Posts

Showing posts from 2021

ಮರೆಯಲಾಗದ ಚೇತನ ಇತಿಹಾಸ ತಜ್ಞ ಹಯವದನ ರಾವ್

"ಇತಿಹಾಸದ ವಿಸ್ಮಯ" ವಿಶೇಷ  "ಇತಿಹಾಸಕಾರರು ಮರೆಯಬಾರದ ಒಬ್ಬರು ಅಮೂಲ್ಯ ವ್ಯಕ್ತಿ ಈ ಮಹಾನ್ ಚೇತನ . ಆದ್ರೆ ಇವರ ಪರಿಚಯವೇ ಇಲ್ಲ ನಮಗೆ......! "   ನಿಜವಾಗಿಯೂ ಇವರು ದೇಶದ ಇತಿಹಾಸಕ್ಕೆ ಕೊಟ್ಟ ಕಾಣಿಕೆ ಬಹಳ ದೊಡ್ಡದು, ಮೈಸೂರಿನ ಸಾಮ್ರಾಜ್ಯದ ಇತಿಹಾಸ ತಿಳಿಯಲು ಹಲವಾರು ಜನ ಇತಿಹಾಸಕಾರರು ಇವರ ದಾಖಲೆಗಳನ್ನು ಓದಲೇಬೇಕು, ಇವರ ಬಗ್ಗೆ ಹೆಸರನ್ನು ಬಹಳಷ್ಟು ಸಾರಿ ಕೇಳಿದ್ದೇವೆ ಅಥವಾ ಓದಿದ್ದೇವೆ ಆದರೆ ಈ ಮಹಾನ್ ಚೇತನದ ಬಗ್ಗೆ ಹೆಚ್ಚು ತಿಳಿಯಲು ಎಂದಿಗೂ ಪ್ರಯತ್ನ ಮಾಡಲೇ ಇಲ್ಲ, ನಮ್ಮ ಇತಿಹಾಸ ಪ್ರಿಯ ಮನಸುಗಳು. ಈ ಮಹಾನ್ ಚೇತನವೇ ಕಾಂಜೀವರಂ "ಹಯವದನ ರಾವ್ / ಸಿ. ಹಯವದನ ರಾವ್ ಅಥವಾ ರಾವ್ ಬಹದ್ದೂರ್ ಕಾಂಜೀವರಂ ಹಯವದನ ರಾವ್" ಹೌದು ಮೊದಲು "ಶ್ರೀಯುತ ಬೆಂಜಮಿನ್ ರೈಸ್" ರವರು ಮೈಸೂರಿನ ಇತಿಹಾಸಕ್ಕೆ ಶಾಸನ ಗಳ ಅಧ್ಯಯನ ಮಾಡಿ ಇತಿಹಾಸದ ಗೆಜೆತೀರ್ ಕೊಡುಗೆ ಕೊಟ್ಟರೆ ಈ ಮಹಾನ್ ಚೇತನ "ಬೆಂಜಮಿನ್ ಲೆವಿಸ್ ರೈಸ್" ಅವರ ಇತಿಹಾಸ ಅಧ್ಯಯನದ ಮುಂದುವರೆದ ಭಾಗವಾಗಿ ಮತ್ತಷ್ಟು ಅನ್ವೇಷಣೆ ನಡೆಸಿ , ಇತಿಹಾಸವನ್ನು ಮತ್ತಷ್ಟು ಆಳವಾಗಿ ತಿಳಿದು ಕನ್ನಡ ತಾಯಿಯ ಚರಣಕ್ಕೆ ಇತಿಹಾಸದ ಪುಷ್ಪಮಾಲಿಕೆಯ ಅರ್ಪಣೆ ಮಾಡುತ್ತಾರೆ. ಬನ್ನಿ ಇವರ ಬಗ್ಗೆ ತಿಳಿಯೋಣ.  ಹಯವದನ ರಾವ್ ಇಂದಿನ ತಮಿಳುನಾಡು ರಾಜ್ಯದ ಹೊಸೂರಿನಲ್ಲಿ 1865 ನೆ ಇ...