Posts

ಶತಾವಧಾನಿ ಎಂಬ ವಿದ್ವತ್ ಶಿಖರ, ಒಡಲಲ್ಲಿ ಮಾತೃ ಪ್ರೀತಿಯ ಸಾಗರ!

Image
ಒಮ್ಮೆ ಸುರತ್ಕಲ್್ನಲ್ಲಿರುವ ಪ್ರತಿಷ್ಠಿತ ನ್ಯಾಷನಲ್ ಇನ್ಸ್್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದಲ್ಲಿ (ಎನ್್ಐಟಿಕೆ) ‘ಅವಧಾನ’ ನಡೆಯುತ್ತಿತ್ತು. ಶತಾವಧಾನಿ ಆರ್. ಗಣೇಶರ ಬರವಣಿಗೆ ಕ್ಲಿಷ್ಟವಾದರೂ ಮಾತುಗಳು ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತವೆ. ಅಂದು ಎನ್್ಐಟಿಕೆಯಲ್ಲೂ ಅಂಥದ್ದೇ ವಾತಾವರಣ ಸೃಷ್ಟಿಯಾಗಿತ್ತು. ಅವಧಾನವೆಂದರೆ ಪ್ರಶ್ನೆಗಳಿಗೆ ಚೌಕಟ್ಟು ಇರುವುದಿಲ್ಲ, ಧರ್ಮ-ಶಾಸ್ತ್ರಗಳಿಂದ ಲೌಕಿಕ ವಿಷಯಗಳವರೆಗೂ ಏನನ್ನು ಬೇಕಾದರೂ ಕೇಳಬಹುದು. ಧರ್ಮ-ಅಧರ್ಮ, ಯುದ್ಧ-ಅಹಿಂಸೆ ಯಾವ ವಿಷಯಗಳ ಬಗ್ಗೆ ಕೇಳಿದರೂ ಅವಧಾನಿಗಳು ಸಮರ್ಥವಾಗಿ ಉತ್ತರಿಸಬೇಕು. ಹಾಗಿರುವಾಗ… ಎದ್ದುನಿಂತ ವಿದ್ಯಾರ್ಥಿಯೊಬ್ಬ ಈ ಯುದ್ಧ ಅನ್ನುವುದೇ ಒಂದು ಕೆಟ್ಟ ವಿಚಾರ, ಮಹಾತ್ಮ ಗಾಂಧಿಯವರ ಅಹಿಂಸೆಯೇ ಪರಮೋಧರ್ಮ ಅಂತೆಲ್ಲ ಬಡಬಡಾಯಿಸಿದ. ಸರಕ್ಕನೆ ವೇದಿಕೆಯಿಂದ ಕೆಳಗಿಳಿದ ಗಣೇಶ್, ಪ್ರಶ್ನಿಸಿದ ವಿದ್ಯಾರ್ಥಿಯ ಕಪಾಳಕ್ಕೆ ರಪ್ಪನೆ ಹೊಡೆದರು! ನೆರೆದಿದ್ದವರೆಲ್ಲ ಅವಾಕ್ಕಾದರೆ, ಆ ವಿದ್ಯಾರ್ಥಿ ಬಾಯಿ ತೆರೆಯುವ ಮೊದಲೇ ‘ಇನ್ನೊಂದು ಕೆನ್ನೆ ತೋರು…’ ಎಂದರು ಗಣೇಶ್!!  ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರಿ ಎಂಬ ಗಾಂಧಿ ತತ್ವ ಆಲಿಸುವುದಕ್ಕಷ್ಟೇ ಚೆನ್ನ ಎಂಬ ಗಣೇಶರ ಸಂದೇಶ ಆ ವಿದ್ಯಾರ್ಥಿಗೆ ಮಾತ್ರವಲ್ಲ, ಅವಧಾನಕ್ಕೆ ಬಂದವರಿಗೆಲ್ಲ ಅರ್ಥವಾಯಿತು. ಅಹಿಂಸೆಯೇ ಎಲ್ಲದಕ್ಕೂ ಉತ್ತರವಲ್ಲ, ಕ್ಷಾತ್ರಗುಣವನ್ನು ಹೊಂದಿರಬೇಕು, ಎಲ್ಲ ಸಂದರ್...

ಸಾಮುದಾಯಿಕ ಹೊಣೆ; ಸೌಹಾರ್ದಕ್ಕೆ ಮನ್ನಣೆ

Image
 ಡಾ.ಆರ್.ಬಾಲಸುಬ್ರಹ್ಮಣ್ಯಂ ಕೆಲ ದಿನಗಳ ಹಿಂದೆ ಐಐಟಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದ ಒಂದು ಚರ್ಚೆಯನ್ನು ನಾನು ಟಿ.ವಿಯಲ್ಲಿ ವೀಕ್ಷಿಸುತ್ತಿದ್ದೆ. ಮುಂಬೈ ಐಐಟಿಯ ಪ್ರೊಫೆಸರ್ ಒಬ್ಬರು, ಲೋಹ ವಿಜ್ಞಾನ ವಿಭಾಗದ ತಮ್ಮ ಬಹುತೇಕ ವಿದ್ಯಾರ್ಥಿಗಳು, ಕಲಿತದ್ದನ್ನು ಬಿಟ್ಟು ಬೇರೆ ಉದ್ಯೋಗಗಳನ್ನು ಅವಲಂಬಿಸುತ್ತಿರುವ ಸಂಗತಿಯನ್ನು ಹೇಳಿಕೊಂಡು ವಿಷಾದಿಸುತ್ತಿದ್ದರು.   ಈ ವಿದ್ಯಾರ್ಥಿಗಳಲ್ಲಿ ಹಲವರು ಆಯ್ದುಕೊಂಡಿದ್ದುದು ಸಾಫ್ಟ್‌ವೇರ್‌ಗೆ ಸಂಬಂಧಿಸಿದ ನಿಸ್ತೇಜ ಉದ್ಯೋಗಗಳನ್ನು. ಇಂತಹ ಬೆಳವಣಿಗೆಗೆ, ಲೋಹ ವಿಜ್ಞಾನ ಕ್ಷೇತ್ರದಲ್ಲಿ ಸಿಗುವ ವೇತನಕ್ಕಿಂತ ಸಾಫ್ಟ್‌ವೇರ್ ಉದ್ಯೋಗ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಹಣ ನೀಡುತ್ತಿರುವುದೇ ಕಾರಣ ಎಂದು ಪ್ರೊಫೆಸರ್ ವಿವರಿಸುತ್ತಿದ್ದರು. ಇದನ್ನು ಕೇಳಿದಾಗ, ನಮ್ಮ ದೇಶದ ಬುದ್ಧಿವಂತ ಮಕ್ಕಳಿಗಾಗಿ ನಾವು ಇಷ್ಟೊಂದು ಸಮಯ, ಶಕ್ತಿ ಎಲ್ಲವನ್ನೂ ವ್ಯಯಿಸಿ  ತರಬೇತಿ ನೀಡುತ್ತಿರುವುದು ಅವರು ಅಧಿಕೃತವಾಗಿ ಏನನ್ನು ಕಲಿಯುತ್ತಾರೋ ಅದನ್ನು ಬಿಟ್ಟು ಅದಕ್ಕೆ ಸಂಬಂಧವೇ ಇಲ್ಲದ ಉದ್ಯೋಗಗಳನ್ನು ಅರಸಿಹೋಗುವ ಸಲುವಾಗಿಯೇ ಎಂದು ನನಗೆ ದಿಗ್ಭ್ರಮೆಯಾಯಿತು.   ಹಾಗಿದ್ದರೆ ನಮ್ಮ ಯುವಜನರ ನಿರ್ಧಾರಗಳು ಬೇರೆ ಏನನ್ನೂ ಗಣನೆಗೆ ತೆಗೆದುಕೊಳ್ಳದೆ ಬರೀ ಆರ್ಥಿಕ ಲಾಭಕ್ಕೇ ಹೆಚ್ಚು ಒತ್ತು ನೀಡುತ್ತಿರುವಂತೆ ಕಾಣುತ್ತಿರುವುದು ವಿಷಾದದ ಸಂಗತಿ. ನಮ್ಮ ಜೀವನದಲ್ಲಿ ಹಣ ಪ...

ಸತ್ಯ, ವಿಶ್ವಾಸಾರ್ಹತೆ, ಧಿಮಾಕು… ಹೀಗೊಂದು ಪದ ಮೆಲುಕು !

Image
ಇತ್ತೀಚೆಗೆ ಮಹಾತ್ಮ ಗಾಂಧಿಯವರು ತಾವೇ ಸಂಪಾದಿಸುತ್ತಿದ್ದ ‘ಯಂಗ್ ಇಂಡಿಯಾ’ ಪತ್ರಿಕೆಯ ಹಳೆಯ ಸಂಚಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದೆ. ನಿಮಗೆ ಗೊತ್ತಿರಬಹುದು, ಗಾಂಧೀಜಿ ಸಹ ಪತ್ರಕರ್ತರಾಗಿದ್ದರು. ಬೇರೆ ಬೇರೆ ಕಾಲಘಟ್ಟಗಳಲ್ಲಿ ಅವರು ಆರು ಪತ್ರಿಕೆಗಳಿಗೆ ಸಂಪಾದಕರಾಗಿದ್ದರು ಹಾಗೂ ಆ ಎಲ್ಲ ಪತ್ರಿಕೆಗಳಿಗೂ ಅವರು ತಪ್ಪದೇ ಬರೆಯುತ್ತಿದ್ದರು. ಯಂಗ್ ಇಂಡಿಯಾ, ಹರಿಜನ, ಇಂಡಿಯನ್ ಒಪಿನಿಯನ್, ಹರಿಜನ ಬಂಧು (ಗುಜರಾತಿ), ಹರಿಜನಸೇವಕ (ಹಿಂದಿ) ಹಾಗೂ ನವಜೀವನ ಪತ್ರಿಕೆಗಳಿಗೆ ಅವರು ಸಂಪಾದಕರಾಗಿದ್ದರು. ಗಾಂಧೀಜಿಯವರು ಇಂಗ್ಲಿಷ್, ಹಿಂದಿ ಹಾಗೂ ಗುಜರಾತಿ ಭಾಷೆಗಳಲ್ಲಿ ಬರೆಯುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೀರ್ಘ ಕಾಲ ಪ್ರವಾಸ ಮಾಡಬೇಕಾಗುತ್ತಿತ್ತು. ಆದರೂ ಅವರು ಸಂಪಾದಿಸುತ್ತಿದ್ದ ಪತ್ರಿಕೆ ನಿಯಮಿತವಾಗಿ ಪ್ರಕಟವಾಗುತ್ತಿದ್ದವು. ಪ್ರಯಾಣದ ಸಮಯದಲ್ಲಿ ತಾವು ಬರೆಯಬೇಕಾದ ಲೇಖನಗಳು, ಸಂಪಾದಕೀಯವನ್ನು ಅವರು ಡಿಕ್ಟೇಟ್ ಮಾಡುತ್ತಿದ್ದರು. ತಮ್ಮಿಂದಾಗಿ ಪತ್ರಿಕೆ ತಡವಾಗಿ ಪ್ರಕಟವಾಗುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಅದಿರಲಿ, ನಾನು ಹೇಳಬೇಕೆಂದಿದ್ದು ಇದಲ್ಲ. ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಅವರು ತಮಗೆ ಇಷ್ಟವಾದ ಎರಡು ಪದಗಳ ಕುರಿತು ಬರೆದ ಒಂದು ಪುಟ್ಟ ಲೇಖನ ನನ್ನ ಗಮನ ಸೆಳೆಯಿತು. ತೀರಾ ಸಹಜವಾದ, ಆದರೆ ಕುತೂಹಲ ಹುಟ್ಟಿಸುವ ಬರಹವದು. ಗಾಂಧೀಜಿಗೆ ಇಷ್ಟವಾದ ಆ ಎರಡು ಪದಗಳು ಯಾವವು? ಮೊದಲನೆಯದು Truth (ಸತ್ಯ) ಹಾ...

ಮೇಘಮಲೈ

ಕೈಗೆಟಕುವಷ್ಟು ಹತ್ತಿರದಲ್ಲಿ ಸಾಗುವ ಮೋಡಗಳು ಕುಳಿರ್ಗಾಳಿಯ ಹಿತಾನುಭವ ತರುತ್ತದೆ . ದೂರಾತಿದೂರಕ್ಕೂ ಇರುವ ಹಸಿರು ಹಾಸಿನ ಮೇಲೆ ಮೈಮರೆತು ಮಲಗಿದಂತೆ ಕಾಣಿಸುತ್ತವೆ . ಪಶ್ಚಿಮ ಘಟ್ಟದ ಈ ಗಿರಿಸಾಲುಗಳಿಗೆ ` ಮೇಘ ಮಲೈ ` ಎಂಬ ಹೆಸರಿದೆ . ಬೆಟ್ಟಗಳ ಮೇಲಿನ ಮೇಘಗಳ ಸಂಚಾರ ಕಂಡು ಈ ಹೆಸರು ಬಂದಿರಬೇಕು .  ತಮಿಳುನಾಡು ರಾಜ್ಯದ ಥೇಣಿ ಜಿಲ್ಲೆಯಲ್ಲಿ ಬರುವ ಈ ಬೆಟ್ಟಗಳದ್ದು ಅಪೂರ್ವ ಸೊಬಗು . ಸಮುದ್ರ ತೀರದಿಂದ 1,500 ಮೀಟರ್ ಎತ್ತರದಲ್ಲಿ ಇರುವ ಮೇಘಮಲೈಗೆ ತಲುಪಲು ಚಹಾ , ಕಾಫಿ , ಮೆಣಸು , ಏಲಕ್ಕಿ ತೋಟಗಳ ನಡುವೆ ಬಳಸಿ ಸಾಗಬೇಕು . ಅಪರೂಪದ ಔಷಧೀಯ ಸಸ್ಯಗಳು , ವಿವಿಧ ಜಾತಿಯ ಮರಗಳ ಕಾಡಿನ ನಡುವೆ ಪಯಣಿಸಬೇಕು . ವರುಸನಾಡು ಬೆಟ್ಟದಿಂದ ಮೇಘ ಮಲೈ ಬೆಟ್ಟದ ಸಾಲುಗಳನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು . ಅಲ್ಲಿಂದ ಸಣ್ಣ ಬೆಳ್ಳಿಎಳೆಯಂತೆ ಕಾಣಿಸುವ ಸುರುಳಿ ಜಲಪಾತವನ್ನು ನೋಡಬಹುದು . ಸುರುಳಿ ನದಿ ನಿರ್ಮಿಸಿರುವ ಸುರುಳಿ ತೀರ್ಥ ಎಂದೇ ಹೆಸರಾದ ಈ ಜಲಪಾತ 190 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ . ಬಂಡೆಯ ಮೇಲಿಂದ ಸುರಿಯುವ ನೀರು ಸುರುಳಿ ಸುರುಳಿಯಾಗಿ ಸುತ್ತುತ್ತಾ ಕೆಳಗೆ ಉರುಳುವುದರಿಂದ ಸುರುಳಿ ಜಲಪಾತ ಎಂಬ ಹೆಸರು ಅದಕ್ಕೆ ಪ್ರಾಪ್ತವಾಗಿದೆ .  ಚಾರಣ ಪ್ರಿಯರಿಗೆ ಮೇಘಮಲೈ ಸೂಕ್ತ ಜ...

ಬಗೆ ಬಗೆ ನೋಟ; ಬದುಕಿನ ಪಾಠ

Image
ಹೊಸ   ಕನಸು  |  ಡಾ . ಆರ್ . ಬಾಲಸುಬ್ರಹ್ಮಣ್ಯಂ ನನಗಾಗ ವಯಸ್ಸು ಇನ್ನೂ ಮಾಗಿರಲಿಲ್ಲ, ಅನುಭವವೂ ಪಕ್ವವಾಗಿರಲಿಲ್ಲ. ಹೀಗಾಗಿ ಯಾವುದಾದರೂ ಕೆಲಸ ಮಾಡಿದರೆ ಮುಂದಾಗಬಹುದಾದ ಪರಿಣಾಮಗಳ ಬಗ್ಗೆ ಸಹಜವಾಗಿಯೇ ಭಯವೂ ಇರಲಿಲ್ಲ. 1993ರ ಆರಂಭದಲ್ಲಿ ನಾವು ಆಗಷ್ಟೇ ಬುಡಕಟ್ಟು ಮಹಿಳೆಯರ ಸಂಘಟನಾ ಕಾರ್ಯದಲ್ಲಿ ನಿರತರಾಗಿದ್ದೆವು.  ಆ ಸಂದರ್ಭದಲ್ಲೆಲ್ಲಾ ಪುರುಷರ ಮದ್ಯಸೇವನೆ ವಿಚಾರ ಪದೇ ಪದೇ ನಮ್ಮ ಚರ್ಚೆಗೆ ಬರುತ್ತಿತ್ತು. ಈ ಸಮಸ್ಯೆಯ ವಿರುದ್ಧ ಹೋರಾಡಲು ಗಂಡಸರೊಂದಿಗೆ ಚರ್ಚಿಸಿ ಅದರ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡುವುದರಿಂದ ಹಿಡಿದು ಅಬಕಾರಿ ಇಲಾಖೆಗೆ ದೂರು ನೀಡುವವರೆಗೆ ಹಲವಾರು ವಿಭಿನ್ನ ಮಾರ್ಗಗಳನ್ನು ನಾವು ಹುಡುಕುತ್ತಿದ್ದೆವು.  ಆದರೆ ಅದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಆದರೂ ಈ ಸಲುವಾಗಿ ಸಂಘಟನೆಯ ಬಗ್ಗೆ ಮಹಿಳೆಯರು ಆಸಕ್ತಿ ಮತ್ತು ನಂಬಿಕೆ ಕಳೆದುಕೊಳ್ಳದಿರುವಂತೆ ಏನಾದರೂ ಮಾಡಲೇಬೇಕೆಂಬ ಒತ್ತಡ ನನ್ನಲ್ಲಿ ಬಲವಾಯಿತು. ಸಾರಾಯಿ ಮಾರುವವರತ್ತ ನಾವು ಗಮನಹರಿಸೋಣ ಎಂದು ಕಾಡುಕುರುಬ ಮಹಿಳೆ ಪುಟ್ಟಮ್ಮ ಹೇಳಿದಾಗ, ಅದೂ ಒಳ್ಳೆಯ ಸಲಹೆ ಎಂದು ನನಗನಿಸಿತು. ಇದನ್ನು ಅಹುದಹುದು ಎಂದು ಒಪ್ಪಿಕೊಂಡ ಎಲ್ಲ ಮಹಿಳೆಯರೂ, ಸಾರಾಯಿ ಸುಲಭವಾಗಿ ಸಿಗುತ್ತಿರುವುದರಿಂದಲೇ ತಮ್ಮ ಗಂಡಂದಿರು ಅದನ್ನು ಕುಡಿಯುತ್ತಿದ್ದಾರೆ ಎಂಬ ಅಭಿಪ್ರಾಯಕ್ಕೆ ಬಂದರು. ಈ ಪ್ರದೇಶದಲ್ಲಿ ಅಧಿಕೃತವಾಗಿ ಸಾರಾಯಿ ಮಾರಾಟ ಮಾಡಲು ...

ಉನ್ನತ ಶಿಕ್ಷಣ: ಗತ ವೈಭವದ ನೆನಪಷ್ಟೇ ಸಾಕೇ?

ಹೊಸ ಕನಸು | ಡಾ . ಆರ್ . ಬಾಲಸುಬ್ರಹ್ಮಣ್ಯಂ ಕೆಲ ವಾರಗಳ ಹಿಂದೆ ನನ್ನನ್ನು ಭೇಟಿಯಾಗಿದ್ದ ಒಂದಷ್ಟು ವಿದ್ಯಾರ್ಥಿಗಳು ನಮ್ಮ ಸಂಸ್ಥೆ ನೀಡಿದ ಬೆಂಬಲದಿಂದ ತಾವು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದ್ದಕ್ಕೆ ತಮಗೆಲ್ಲಾ ಎಷ್ಟು ಸಂತಸವಾಗಿದೆ ಎಂಬುದನ್ನು ಹೇಳಿಕೊಂಡರು. ಈಗ ತಮಗೆಲ್ಲಾ ಬದುಕನ್ನು ಎದುರಿಸಲು ಇನ್ನಷ್ಟು ಆತ್ಮವಿಶ್ವಾಸ ಬಂದಿದೆ, ಅಲ್ಲದೆ ಈಗ ತಾವು ಪಡೆಯಲಿರುವ ಪದವಿಯಿಂದ ತಮ್ಮ ಜೀವನ ಮಟ್ಟ ಸುಧಾರಿಸಲಿದೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದರು. ಅವರಲ್ಲಿ ಬಹುತೇಕರು ವೃತ್ತಿಪರ ಕೋರ್ಸ್ ಮಾಡುತ್ತಿದ್ದರು. ಇನ್ನು ಕೆಲವರು ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. ಅವರ ಈ ಉತ್ಸಾಹ ಮತ್ತು ಸಕಾರಾತ್ಮಕ ದೃಷ್ಟಿಕೋನ ಕಂಡು ನನಗೆ ಸಮಾಧಾನವಾಯಿತಾದರೂ ಅವರೀಗ ಪಡೆಯುತ್ತಿರುವ ಉನ್ನತ ಶಿಕ್ಷಣ ನಿಜವಾಗಲೂ ಅವರನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸುತ್ತಿದೆಯೇ ಎಂಬ ಪ್ರಶ್ನೆ ನನ್ನಲ್ಲಿ ಮೂಡಿತು.   ವ್ಯಾವಹಾರಿಕ ದೃಷ್ಟಿಕೋನದಿಂದ ಹೇಳುವುದಾದರೆ, ಉದ್ಯೋಗ ನೇಮಕಕ್ಕೆ ಅಗತ್ಯವಾದ ಸಾಮರ್ಥ್ಯವನ್ನು ಅವರಿಗೆ ತಂದುಕೊಡುತ್ತಿದೆಯೇ ಎಂಬ ಚಿಂತೆ ಸಹ ನನ್ನನ್ನು ಕಾಡಿತು. ತಾವು ತೆಗೆದುಕೊಳ್ಳುವ ಹೊಸ ಎಂಜಿನಿಯರುಗಳನ್ನು ಮೈಸೂರಿನಲ್ಲಿರುವ ತಮ್ಮ ತರಬೇತಿ ಸಂಸ್ಥೆಯು ನಿಜವಾದ ಅರ್ಥದಲ್ಲಿ ಯೋಗ್ಯ ಉದ್ಯೋಗಿಗಳನ್ನಾಗಿ ರೂಪಿಸುತ್ತಿದೆ ಎಂದು ಇನ್ಫೋಸಿಸ್‌ನ ಸಂಸ್ಥಾಪಕರಲ್ಲೊಬ್ಬರು ಹೇಳುತ್ತಿದ್ದ ಮಾತು ಈ ಸ...

ಸರ್ಕಾರಿ ಸಂಸ್ಥೆ: ಸಾಧನೆಯ ಮಾಪನಕ್ಕೆ ಬೇಡ ಚಿಂತೆ

Image
ಹೊಸ ಕನಸು | ಡಾ . ಆರ್ . ಬಾಲಸುಬ್ರಹ್ಮಣ್ಯಂ ಸಾಧನೆ ಎಂದರೆ ಎಷ್ಟು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿದೆ ಎಂಬುದನ್ನು ಆಧರಿಸಿ `ಅದೊಂದು ಕ್ರಿಯೆ, ಕಾರ್ಯಭಾರ ಅಥವಾ ಕಾರ್ಯಾಚರಣೆ~ ಎಂದು ಪದಕೋಶ ವಿವರಿಸುತ್ತದೆ. ಇತ್ತೀಚೆಗೆ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು, ಇನ್ನು ಮುಂದೆ ತಾವು ನಿಯಮಿತವಾಗಿ ವಿವಿಧ ಜಿಲ್ಲೆಗಳು ಮತ್ತು ರಾಜ್ಯದ ಸಾಧನೆಯ ಮೌಲ್ಯಮಾಪನ ಮಾಡುವುದಾಗಿ ಪ್ರಕಟಿಸಿದರು. ಸರ್ಕಾರಿ ಸಂಸ್ಥೆಗಳ ಸಾಧನೆಯ ಬಗ್ಗೆ ಆಸಕ್ತಿ ಉಳ್ಳವನಾಗಿ ಮತ್ತು ಆ ವಿಷಯದಲ್ಲಿ ಕೊಂಚ ಪರಿಣತಿ ಹೊಂದಿದವನಾಗಿ ಅವರ ಈ ತೀರ್ಮಾನ ನನಗೆ ಸ್ವಾಗತಾರ್ಹ ಬೆಳವಣಿಗೆಯಾಗಿ ಕಂಡಿತು.   ಆದರೆ ದುರದೃಷ್ಟವಶಾತ್ ಈ ವಿಷಯದಲ್ಲಿ ನಿರಾಸೆ ಕಾದಿತ್ತು. ಮೈಸೂರಿಗೆ ಭೇಟಿ ನೀಡಿದ್ದ ಅವರು ಕೇವಲ ಒಂದು ಗಂಟೆಗಿಂತಲೂ ಕಡಿಮೆ ಅವಧಿಯಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳ ಮೌಲ್ಯಮಾಪನ ಕಾರ್ಯವನ್ನು ಪೂರೈಸಿದ್ದರು. ಇದು ಹೇಗೆ ಸಾಧ್ಯ ಎಂದು ನನಗೆ ಅಚ್ಚರಿಯಾಯಿತು. ಬಳಿಕ ಇಲ್ಲಿ ನಿಜವಾದ ಪರಿಶೀಲನೆಗಿಂತ ಪ್ರಚಾರದ ಉದ್ದೇಶವೇ ಹೆಚ್ಚಾಗಿದೆ ಎಂಬುದು ಅರಿವಾಯಿತು. ಕಾಕತಾಳೀಯ ಎಂಬಂತೆ, ರಾಜ್ಯ ಸರ್ಕಾರ ಸಹ ತನ್ನ ಪ್ರಮುಖ ಸಚಿವಾಲಯಗಳ ಸಾಧನೆಯನ್ನು ಒರೆಗೆ ಹಚ್ಚಲು `ಫಲಿತಾಂಶ ಚೌಕಟ್ಟಿನ ದಾಖಲೆ~ ಸಿದ್ಧಪಡಿಸುವ ಕಾರ್ಯವನ್ನು ಆರಂಭಿಸಿದೆ. ಈ ಪ್ರಕ್ರಿಯೆಯಲ್ಲಿ ನಾನು ಸಹ ಗುರುತಿಸಿಕೊಂಡಿರುವುದರಿಂದ ಸರ್ಕಾರದ ಈ ಉದ್ದೇಶ ಮತ್ತು ಸ್ವತಃ ನೇತೃತ್ವ ವಹಿಸಿರುವ ಸಚಿ...