ಮಲಬದ್ಧತೆ



ವ್ಯಕ್ತಿಯಿಂದ ಹೊರಹಾಕಲು ತ್ರಾಸದಾಯಕವಾದ ಗಟ್ಟಿ ಮಲ ಸೃಷ್ಟಿಸುವ ಸಂಕಟವೇ ಮಲಬದ್ಧತೆ (constipation). ದೊಡ್ಡ ಕರುಳು ಆಹಾರದಿಂದ ಹೆಚ್ಚು ನೀರನ್ನು ಹೀರಿಕೊಳ್ಳುವ ಕಾರಣ ಈ ಸ್ಥಿತಿ ಉಂಟಾಗುತ್ತದೆ. ಆಹಾರವು ಜಠರ ಮತ್ತು ಕರುಳಿನ ಪ್ರದೇಶದ ಮೂಲಕ ಅತಿ ನಿಧಾನವಾಗಿ ಚಲಿಸಿದರೆ, ದೊಡ್ಡ ಕರುಳು ಹೆಚ್ಚು ನೀರನ್ನು ಹೀರಿಕೊಳ್ಳುತ್ತದೆ. ಪರಿಣಾಮ, ಮಲವು ಶುಷ್ಕ ಮತ್ತು ಗಟ್ಟಿಯಾಗುತ್ತದೆ. ದೇಹ ಮತ್ತು ಮನಸ್ಸು ಹೇಳಿಕೊಳ್ಳಲಾಗದ ವೇದನೆಯನ್ನು ಈ ಮಲಬದ್ಧತೆ ಸೃಷ್ಟಿಸುತ್ತದೆ.

ಇದೀಗ ನವ್ಯ ನಾಗರಿಕತೆಯ ವ್ಯಾಧಿಯೇ ಆಗಿದೆ. ರೊಟ್ಟಿ ಪಲ್ಯ, ನುಚ್ಚು, ಬೀಸಿದ ಆಹಾರ ಧಾನ್ಯಗಳನ್ನು ತಿಂದು, ದುಡಿದು ಸುಖವಾಗಿ ನಿದ್ರಿಸುವ ಬಡವರಿಗೆ ಇದು ಬರುವುದಿಲ್ಲ. ಸದಾ ಪಿಜ್ಜಾ, ಬರ್ಗರ್, ಚಾಕೊಲೆಟ್, ಕರಿದ ತಿಂಡಿಗಳನ್ನು ತಿಂದು ಕುಳಿತು ಕೆಲಸ ಮಾಡುವ ವರ್ಗಕ್ಕೆ ಇದು ಅಂಟಿಕೊಳ್ಳುತ್ತದೆ. ಇದು ಅಪಥ್ಯ, ಆಹಾರ, ವಿಹಾರ, ವಿಚಾರಗಳಿಂದ ಉದ್ಭವಿಸುವ ವಿಕಾರ. ಮಲಬದ್ಧತೆ ಸ್ವತಂತ್ರ ಕಾಯಿಲೆ ಅಲ್ಲ. ಚಿಂತೆ, ದುಃಖ, ದುಮ್ಮಾನಗಳಿಂದ ಮಜ್ಜಾ ತಂತುಗಳು ಪ್ರಕ್ಷೋಭಗೊಂಡು ಕರುಳಿನ ಸ್ನಾಯುಗಳು ಅಂಕುಚನವಾಗುವುದೇ ಇದಕ್ಕೆ ಕಾರಣವೆಂಬುದು ವೈದ್ಯರ ವಿವರಣೆ. ಇದಕ್ಕೆ ಸರಿಯಾದ ಚಿಕಿತ್ಸೆ ಲಭಿಸದಿದ್ದರೆ ಮೂಲವ್ಯಾಧಿ ಹಾಗೂ ಕ್ಯಾನ್ಸರ್ ಕೂಡಾ ಆಗಬಹುದು.


ಏನು ಕಾರಣ?

  •     ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನ ಅಂಶವಿಲ್ಲದಿರುವುದು.
  •     ದೈಹಿಕ ವ್ಯಾಯಾಮ ಮಾಡದಿರುವುದು.
  •     ನೀರು, ಎಳನೀರು ಮುಂತಾದ ದ್ರವ ಪದಾರ್ಥಗಳನ್ನು ಕಡಿಮೆ ಸೇವಿಸುವುದು.
  •     ಹೊತ್ತಲ್ಲದ ಹೊತ್ತಿನಲ್ಲಿ ಆಹಾರ ಸೇವನೆ.
  •     ತಡ ರಾತ್ರಿ ಮಲಗುವುದು.
ಮಲಬದ್ಧತೆ ಸೃಷ್ಟಿಸುವ ಆಹಾರ

  •     ಚಿಪ್ ಮತ್ತು ಕರಿದ ತಿಂಡಿಗಳು
  •     ಹಾಲಿನ ಉತ್ಪನ್ನಗಳು
  •     ಕುಕ್ಕೀಸ್, ಪೇಸ್ಟ್ರಿ ಮತ್ತು ಕೇಕ್‌ಗಳು
  •     ಕೆಂಪು ಮಾಂಸ (ರೆಡ್‌ಮೀಟ್)
  •     ನೋವು ನಿವಾರಕ ಮಾತ್ರೆಗಳು
ನಿವಾರಣೆ ಹೇಗೆ?

  •     ಶುಚಿ ಆಹಾರ ಮತ್ತು ನೀರಿನ ಸೇವನೆ.
  •     ನಿಯಮಿತ ಸಮಯದಲ್ಲಿ ಮಿತ ಆಹಾರ ಸೇವನೆ.
  •     ಖಾರ, ಮಸಾಲೆ, ಮಾಂಸಾಹಾರ ಮಿತವಾಗಿರಬೇಕು.
  •     ನೀರು, ಜ್ಯೂಸ್‌ನಂಥ ಪಾನೀಯ ಸೇವನೆ.
  •     ತಾಜಾ ತರಕಾರಿ, ಹಣ್ಣು ಮತ್ತು ಹಸಿರು ಸೊಪ್ಪುಗಳು ನಿಮ್ಮ ಪ್ರತಿ ಹೊತ್ತಿನ ಊಟದ ಭಾಗವಾಗಿರಲಿ.
  •     ಕಾಫಿ, ಟೀ ಸೇವನೆ ಕಡಿಮೆ ಮಾಡಿ.
  •     ಧೂಮಪಾನ, ಮದ್ಯಪಾನದಿದ ಮತ್ತು ಮಾದಕ ದ್ರವ್ಯಗಳಿಂದ ದೂರವಿರಿ.
  •     ಕರಿದ ತಿಂಡಿಗಳು, ಸೋಡಾ ಬಳಸಿರುವಂಥ, ಮೈದಾ ಹೆಚ್ಚಿರುವ ಆಹಾರಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು.
  •     ಅವಸರದ ಊಟ ಸಲ್ಲದು. ಆಹಾರವನ್ನು ಹಲ್ಲುಗಳಿಂದ ಜಗಿದು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.
  •     ನಿತ್ಯ ವ್ಯಾಯಾಮ ಅಥವಾ ವಾಕ್ ಕಡ್ಡಾಯವಾಗಿಸುವುದು.
  •     ಮಾನಸಿಕವಾಗಿ ಸದಾ ಪ್ರಸನ್ನತೆಯನ್ನು ರೂಢಿಸಿಕೊಳ್ಳುವುದು.
  •     ಸರಿಯಾದ ಸಮಯಕ್ಕೆ ನಿದ್ರೆ.
  •     ಯಾವುದೇ ಕಾರಣಕ್ಕೂ ಭೇದಿಯಾಗುವ ಮಾತ್ರೆಗಳನ್ನು ತೆಗೆದುಕೊಂಡು ಸ್ವತಃ ವೈದ್ಯರಾಗಲು ಪ್ರಯತ್ನಿಸ ಬೇಡಿ.
  •     ವಾರದಲ್ಲಿ ಒಂದು ದಿವಸ ಬರೀ ಹಣ್ಣು, ಸೌತೆಕಾಯಿ ಮತ್ತು ಮೊಳಕೆ ಕಾಳುಗಳ ಸೇವನೆಯ ಪಥ್ಯದ ಉಪವಾಸ ಮಾಡುವುದು.
ಒಂದಿಷ್ಟು ಮನೆ ಮದ್ದು

  •     ದಿನದಲ್ಲಿ ಕೆಲವು ಬಾರಿ ಒಂದು ಚಮಚದಂತೆ ಜೇನುತುಪ್ಪ ಸೇವಿಸುತ್ತಿರಿ.
  •     ಊಟವಾದ ಅರ್ಧಗಂಟೆ ನಂತರ ಬಾಳೆಹಣ್ಣು ಸೇವಿಸುವುದನ್ನು ರೂಢಿಸಿಕೊಳ್ಳಿ.
  •     ಮಾವಿನಹಣ್ಣು ಮಲಬದ್ಧತೆಗೆ ಪರಿಣಾಮಕಾರಿ.
  •     ಅರ್ಧ ಕಪ್ ಕ್ಯಾಬೇಜ್ ಅಥವಾ ಮೂಲಂಗಿ ಜೂಸ್ ಅನ್ನು ದಿನಕ್ಕೆರಡು ಬಾರಿ ಸೇವಿಸಿ.
  •     ಹಾಲಿನ ಜತೆ ಖರ್ಜೂರ ಸೇರಿಸಿ ಕುಡಿಯಿರಿ.
  •     ಮಲವಿಸರ್ಜನೆ ಕಸರತ್ತಾಗಬಾರದು. ಆಗ ಮಾತ್ರ ನಿಮ್ಮ ಆರೋಗ್ಯದ ಬಾಗಿಲು ತೆರೆಯುತ್ತದೆ.
ಮಲಬದ್ಧತೆ ನವ್ಯ ನಾಗರಿಕತೆಯ ವ್ಯಾಧಿ. ರೊಟ್ಟಿ ಪಲ್ಯ, ನುಚ್ಚು, ಬೀಸಿದ ಆಹಾರ ಧಾನ್ಯಗಳನ್ನು ತಿಂದು, ದುಡಿದು ಸುಖವಾಗಿ ನಿದ್ರಿಸುವ ಬಡವರಿಗೆ ಇದು ಬರುವುದಿಲ್ಲ. ಸದಾ ಪಿಜ್ಜಾ, ಬರ್ಗರ್, ಚಾಕೊಲೆಟ್, ಕರಿದ ತಿಂಡಿಗಳನ್ನು ತಿಂದು ಕುಳಿತು ಕೆಲಸ ಮಾಡುವ ವರ್ಗಕ್ಕೆ ಇದು ಅಂಟಿಕೊಳ್ಳುತ್ತದೆ...


    ಜಮುನಾ ರಾಣಿ .ಎಚ್.ಎಸ್
    ಕೃಪೆ:ಕನ್ನಡಪ್ರಭ 
.

Comments

Popular posts from this blog

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಸೇಲ್ ಡೀಡ್ ಹೀಗಿರಲಿ

ಗುಬ್ಬಿ ತೋಟದಪ್ಪರವರು ಯಾರು? ಅವರ ಸಾಧನೆಗಳೇನು?