾರೆ. ಆನಂತರವೂ ಒಂದೆರಡು ನಿಮಿಷ ಅಲ್ಲಿಯೇ ನಿಂತರೆ- ಆನಂದಕುಮಾರ್ ಅವರನ್ನು ಹೊಗಳುತ್ತ ಹೊಗಳುತ್ತಾ ಮೈಮರೆಯುತ್ತಾರೆ. ಸ್ವಾರಸ್ಯವೇನೆಂದರೆ- ಹೀಗೆ ಎಲ್ಲರಿಂದಲೂ ಹೊಗಳಿಸಿಕೊಳ್ಳುವ ಆನಂದಕುಮಾರ್ ರಾಜಕಾರಣಿಯಲ್ಲ. ಹಣವಂತನಲ್ಲ. ಯೋಗ ಗುರುವಲ್ಲ. ಚಿತ್ರನಟನಲ್ಲ. ರಾಬ್ಡಿದೇವಿಯ ಮಾವನಲ್ಲ. ಲಾಲೂ ಪ್ರಸಾದನಿಗೂ ಅವನಿಗೂ ಸಂಬಂಧವಿಲ್ಲ. ನಿತೀಶ್‌ಕುಮಾರನ ನೆಂಟನೂ ಅಲ್ಲ.  ಅಸಲಿಗೆ, ರಾಜಕೀಯದ ನೆರಳನ್ನು ಆತ ತನ್ನೆ...

ಇಸ್ರೇಲ್ ಎಂಬ ಅದ್ಭುತ ‘ಮರುಳು’ ಭೂಮಿ!

Image
ನನಗಂತೂ ನಂಬಿಕೆ ಬರಲಿಲ್ಲ. ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಕೇಳಿದ್ದು ನಿಜ. ಆದರೆ ಸ್ವತಃ ಅಲ್ಲಿಗೆ ಹೋಗಿ ನೋಡಿದರೂ ನಂಬಿಕೆ ಬರುತ್ತಿಲ್ಲ. ಜೋರ್ಡಾನ್ ರಾಜಧಾನಿ ಅಮ್ಮಾನ್್ನಿಂದ ಡೆಡ್ ಸೀ (ಮೃತ ಸಮುದ್ರ) ಮಾರ್ಗವಾಗಿ, ರಸ್ತೆ ಮೂಲಕ ಇಸ್ರೇಲ್ ಗಡಿಯನ್ನು ದಾಟುತ್ತಿದ್ದರೆ, ಕಣ್ಣಿನ ಜೀಕು ಹಾಯುವ ತನಕ ಬರೀ ಮರಳುಗಾಡು. ದುರ್ಬೀನು ಹಿಡಿದು ಹುಡುಕಿದರೂ ಒಂದು ಮರವಾಗಲಿ, ಹಸಿರು ಎಂಬ ವಸ್ತುವಾಗಲಿ ಕಾಣ ಸಿಗುವುದಿಲ್ಲ. ಎಲ್ಲೆಡೆ ನಿರುಪಯುಕ್ತ ಮಣ್ಣು. ಹನಿ ನೀರಿನ ಲವಲೇಶವೂ ಇಲ್ಲದ ನಿರ್ದಯಿ ಭೂಮಿ. ಮುಗಿಲು ಮುಟ್ಟುವ ಮರುಭೂಮಿ. ದಾರಿ ಸಾಗಿದ್ದೇ ತಿಳಿಯದ ಆ ಮರುಳುಗಾಡಿನಲ್ಲಿ ಹಸಿರು ಎಂಬ ಪದದ ಅರ್ಥವೂ ಆಗುವುದಿಲ್ಲ. ಊಹಿಸಿಕೊಳ್ಳಲೂ ಆಗುವುದಿಲ್ಲ. ಎರಡು ಗಂಟೆ ಪ್ರಯಾಣದ ಬಳಿಕ, ಹತ್ತಿರ ಹತ್ತಿರ ಜೆರುಸಲೆಮ್್ಗೆ ಬರುವ ತನಕವೂ ಇದೇ ದೃಶ್ಯ. ಇಸ್ರೇಲ್್ನ ಸಾಹಸ, ಪರಾಕ್ರಮ, ವೈರಿಗಳನ್ನು ಮಟ್ಟ ಹಾಕುವ ರೀತಿ, ಭಯೋತ್ಪಾದನೆ ವಿರುದ್ಧ ಸೆಣಸುವ ಛಲ, ನಾಲ್ಕೂ ದಿಕ್ಕಿಗೆ ವೈರಿಗಳನ್ನು ಕಟ್ಟಿಕೊಂಡರೂ ಸದಾ ಅವರಿಗೇ ಸಿಂಹಸ್ವಪ್ನವಾಗಿರುವ ಇಸ್ರೇಲ್ ಕಥೆಗಳನ್ನು ಕೇಳಿದ್ದರೂ, ಕೃಷಿ ರಂಗದಲ್ಲೂ ಇದು ಜಗತ್ತಿನಲ್ಲಿಯೇ ಮುಂದುವರಿದ ದೇಶ ಎಂಬುದನ್ನು ಅಲ್ಲಿಗೆ ಹೋದ ಬಳಿಕವೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸುಮಾರು ನಾನೂರು- ಐನೂರು ಕಿಮಿ ಓಡಾಡಿದರೂ ಹಸಿರೇ ಕಾಣದ ದೇಶ, ಬುರುಡೆ ಬರಡುಭೂಮಿ ಹೊಂದಿರುವ ದೇಶ, ಕೃಷಿಯಲ್ಲೂ ಅಗಾಧ ಸಾಧನೆ ಮಾಡಿದೆ ಅಂದ್ರೆ ನಂಬ...

THE RIGHT OF CHILDREN TO FREE AND COMPULSORY EDUCATION ACT,2009

Image
Note: 1 st draft copy of translation for corrections and observations (25 th Oct. 2009). You are free to make corrections and bring it to our notice. crtindia@yahoo.co.in   REGISTERED NO.DL (N) 04 / 0007 / 2003-09 ¨sÁgÀvÀzÀ gÁd¥ÀvÀæ  The Gazette of India C¸ÁzsÁgÀt EXTRAODINARY [1] ¨sÁUÀ / PART II – RAqÀ / Section I ¥Áæ¢üPÁgÀ¢AzÀ ¥ÀæPÀnvÀ / PUBLISHED BY AUTHORITY   PÀæªÀÄ ¸ÀASÉå / No.39          £ÀªÀzɺÀ°, UÀÄgÀĪÁgÀ, DUÀ¸ïÖ 27 29 /¨sÁzÀæ, 1931 NEW DELHI , THURSDAY, AUGUST 27, 2009 / BHADRA 5, 1931   MINISTRY OF LAW AND JUSTICE PÁ£ÀÆ£ÀÄ ªÀÄvÀÄÛ £ÁåAiÀÄ ªÀÄAvÁæ®AiÀÄ (Legislative Department / ±Á¸À£À «¨sÁUÀ ) New Delhi, the 27 th August ,2009 / Bhadra 5, 1931( Saka )/ £ÀªÀzɺÀ°, UÀÄgÀĪÁgÀ, DUÀ¸ïÖ 27 29 /¨sÁzÀæ, 1931 (±ÀPÀ) The following Act of Parliament received the assent of the president on the 26 th August, 2009 and is hereby published for general information. ...