ಪರರ ಬದುಕಿನ ಪರೋಪಕಾರಿ ಹಣತೆಗಳು
ವಿಲ್ಲಾರ್ಡ್ ಅಪ್ಪೊಲನ್ 2010ರಲ್ಲಿ ಹೈಟಿ ಎಂಬ ಪುಟ್ಟ ದೇಶದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಇಡೀ ದೇಶವೇ ಹೈರಾಣಾಗಿ ಹೋಯಿತು. ಈ ಸಮಯದಲ್ಲಿ ಗಾಯಗೊಂಡು ತೀವ್ರ ಅಸ್ವಸ್ಥನಾಗಿದ್ದ ಗಂಡನ ಎದುರೇ ಪತ್ನಿ ವಿಲ್ಲಾರ್ಡ್ ಅಪ್ಪೊಲನ್ ಅತ್ಯಾಚಾರಕ್ಕೆ ಒಳಗಾದರು. ಪತಿ ವಿಲ್ಲಾರ್ಡ್‌ಳ ರಕ್ಷಣೆಗೆ ಮುಂದಾದಾಗ ಕಾಮುಕರು ಆತನ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದರು. ಬದುಕುಳಿದಿದ್ದ ಮಗಳನ್ನು ಸರ್ಕಾರದ ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿದರು. ಅಲ್ಲಿಯೂ ವಿಲ್ಲಾರ್ಡ್ ಮಗಳು ಅತ್ಯಾಚಾರಕ್ಕೆ ಬಲಿಯಾದಳು. ಬದುಕುವ ಆಸೆಯನ್ನೇ ಕಳೆದುಕೊಂಡ ವಿಲ್ಲಾರ್ಡ್ ಆತ್ಮಹತ್ಯೆಗೆ ಯತ್ನಿಸಿದರು. ಅದೃಷ್ಟವಶಾತ್ ಅವರು ಬದುಕುಳಿದರು. ಮನೆ ಮಠ ಕಳೆದುಕೊಂಡು ಬೀದಿಯಲ್ಲಿ ಬದುಕುತ್ತಿದ್ದ ಸಾವಿರಾರು ಮಹಿಳೆಯರ ಮೇಲಿನ ಅತ್ಯಾಚಾರವನ್ನು ಕಣ್ಣಾರೆ ಕಂಡು ಮತ್ತಷ್ಟು ಕುಗ್ಗಿ ಹೋದರು. ಈ ಹಂತದಲ್ಲಿ ಅವರ ಬದುಕಿಗೆ ತಿರುವು ನೀಡಿದ್ದು ‘ಮದರ್ ತೆರೆಸಾ’ ಅವರ ಜೀವನ ಚರಿತ್ರೆ. ಅವರ ಪುಸ್ತಕ ಓದಿ ಒಂದೆರಡು ವಾರಗಳಲ್ಲೇ ವಿಲ್ಲಾರ್ಡ್ ‘ಕೊಫಾವಿವ್’ ಎಂಬ ಮಹಿಳಾ ಸಬಲೀಕರಣ ಸಂಸ್ಥೆ ಹುಟ್ಟು ಹಾಕಿದರು. ತಂಡಗಳನ್ನು ರಚಿಸಿಕೊಂಡು ಭೂಕಂಪ ಪೀಡಿತ ಸ್ಥಳಗಳಲ್ಲಿ ಪ್ರಾಣಿಗಳಂತೆ ಜೀವಿಸುತ್ತಿದ್ದ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮಹಿಳೆಯರು ಹಾಗೂ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಿದರು. ಕೆಲ ತಿಂಗಳುಗಳ ಬಳಿಕ ಸರ್ಕಾರದ ...