ಸೇಲ್ ಡೀಡ್ ಹೀಗಿರಲಿ


ಸೇಲ್ ಡೀಡ್ ಅಥವಾ ಮಾರಾಟ ಒಪ್ಪಂದ ಪ್ರಾಪರ್ಟಿ ಖರೀದಿಯಲ್ಲಿ ಮಹತ್ವದ ದಾಖಲೆ. ಆದ್ದರಿಂದ ಅದನ್ನು ಸಿದ್ಧಪಡಿಸುವಾಗ ಹತ್ತು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದರ ವಿವರ ಇಲ್ಲಿದೆ.
   
ಸೇಲ್ ಡೀಡ್ ಅಥವಾ ಮಾರಾಟ ಒಪ್ಪಂದ ಪ್ರಾಪರ್ಟಿ ಖರೀದಿಯಲ್ಲಿ ಮಹತ್ವದ ದಾಖಲೆ. ಆದ್ದರಿಂದ ಅದನ್ನು ಸಿದ್ಧಪಡಿಸುವಾಗ ಹತ್ತು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದರ ವಿವರ ಇಲ್ಲಿದೆ.

ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಆಸ್ತಿ ವರ್ಗಾವಣೆ ಮಾಡುವಾಗ ಕನ್‌ವೇಯನ್ಸ್ ಡೀಡ್ ಮಾಡಿಕೊಳ್ಳುತ್ತಾರೆ. ಅದೇ ರೀತಿ ಮಾರಾಟ ಮಾಡುವಾಗ ಅಂದರೆ ನಿಗದಿತ ಹಣ ನೀಡಿ ಮಾಲೀಕತ್ವ ವರ್ಗಾವಣೆ ಮಾಡಿಸಿಕೊಳ್ಳುವಾಗ ಇಬ್ಬರ ಮಧ್ಯೆ ಮಾರಾಟದ ಕುರಿತು ಒಪ್ಪಂದವಾಗಬೇಕಾಗುತ್ತದೆ. ಇದನ್ನು ಸೇಲ್ ಡೀಡ್ ಎಂದು ಕರೆಯುತ್ತಾರೆ. ದಾಖಲೆಗಳ ನೋಂದಣಿ ಮೂಲಕ ಇಂತಹ ವರ್ಗಾವಣೆ ಮಾಡಲಾಗುತ್ತದೆ. ಅಂದರೆ ತಾನು ಮಾರಾಟ ಮಾಡಿದ ಪ್ರಾಪರ್ಟಿಯನ್ನು ಖರೀದಿದಾರ ಕಾನೂನು ಪ್ರಕಾರ ಸ್ವಾಧೀನ ಮಾಡಿಕೊಳ್ಳಲು ಮಾಡಿಕೊಂಡ ಒಪ್ಪಂದ ಇದಾಗಿರುತ್ತದೆ. ಕನ್ವೇಯನ್ಸ್ ಡೀಡ್‌ಗೆ ಮೊದಲು ಸೇಲ್ ಡೀಡ್ ಮಾಡಬೇಕಾಗುತ್ತದೆ. ಇದು ಯಾರ ಹೆಸರಿನಲ್ಲಿ ಕನ್ವೇಯನ್ಸ್ ಡೀಡ್ ಮಾಡಿಕೊಳ್ಳುತ್ತೇವೆಯೋ ಅವರ ಹೆಸರಿನಲ್ಲಿ ಕಾನೂನು ಪ್ರಕಾರ ಬರೆದ ದಾಖಲೆ ಇದಾಗಿರುತ್ತದೆ. 
ಇದನ್ನು ನಾನ್-ಜ್ಯುಡಿಷಿಯಲ್ ಸ್ಟಾಂಪ್ ಪೇಪರ್‌ನಲ್ಲಿ ಬರೆಯಲಾಗುತ್ತದೆ ಹಾಗೂ ಇಬ್ಬರೂ ಅದಕ್ಕೆ ಸಹಿ ಮಾಡಬೇಕಾಗುತ್ತದೆ. ಇದಕ್ಕೆ ಕಾನೂನು ಮೌಲ್ಯವಿದ್ದು, ಸಮಸ್ಯೆ ಎದುರಾದರೆ ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಇದನ್ನು ಹಾಜರು ಪಡಿಸಲು ಸಾಧ್ಯವಿದೆ.
ಸೇಲ್ ಡೀಡ್‌ನಲ್ಲಿ ಸ್ಪಷ್ಟವಾಗಿ ಇದು ಯಾರಿಬ್ಬರ ನಡುವಿನ ಸೇಲ್ ಡೀಡ್ ಎಂದು ಉಲ್ಲೇಖಿಸಬೇಕಾಗುತ್ತದೆ. ಖರೀದಿದಾರ ಮತ್ತು ಮಾರಾಟಗಾರನ ಹೆಸರು, ವಿಳಾಸ, ಪ್ರಾಪರ್ಟಿಯ ವಿವರ, ಮಾಲೀಕತ್ವ ನಡೆದು ಬಂದ ದಾರಿ, ನೀಡಬೇಕಾದ ಮೊತ್ತ ಹೀಗೆ ಎಲ್ಲಾ ಅಂಶಗಳು ಇಲ್ಲಿ ಸ್ಪಷ್ಟವಾಗಿರಬೇಕಾಗುತ್ತದೆ. ಜೊತೆಗೆ ಹಣ ನೀಡುವ ರೀತಿ ಮತ್ತು ಕಂತಿನಲ್ಲಿ ಪಾವತಿಸುವುದಿದ್ದರೆ ಅದರ ವಿವರ, ಗೃಹ ಸಾಲವಾದರೆ ಅದರ ವಿವರ ಕೂಡ ಇದರಲ್ಲಿರಬೇಕು. ಇದಕ್ಕೆ ಇಬ್ಬರೂ ಸಮ್ಮತಿ ಸೂಚಿಸಿ ಸಹಿ ಮಾಡಬೇಕು ಇಲ್ಲವಾದರೆ ಅದಕ್ಕೆ ಮಾನ್ಯತೆ ಇರುವುದಿಲ್ಲ.

ಸೇಲ್ ಡೀಡ್‌ನಲ್ಲಿ ಪ್ರಾಪರ್ಟಿಯ ಸರ್ವೆ ನಂಬರ್, ಒಟ್ಟು ವಿಸ್ತಾರ, ಕಟ್ಟಡವಿದ್ದರೆ ಅದರ ಸಂಪೂರ್ಣ ವಿವರ, ಸ್ಥಳ, ಸುತ್ತಮುತ್ತಲಿನ ಪರಿಸರದ ವಿವರ ಇರಬೇಕು. ಇನ್ನು ಪ್ರಾಪರ್ಟಿ ಮಾಲೀಕತ್ವದ ವರ್ಗಾವಣೆ ಕುರಿತ ವಿಧಿ, ಮಾರಾಟಗಾರನಿಗೆ ನೀಡಬೇಕಾದ ಬಾಕಿ ಮೊತ್ತ ಉಲ್ಲೇಖವಾಗಿರಬೇಕು. ಒಮ್ಮೆ ಪ್ರಾಪರ್ಟಿ ವರ್ಗಾವಣೆಯಾದರೆ ಆಗ ಖರೀದಿದಾರ ಎಲ್ಲಾ ಹಕ್ಕುಗಳನ್ನು ಪಡೆದುಕೊಳ್ಳುತ್ತಾನೆ. ಅದಕ್ಕೆ ಮುನ್ನ ಇದನ್ನು ರಿಜಿಸ್ಟ್ರೇಷನ್ ಮಾಡಿಸಬೇಕು. ಅಲ್ಲಿಗೆ ಖರೀದಿ ಪ್ರಕ್ರಿಯೆ ಮುಗಿಯುತ್ತದೆ.

ಸೇಲ್ ಡೀಡ್‌ನ ಕೊನೆಯ ಪುಟದಲ್ಲಿ ಮಾತ್ರವಲ್ಲದೆ ಪ್ರತಿ ಪುಟದಲ್ಲೂ ಮಾರಾಟಗಾರ ಮತ್ತು ಖರೀದಿದಾರ ಇಬ್ಬರೂ ಸಹಿ ಮಾಡಿರಬೇಕಾದುದು ಕಡ್ಡಾಯ. ಈ ಮೂಲಕ ಬಳಿಕ ಯಾವುದಾದರೂ ಅಂಶವನ್ನು ಸೇರಿಸುವುದು ಇಲ್ಲವೇ ತೆಗೆದು ಹಾಕುವ ಅಪಾಯವನ್ನು ತಪ್ಪಿಸಿಕೊಳ್ಳಬೇಕು. ಇದಕ್ಕೆ ಇಬ್ಬರು ಸಾಕ್ಷಿದಾರರ ಸಹಿ ಕೂಡ ಬೇಕಾಗುತ್ತದೆ.

ಸೇಲ್ ಡೀಡ್‌ನ ನೋಂದಣಿ ಕಡ್ಡಾಯವಾಗಿರುತ್ತದೆ. ಇಲ್ಲವಾದರೆ ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಇರುವುದಿಲ್ಲ. ತಮ್ಮ ವ್ಯಾಪ್ತಿಯ ಸಬ್ ರಿಜಿಸ್ಟ್ರಾರ್ ಕಚೇರಿಗೆ ಮೂಲ ದಾಖಲೆಗಳೊಂದಿಗೆ ತೆರಳಿ ನಾಲ್ಕು ತಿಂಗಳೊಳಗೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಈ ಹಂತದಲ್ಲಿ ನಿಗದಿತ ಸ್ಟ್ಯಾಂಪ್ ಡ್ಯೂಟಿ ಮತ್ತು ರಿಜಿಸ್ಟ್ರೇಷನ್ ಶುಲ್ಕವನ್ನು ಪಾವತಿಸಬೇಕು.





Comments

Popular posts from this blog

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Contribution of Shahu Chhatrapati Maharaj