Posts

ಕಂಕಾರಿಯಾ ಮಾದರಿಯನ್ನು ನಾವೂ ಅನು'ಮೋದಿ'ಸೋಣ

Image
ಸರ್ದಾರ್ ಸರೋವರದಿಂದ ನೀರು ಸರಿಸುಮಾರು 280 ಕಿ. ಮೀ. ನಷ್ಟು ದೂರದ ಪ್ರಯಾಣ ಬೆಳೆಸುತ್ತದೆ. ಉದ್ದಕ್ಕೂ ಇರುವ ಸಣ್ಣಪುಟ್ಟ ಕೆರೆಗಳನ್ನು ತುಂಬಿಯೇ ನೀರು ಮುಂದಕ್ಕೆ ಹೋಗುವಂತೆ ಯೋಜಿಸಲಾಗಿದೆ. ಜತೆಗೆ ಕನೇವಲ್ ಹಾಗೂ ಪರೇಜ್ ಕೆರೆಗಳೂ ತುಂಬುವುದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದ ಅಂತರ್ಜಲ ಮಟ್ಟದಲ್ಲಿ ಅನಾಯಾಸವಾಗಿ ಏರಿಕೆ ಕಂಡು ಬಂದಿದೆ. ಹಿಂದೊಮ್ಮೆ ಗುಜರಾತ್‌ನ ನೀರಾವರಿ ಮತ್ತು ಕೃಷಿ ರಂಗದಲ್ಲಾದ ಅಭಿವೃದ್ಧಿಯ ಬಗ್ಗೆ ನನ್ನ ಅಂಕಣದಲ್ಲಿ ಬರೆದಿದ್ದಾಗ ನಮ್ಮ ಬುದ್ಧಿ(?)ಜೀವಿಗಳೆನಿಸಿದ ಕೆಲವರು ಚೇಳು ಕಡಿಸಿಕೊಂಡಂತೆ ಎಗರಿ ಬಿದ್ದಿದ್ದರು. ಅದೇನೋ ಕೆಲವರಿಗೆ ಗುಜರಾತ್ ಅಂದರೆ ಅದು ಗೋಧ್ರಾ ಸುತ್ತಮುತ್ತಲಿನ ಘಟನೆಗಳು, ಮೋದಿ ಎಂದರೆ ಹಿಂದುತ್ವ ಎಂದಷ್ಟೇ ಆಗಿಬಿಟ್ಟಿದೆ. ಅದರ ಹೊರತಾಗಿ ಗುಜರಾತ್ ಅನ್ನು ಒಂದು ರಾಜ್ಯವಾಗಿ, ಮೋದಿಯನ್ನು ಒಬ್ಬ ಆಡಳಿತಗಾರ, ಮುಖ್ಯಮಂತ್ರಿಯಾಗಿ ನೋಡಿಯೇ ಇಲ್ಲ. ಹೀಗಾಗಿ ಅಲ್ಲಿನ ಅಭಿವೃದ್ಧಿ ಯಾವಾಗಲೂ ಕೆಲವರಿಗೆ ಮಾನದಂಡವಾಗುವುದೇ ಇಲ್ಲ. ಹೋಗಲಿ ಬಿಡಿ, ರಾಜಕೀಯದ ಮಾತುಗಳು. ಆದರೆ ಅದರ ಹೊರತಾಗಿ ನಿಜಕ್ಕೂ ಗುಜರಾತ್ ಏಕೆ ಮಾದರಿಯಾಗಿ ನಿಲ್ಲುತ್ತದೆ ಎಂಬುದಕ್ಕೆ ಕಾರಣಗಳನ್ನು ನಿರಾಕರಿಸುವಂತೆಯೇ ಇಲ್ಲ. ಗುಜರಾತ್ ಅತ್ಯಂತ ಕಡಿಮೆ ಮಳೆ ಬೀಳುವ ರಾಜ್ಯ. ಅಲ್ಲಿ ಅಭಿವೃದ್ಧಿ ಎಂದರೆ ಅದೊಂದು ಸಾಹಸ. ಅದರಲ್ಲೂ ಕೃಷಿ ಮತ್ತು ನೀರಾವರಿಯಲ್ಲಿನ ಒಂದೊಂದು ಹೆಜ್ಜೆಯೂ ಒಂದೊಂದು ಮೈಲುಗಲ್ಲೆನಿಸುತ್ತದೆ....

Team ISRO: Making India proud, again

The Indian Space Research Organisationscripted history when its Rs 450-crore Mars Orbiter Mission took off from Sriharikota spaceport for a 780 million-kilometre journey to the Red Planet on November 5 Over 1,000-odd scientists, led by their chief K Radhakrishnan, worked tirelessly for years to turn the ambitious mission into a reality. The 10-month journey, which began on November 5, is expected to reach the Martian atmosphere in the third week of September 2014. The spacecraft will cover 400 million kilometres in 300 days before reaching the Martian atmosphere. Incidentally, fewer than 25 of the spacecraft sent by other countries have been able to complete the entire journey to Mars. Let’s doff our hats to the amazing members of Team ISRO who helped India achieve yet another milestone in the great beyond. Some of the key members of team ISRO are: K Radhakrishnan: ISRO chairman, secretary in Department of Space M Annadurai: Programme director, Mars Orbiter Mission...

ರಸ್ತೆ ನಿರ್ಮಾಣದಲ್ಲಿ ವೈಜ್ಞಾನಿಕ ಬಡತನ

Image
ರೋಡ್ ಇಂಜಿನಿಯರಿಂಗ್. ಭಾರತದ ಮಟ್ಟಿಗೆ ಬಹುಶಃ ಈ ಪದಕ್ಕೆ ಅರ್ಥವೇ ಇಲ್ಲ. ಕಾರಣ ನಮ್ಮಲ್ಲಿ ಯಾವುದೇ ರಸ್ತೆ 2-3 ವರ್ಷಕ್ಕಿಂತ ಹೆಚ್ಚಿಗೆ ತೇಪೆ ಕಾಣದೇ ಬಾಳಿದ್ದಿಲ್ಲ. ರಸ್ತೆಗೂ ಇಂಜಿನಿಯರ್ ಬೇಕಾ ಎನ್ನುವ ಗುತ್ತಿಗೆದಾರರೇ ನಮ್ಮಲ್ಲಿ ಜಾಸ್ತಿ. ಇವತ್ತು ಭಾರತದಲ್ಲಿ ರಸ್ತೆಗಳ ಸ್ಥಿತಿ ಅಧೋಗತಿಗೆ ಇಳಿದಿದ್ದರೆ ತೀರ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸುತ್ತಿರುವುದೇ ಕಾರಣ. (ನಮ್ಮವರೇ ವಿದೇಶದಲ್ಲಿ ನಿರ್ಮಿಸಿರುವ ಹುವಾಂಗ್ ಹೆದ್ದಾರಿ. ಇವತ್ತು ಹದಿನೈದು ವರ್ಷಗಳ ನಂತರವೂ ಕನ್ನಡಿಯಂತಿದೆ) ಅಸಲಿಗೆ ಅತಿ ಹೆಚ್ಚಿನ ಅರ್ಥಿಕ ವ್ಯವಸ್ಥೆಯನ್ನು ಹದಗೆಡಿಸುತ್ತಿರುವುದು ಮತ್ತು ಬಜೆಟ್ನಲ್ಲಿ ಸರ್ಕಾರಕ್ಕೆ ಅತಿ ಹೆಚ್ಚಿನ ಹೊರೆಯಾಗುತ್ತಿರುವುದು ರಸ್ತೆಗೆ ಹರಿಸುವ ಹಣವಾದರೆ, ಅದೇ ನಮ್ಮ ಗುತ್ತಿಗೆದಾರರಿಗೂ/ ನಾಯಕರಿಗೂ ನಿರಂತರ ಆಮದನಿಯ ಸೈಡ್ ರೋಡು. ಅಷ್ಟಕ್ಕೂ ನಮ್ಮ ದೇಶದಲ್ಲಿ ಮಾತ್ರ ಯಾಕೆ ಹೀಗೆ ರಸ್ತೆಗಳು ಹದಗೆಟ್ಟು ಹೋಗುತ್ತವೆ? ಯಾಕೆ ನಮ್ಮಲ್ಲಿ ದಶಕಗಳ ಕಾಲ ಬಾಳುವಂತಹ ರಸ್ತೆಗಳನ್ನು ನಿರ್ಮಿಸಲಾಗುತ್ತಿಲ್ಲ. ಒಂದೇ ಒಂದು ರಾಷ್ಟ್ರೀಯ ಹೆದ್ದಾರಿ ಕೂಡಾ ಕನಿಷ್ಟ ಐದು ವರ್ಷವಾದರೂ ತೇಪೆ ಕಾಣದೇ ಯಾಕೆ ಉಳಿಯುತ್ತಿಲ್ಲ? ಇದೇ ಶಿರಾಡಿ ಘಾಟ್ ರಸ್ತೆ ಇಲ್ಲಿಯವರೆಗೂ ಎಷ್ಟೇ ರೀಪೇರಿ ಮತ್ತು ನಿರ್ವಹಣೆ ಮಾಡಿದರೂ ಮಳೆಗಾಲದ ಅವಧಿಗೂ ಮೊದಲೇ ತೋಪೆದ್ದು ಹೋಗೋದು ಯಾಕೆ? ಇವತ್ತು ಕರ್ನಾಟಕದ ಎಷ್ಟು ಕಾಲೇಜುಗಳಲ್ಲಿ ರೋಡ್ ಇಂಜಿನಿಯ...

Famous Rivers in the World

Image
Next only perhaps to the mountains, famous rivers in the world are the natural phenomena which contributed the most in the development of human civilizations. Containing mostly fresh water, rivers are the natural waterways flowing from higher altitudes towards the lower altitudes or from mountains to the sea. In many cases, however, the river dries up or is absorbed before reaching another body of water or the sea. The opposite direction of the flow of a river is termed as “up river” and towards the flow is called the “down river” direction. The study of rivers is a regular science now and is known as potamology. “River flow” is defined as the volume of water passing through a predetermined cross section of a river in a unit of time. It is usually measured in cubic meters per second. Not all the rivers are permanent; some are only temporary and flow only during high rainfall. Rivers are classified differently and according to one system devised by William Morris Avis, they are class...

ಮಲಬದ್ಧತೆ

Image
ವ್ಯಕ್ತಿಯಿಂದ ಹೊರಹಾಕಲು ತ್ರಾಸದಾಯಕವಾದ ಗಟ್ಟಿ ಮಲ ಸೃಷ್ಟಿಸುವ ಸಂಕಟವೇ ಮಲಬದ್ಧತೆ (constipation). ದೊಡ್ಡ ಕರುಳು ಆಹಾರದಿಂದ ಹೆಚ್ಚು ನೀರನ್ನು ಹೀರಿಕೊಳ್ಳುವ ಕಾರಣ ಈ ಸ್ಥಿತಿ ಉಂಟಾಗುತ್ತದೆ. ಆಹಾರವು ಜಠರ ಮತ್ತು ಕರುಳಿನ ಪ್ರದೇಶದ ಮೂಲಕ ಅತಿ ನಿಧಾನವಾಗಿ ಚಲಿಸಿದರೆ, ದೊಡ್ಡ ಕರುಳು ಹೆಚ್ಚು ನೀರನ್ನು ಹೀರಿಕೊಳ್ಳುತ್ತದೆ. ಪರಿಣಾಮ, ಮಲವು ಶುಷ್ಕ ಮತ್ತು ಗಟ್ಟಿಯಾಗುತ್ತದೆ. ದೇಹ ಮತ್ತು ಮನಸ್ಸು ಹೇಳಿಕೊಳ್ಳಲಾಗದ ವೇದನೆಯನ್ನು ಈ ಮಲಬದ್ಧತೆ ಸೃಷ್ಟಿಸುತ್ತದೆ. ಇದೀಗ ನವ್ಯ ನಾಗರಿಕತೆಯ ವ್ಯಾಧಿಯೇ ಆಗಿದೆ. ರೊಟ್ಟಿ ಪಲ್ಯ, ನುಚ್ಚು, ಬೀಸಿದ ಆಹಾರ ಧಾನ್ಯಗಳನ್ನು ತಿಂದು, ದುಡಿದು ಸುಖವಾಗಿ ನಿದ್ರಿಸುವ ಬಡವರಿಗೆ ಇದು ಬರುವುದಿಲ್ಲ. ಸದಾ ಪಿಜ್ಜಾ, ಬರ್ಗರ್, ಚಾಕೊಲೆಟ್, ಕರಿದ ತಿಂಡಿಗಳನ್ನು ತಿಂದು ಕುಳಿತು ಕೆಲಸ ಮಾಡುವ ವರ್ಗಕ್ಕೆ ಇದು ಅಂಟಿಕೊಳ್ಳುತ್ತದೆ. ಇದು ಅಪಥ್ಯ, ಆಹಾರ, ವಿಹಾರ, ವಿಚಾರಗಳಿಂದ ಉದ್ಭವಿಸುವ ವಿಕಾರ. ಮಲಬದ್ಧತೆ ಸ್ವತಂತ್ರ ಕಾಯಿಲೆ ಅಲ್ಲ. ಚಿಂತೆ, ದುಃಖ, ದುಮ್ಮಾನಗಳಿಂದ ಮಜ್ಜಾ ತಂತುಗಳು ಪ್ರಕ್ಷೋಭಗೊಂಡು ಕರುಳಿನ ಸ್ನಾಯುಗಳು ಅಂಕುಚನವಾಗುವುದೇ ಇದಕ್ಕೆ ಕಾರಣವೆಂಬುದು ವೈದ್ಯರ ವಿವರಣೆ. ಇದಕ್ಕೆ ಸರಿಯಾದ ಚಿಕಿತ್ಸೆ ಲಭಿಸದಿದ್ದರೆ ಮೂಲವ್ಯಾಧಿ ಹಾಗೂ ಕ್ಯಾನ್ಸರ್ ಕೂಡಾ ಆಗಬಹುದು. ಏನು ಕಾರಣ?     ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನ ಅಂಶವಿಲ್ಲದಿರುವುದು. ...

ಮಂಡೇಲಾರ ಭಾರತೀಯ ನಂಟು

Image
ಈ ತಿಂಗಳ ಆರಂಭದಲ್ಲಿ ನೆಲ್ಸನ್‌ ಮಂಡೇಲಾ ಸತ್ತಾಗ ಭಾರತದ ಗಣ್ಯರು ಸಲ್ಲಿಸಿದ ಶ್ರದ್ಧಾಂಜಲಿಗಳಲ್ಲಿ ದೇಶಭಕ್ತಿ­ಯನ್ನು ಎತ್ತಿಹಿಡಿಯುವ ದನಿ ಇತ್ತು. ಮಂಡೇಲಾ ಅವರ ನೈತಿಕ ಸ್ಥೈರ್ಯ, ಸ್ನೇಹಪರತೆ ಹಾಗೂ ಹೊಂದಾ­ಣಿಕೆ ಗುಣ ಮಹಾತ್ಮ ಗಾಂಧಿ ಅವರಿಗೆ ಹೋಲಿಕೆ­ಯಾಗುವಂತಿವೆ ಎಂದು ಹೊಗಳ­ಲಾಯಿತು (ಅದು ಹಾಗಿರುವುದು ಸತ್ಯ). ಮತ್ತೆ ಕೆಲವರು ಮಂಡೇಲಾ ಅವರ ಹೀರೊ ನೆಹರೂ ಆಗಿದ್ದರೇ ವಿನಾ ಗಾಂಧೀಜಿ ಅಲ್ಲ ಎಂದು ಹೇಳಿದರು (ಅದೂ ನಿಜವೇ). ಆದರೆ, ಈ ನುಡಿನಮನಗಳಲ್ಲಿ  ಮಹತ್ವದ ಅಂಶವೊಂದು ಬಿಟ್ಟುಹೋಗಿತ್ತು.   ಭಾರತೀಯ ಮೂಲದ ದಕ್ಷಿಣ ಆಫ್ರಿಕನ್ನರ ಜತೆ ಮಂಡೇಲಾ ಹೊಂದಿದ್ದ ಆಪ್ತ ಸಂಬಂಧವನ್ನು ವಿವರಿಸುವ ವಿವರಗಳು ಅಲ್ಲಿ ಕಾಣಲಿಲ್ಲ. 1940ರ ದಶಕ­ದಲ್ಲಿ ಮಂಡೇಲಾ, ಜೋಹಾನ್ಸ್‌ಬರ್ಗ್‌­ನಲ್ಲಿ ವಾಸಿ­ಸುತ್ತಿದ್ದಾಗ  ಅವರಿಗೆ ಯುವ  ಕ್ರಾಂತಿಕಾರಿ­ಗಳಾದ ಇಸ್ಮಾಯಿಲ್‌ ಮೀರ್‌ ಹಾಗೂ ಜೆ.ಎನ್‌. ಸಿಂಗ್‌ ಅವರ ಸ್ನೇಹ ಲಭಿಸಿತ್ತು. ಅವರಿಬ್ಬರ ಮೂಲಕ ಮಂಡೇಲಾಗೆ ಭಾರತದ ಸ್ವಾತಂತ್ರ್ಯ ಚಳವಳಿ ಹಾಗೂ ಗಾಂಧೀಜಿ ಪ್ರಭಾವದ ಅರಿವಾಯಿತು. 1946ರಲ್ಲಿ ತಾರತಮ್ಯದಿಂದ ಕೂಡಿದ ಭೂಕಾಯ್ದೆಯ ವಿರುದ್ಧ  ನಟಾಲ್‌ ಹಾಗೂ ಟ್ರಾನ್ಸ್‌ವಾಲ್‌ನಲ್ಲಿ ಭಾರತೀಯರು ನಡೆಸಿದ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಗಾಂಧಿ ಮಾದರಿಯ ಸತ್ಯಾಗ್ರಹ ವಿಧಾನ ಎಂಥದ್ದು ಎಂಬುದು ಅವರಿಗೆ ಮನದಟ್ಟಾಯಿತು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಸಹ...

ಹಿಮಾಲಯದಲ್ಲಿ ತಪ್ಪು ಹೆಜ್ಜೆಗಳು, ವಿನಾಶಕ್ಕೆ ನಾಂದಿ

ಮ ಹಾತ್ಮ ಗಾಂಧಿ ಅವರ ಬ್ರಿಟಿಷ್ ಶಿಷ್ಯೆ ಮೀರಾ ಬೆನ್ ಅವರು ಉತ್ತರಾಖಂಡ ಹಿಮಾಲಯದಲ್ಲಿ 1940ರ ದಶಕದಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದರು. ಗಿರಿಶ್ರೇಣಿಗಳಲ್ಲಿ ಪಯಣಿಸುತ್ತಿದ್ದಾಗ, ಬಾಂಜ್ ಓಕ್‌ನ ಕಾಡುಗಳನ್ನು ಚಿರ್‌ಪೈನ್‌ನ ಏಕಸಂಸ್ಕೃತಿಯ ಕಾಡುಗಳಾಗಿ ಪರಿವರ್ತಿಸುವ ಅರಣ್ಯ ಇಲಾಖೆಯ ಪ್ರಯತ್ನಗಳಿಂದ ಅವರು ದಿಗಿಲುಗೊಂಡಿದ್ದರು. ಈ ಕ್ರಮದ ಹಿಂದಿದ್ದ ಮುಖ್ಯ ಪ್ರೇರಣೆ ವಾಣಿಜ್ಯ ಉದ್ದೇಶ. ಕೈಗಾರಿಕಾ ಟಿಂಬರ್ ಹಾಗೂ ರೆಸಿನ್ (ಪ್ಲಾಸ್ಟಿಕ್ ತಯಾರಿಕೆಗೆ ಅಗತ್ಯವಾದ ಮರದಿಂದ ಒಸರುವ ದ್ರವ್ಯ ಪದಾರ್ಥ) ಮೂಲವಾಗಿ ಚಿರ್‌ಮರಗಳಿಗೆ ಬಹಳ ಬೇಡಿಕೆಯಿತ್ತು. ಆದರೆ ಸ್ಥಳೀಯ ರೈತಸಮುದಾಯದ ಹಿತಗಳಿಗೆ ಇದು ವಿರುದ್ಧವಾಗಿತ್ತು. ಏಕೆಂದರೆ ಅವರಿಗೆ ಇಂಧನ, ಮೇವಿನ ಅಮೂಲ್ಯ ಮೂಲವಾಗಿದ್ದುದು ಬಾಂಜ್. 1952ರಲ್ಲಿ ಬರೆದ `ಸಮ್‌ಥಿಂಗ್ ರಾಂಗ್ ಇನ್ ದಿ ಹಿಮಾಲಯ' ಎಂಬ ಲೇಖನದಲ್ಲಿ, ಬಾಂಜ್ ಜಾಗದಲ್ಲಿ ಚಿರ್‌ಮರಗಳನ್ನು ನೆಡುವುದು ಸಾಮಾಜಿಕವಾಗಿ ಅನ್ಯಾಯವಾದದ್ದು ಹಾಗೂ ಪರಿಸರ ದೃಷ್ಟಿಯಿಂದ ತಪ್ಪು ಮಾರ್ಗದರ್ಶನದಿಂದ ಕೂಡಿದ್ದು ಎಂದು ಮೀರಾ ಬೆನ್ ಎಚ್ಚರಿಸಿದ್ದರು. ಓಕ್ ಅರಣ್ಯಗಳಿಂದಾಗಿ ಹುಲುಸಾಗಿ ಕೆಳಗೆ ಬಿದ್ದ ಉದುರೆಲೆಗಳು ಮುಂಗಾರು ಮಳೆಯ ನೀರನ್ನು ಹೀರಿಕೊಂಡು `ಸುಂದರವಾದ ಸಿಹಿಯಾದ ತಂಪಾದ ನೀರಿನ ಬುಗ್ಗೆ'ಗಳನ್ನು ಸೃಷ್ಟಿಸುತ್ತವೆ. ಹಳ್ಳಿಗರಿಗೂ ಇವೇ ಕುಡಿಯುವ ನೀರಿನ ಮುಖ್ಯ ಮೂಲ. ಆದರೆ ಚಿರ್‌ಅರಣ್ಯಗಳಲ್ಲಿ ಬರೀ ಬರಿದಾದ ಇಳಿಜಾರುಗಳು, ಜೊತೆ...