Posts

Showing posts from November, 2012

ಹೋಲಿಕೆಯೆಂಬ ಮಹಾರೋಗ

Image
By Sudheendra             ಇದು ಒಬ್ಬಿಬ್ಬರ ಸಮಸ್ಯೆಯಲ್ಲ. ಈ ಸಮಸ್ಯೆ ಬಹುತೇಕರನ್ನು ಕಾಡದೆ ಬಿಟ್ಟಿಲ್ಲ, ಜೀವನದ ಪ್ರತಿಹಂತದಲ್ಲೂ ಒಂದೊಂದು ರೂಪದಲ್ಲಿ ಇದು ನಮ್ಮನ್ನು ಆವಾರಿಸಿಕೊಳ್ಳುತ್ತದೆ. ಬೇಕಾದರೆ ಇದನ್ನೊಂದು ರೋಗವೆಂದೇ ಕರೆಯಿರಿ, ಮಾನಸಿಕ ವ್ಯಾಧಿಯೆನ್ನಿ. ಒಟ್ಟಿನಲ್ಲಿ ಇದೊಂದು ರೀತಿಯ ಸಾರ್ವತ್ರಿಕ ಬೇನೆ. ಈ ‘ಹೋಲಿಕೆಯ ರೋಗ’ ಅದ್ಯಾವಾಗ ಬಂದು ನಮ್ಮ ಮನಸ್ಸನ್ನು ಹೊಕ್ಕುತ್ತದೋ ಗೊತ್ತಿಲ್ಲ, ನಮ್ಮನ್ನು ಪರಸ್ಪರ ಸ್ಪರ್ಧೆಗೆ ಹಚ್ಚುತ್ತದೆ. ಅಲ್ಲಿಂದ ನೆಮ್ಮದಿ, ಸಮಾಧಾನ ಕಾಲುಕೀಳುತ್ತದೆ. ಈ ಮನಸ್ಥಿತಿ ಹುಟ್ಟಿದಾರಭ್ಯ ನಮ್ಮೊಂದಿಗೆ ಬೆಳೆಯುತ್ತದೆ. ಬೇಕಾದರೆ ಗಮನಿಸಿ, ಹುಟ್ಟಿದಾಕ್ಷಣ ಆಸ್ಪತ್ರೆಯ ಪಕ್ಕದ ಬೆಡ್ಡಿನ ಆಗ ತಾನೇ ಕಣ್ಣುಬಿಟ್ಟ ಮಗುವಿನ ಬಣ್ಣ, ಮೈಮಾಟ, ಕಣ್ಣು, ಮೂಗು, ಬಾಯಿ, ಇತ್ಯಾದಿಗಳೊಂದಿಗೆ ಮಗುವಿನ ಹೋಲಿಕೆ ಶುರುವಾಗುತ್ತದೆ. ಅಲ್ಲೇ ಪೋಷಕರು ಈ ಹೋಲಿಕೆಯ ರೋಗವನ್ನು ತನ್ನ ಕುಡಿಗೆ ವರ್ಗಾಯಿಸುತ್ತಾರೆ. ಆಸ್ಪತ್ರೆಯಿಂದ ಮನೆಗೆ ಬರುವ ತನಕ ಪಕ್ಕದ ಬೆಡ್ಡಿನ ಮಗುವಿನೊಂದಿಗೆ ಹೋಲಿಕೆ ಚಾಲ್ತಿಯಲ್ಲಿರುತ್ತದೆ. ಮಗುವಿನ ಕೇಕೆ, ಗುಳಿ ಬೀಳುವ ಕೆನ್ನೆಗಳು, ಅರಳಿಕೊಂಡ ಕಣ್ಣು, ಬಿಗಿಹಿಡಿದ ಕೈ ಮುಷ್ಠಿ, ಹಾಲು ಗುಟುಕಿಸುವ ಪರಿ ಎಲ್ಲವನ್ನೂ ಎರಡು ಕಂದಮ್ಮಗಳಲ್ಲಿ ಉಭಯ ಪೋಷಕರು ಗಮನಿಸುತ್ತಲೇ ಇರುತ್ತಾರೆ.              ನಂತರ ಬಿಡಿ, ಬ...

ಸ೦ಸ್ಥಾನ

Harish Athreya  ಚಪ್ಪಟೆ ಕಲ್ಲು ಮತ್ತೊ೦ದು  ’ ಎಡೆ ’  ಇಡಲು ಉಪಯೋಗಿಸುತ್ತಿದ್ದ ಅದಕ್ಕಿ೦ತ ಚಿಕ್ಕದಾದ ತುದಿಯಲ್ಲಿ ಬಿಲ್ಲಿನಾಕಾರದಲ್ಲಿ ಕೆತ್ತಿರುವ ಕಲ್ಲು ಅನಾಥವಾಗಿ ಬಿದ್ದಿದ್ದವು. ತುದಿಯಲ್ಲಿ ಬಿಲ್ಲಿನಾಕಾರದಲ್ಲಿದ್ದ ಕಲ್ಲಿನ ಮೇಲೆ ಕೂತ ಕುಪ್ಪಿ ಸುಮ್ಮನಿರಲಾರದೆ ಕಲ್ಲನ್ನು ಕೈಯಿ೦ದ ಕೆರೆಯತೊಡಗಿದ ,  ಕೈಬೆರಳುಗಳು ಆಗಾಗ ಕಲ್ಲಿನ ಗು೦ಡಿಯಲ್ಲಿಳಿದು ಮತ್ತೆ ಹತ್ತಿ ನ೦ತರ ಬೇರಾಗಿ ಮತ್ತೆ ಇಳಿದು ಹತ್ತಿ ಆಡುತ್ತಿದ್ದವು ಬೆರಳಿಗೆ ಸಿಕ್ಕ ಮಣ್ಣನ್ನು ಕೆರೆಯತೊಡಗಿದ್ದರಿ೦ದ  ಕಲ್ಲಿನಲ್ಲಿ ಅಕ್ಷರಗಳ೦ಥವು ಕ೦ಡುಬ೦ತು. ವಿಹಾರಿ ’ ಏ ಕುಪ್ಪಿ ಅದೇನೋ ಬರೆದ೦ತಿದೆ ನೋಡು ’   ಎ೦ದಳು ,  ಆ ಭಾಷೆ ಅರ್ಥವಾಗದಿದ್ದರಿ೦ದ ಸುಮ್ಮನಾದ ,  ತಕ್ಷಣ ಚರಿತ್ರೆ ಮೇಷ್ಟ್ರರ ನೆನಪಾಯ್ತು ವಿಹಾರಿಗೆ ಮನೆಗೆ ಹೋಗುವ೦ತೆ ಹೇಳಿ ಮೇಷ್ಟರ ಬಳಿಗೆ ಬ೦ದ ,  ನ೦ಗೆ ಸಾಸನ ಸಿಕ್ಕಿದೆ ಸರ್ ಅ೦ದ ಅಚ್ಚರಿಗೊ೦ಡ ಮೇಷ್ಟ್ರು  ’ ನಡಿ ನೋಡಾಣ ’   ಎ೦ದವರೇ ಒ೦ದು ಇ೦ಕ್ ಬಾಟಲ್ ಟೂತ್ ಬ್ರಶ್ ಪೆನ್ನು ಪೇಪರು ಹಿಡಿದುಕೊ೦ಡು ಹೊರಟೇ ಬಿಟ್ಟರು ಕಲ್ಲು ಬ೦ಡೆ ಸಿಕ್ಕಾಗ ಮೊದಲು ಕಲ್ಲನ್ನು ತೊಳೆದು ಸಿಕ್ಕಿಕೊ೦ಡಿದ್ದ ಮಣ್ಣನ್ನು ತೆಗೆದು ಅಕ್ಷರಗಳು ಸ್ಪಷ್ಟವಾಗಿ ಮೂಡುವ ತನಕ ಬ್ರಶ್ ನಿ೦ದ ಉಜ್ಜಿ ಸ್ಪಷ್ಟಗೊಳಿಸಿ ಇ೦ಕ್ ಚೆಲ್ಲಿ ಅದರ ಪ್ರತಿಯನ್ನು ಮಾಡಿಕೊ೦ಡು ಕೈಲಿ ಬರೆದು ಪುರಾತತ್ವ ಇಲಾಖೆಗೆ ಕೊ೦ಡೊಯ್ದಾಗ ನ...

Sanya Nanshan Cultural Park

Image
Sanya Nanshan Buddhism CulturalTourism Zone is one of the largest cultural tourist attractions of its kind in China, it's located just 40 kilometres west of Sanya City along the Hainan West Expressway.  There are three separate parks within Nanshan: Nanshan Buddhism Culture Park is a window on China's traditional Buddhism culture;  The Felicty and Longevity Culture Park reflects an atmosphere of peace, harmony and long life; The Nanshan Cultural Park highlights China's diverse social customs. The key feature of the zone is the three sided statue of Guan Yin Buddha, Buddhist Temples, spectacular landscape and sea views. The zone has been designated a Priority Project of China Tourism Development and earmarked for further development. Recently completed, the bronze statue of Guan Yin Buddha stands 108 metres tall on a man made island in the sea just off Nanshan. It's larger than the statue of liberty.  Nanshan has been deemed an auspiciou...

`ಕನಕ ಅರಮನೆ' ಅನಾವರಣ

Image
ವಿಜಯ್ ಹೂಗಾರ  ಸುಮಾರು ಐದು ವರ್ಷಗಳ ಹಿಂದಿನ ಮಾತು. ಭಕ್ತ ಶ್ರೇಷ್ಠ ಕನಕದಾಸರ ಜನ್ಮಭೂಮಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಸಮೀಪದ ಬಾಡದಲ್ಲಿ ಸಂಶೋಧಕ ಡಾ.ಸುಂದರ್ ನಡೆಸಿದ ಉತ್ಖನನ ಸಂದರ್ಭದಲ್ಲಿ ಕಟ್ಟಡವೊಂದರ ಅವಶೇಷಗಳ ಗೋಚರವಾಯಿತು. ಇದು ಪ್ರಾಚೀನ ಕಟ್ಟಡವೊಂದರ ಅವಶೇಷ ಎನ್ನುವುದು ಮೇಲ್ನೋಟಕ್ಕೆ ಸಾಬೀತಾದರೂ ಇದರ ಹಿಂದಿನ ಸತ್ಯ ಅರಿವಾದಾಗ ಸಂಶೋಧಕರಿಗೇ ಅಚ್ಚರಿ! ಕಾರಣ, ಇದು ಕೇವಲ ಕಟ್ಟಡಗಳ ಅವಶೇಷವಾಗಿರಲಿಲ್ಲ. ಬದಲಿಗೆ ಉತ್ಖನನ ಕಾರ್ಯ ಮುಂದುವರೆದಂತೆ ಅದೇ ಜಾಗದಲ್ಲಿ ಸಿಕ್ಕ ಮಡಿಕೆ ಚೂರುಗಳು, ಬೆಳ್ಳಿ ಹಾಗೂ ಕಲ್ಲಿನ ವಸ್ತು ಸಿಗುತ್ತಾ ಹೋದವು. ಇದರ ಸಂಶೋಧನೆ ನಡೆಸಿದಾಗ ಕಂಡದ್ದೇನೆಂದರೆ ಇದು ಕನಕದಾಸರು ವಿಜಯನಗರದ ಅರಸರ ಕಾಲದಲ್ಲಿ ದಂಡನಾಯಕನಾಗಿದ್ದ ಸಂದರ್ಭದಲ್ಲಿ ನಿರ್ಮಿಸಿದ ಅರಮನೆ ಎಂದು.  ಐದಾರು ಶತಮಾನಗಳ ಕಾಲ ಭೂಗರ್ಭದಲ್ಲಿ ಮರೆಯಾಗಿದ್ದ ಈ ಅರಮನೆಯ ಅವಶೇಷಗಳ ಜೊತೆಗೇ ಕನಕರ ಚರಿತ್ರೆ ಪುಷ್ಠಿಗೊಳಿಸುವ ಹೊಸದೊಂದು ಪುರಾವೆ ಬೆಳಕಿಗೆ ಬಂದಿತ್ತು. ಕನಕದಾಸರ ಇತಿಹಾಸಕ್ಕೆ ಹೊಸದೊಂದು ಮೈಲುಗಲ್ಲು ಇದಾಗಿದ್ದು, ಇದನ್ನು ಹಾಗೆಯೇ ಕಾಪಾಡಿಕೊಂಡು ಬರುವ ಪಣತೊಟ್ಟರು ಸಂಶೋಧಕರು.  2007ರಲ್ಲಿ ಸಿಕ್ಕ ಈ ಪುರಾವೆಗಳು ಈಗ ಸಂಶೋಧಕರ ಅಣತಿಯಂತೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಸಂರಕ್ಷಿತ ತಾಣವನ್ನಾಗಿ ಘೋಷಿಸಿದೆ. ಅದರ ಸುತ್ತಲು ತಂತಿಬೇಲಿಯಿಂದ ರಕ್ಷಣೆ ಮಾಡಿದೆ. ಉತ್ಖನ...

ಆತ್ಮವಿಶ್ವಾಸದ ಮುಂದೆ ಕೈ ಕಾಲಿದ್ದವರೂ ಹಿಂದೆ!

Image
By Pratap simha ನೀವೇನಾದರೂ 1996ರಲ್ಲಿ ನಡೆದ ಅಟ್ಲಾಂಟಾ ಒಲಿಂಪಿಕ್ಸ್್ನ ಜಿಮ್ನಾಸ್ಟಿಕ್ ಸ್ಪರ್ಧೆಯನ್ನು ನೋಡಿದ್ದೇ ಆಗಿದ್ದರೆ ಕೆರ್ರಿ ಸ್ಟ್ರಗ್ ಖಂಡಿತ ನಿಮಗೆ ನೆನಪಿರುತ್ತಾಳೆ.  Pint-Sized Dynamo  ಎಂದೇ ಹೆಸರಾದ ಅವಳು ಅಮೆರಿಕದ   Magnificent Seven ಖ್ಯಾತಿಯ ಜಿಮ್ನಾಸ್ಟಿಕ್ ತಂಡದ 7 ಸದಸ್ಯರಲ್ಲಿ ಒಬ್ಬಳು. ಅವರಲ್ಲಿ ಶಾನನ್ ಮಿಲ್ಲರ್ ಅಮೆರಿಕದ ಅತ್ಯಂತ ಪ್ರಸಿದ್ಧ ಜಿಮ್ನಾಸ್ಟ್. ಇನ್ನು 14 ವರ್ಷದ ಡಾಮಿನಿಕ್ ಮೊಸೇನು ನವತಾರೆ. ಡಾಮಿನಿಕ್ ಡಾಸ್, ಅಮಿ ಚೋವ್, ಅಮಂಡಾ ಬೋರ್ಡೆನ್, ಜೈಸಿ ಫೆಲ್ಪ್ಸ್ ಇತರ ಖ್ಯಾತನಾಮ ಹೆಸರುಗಳಾದರೆ 4 ಅಡಿ 9 ಅಂಗುಲದ ಕೆರ್ರಿ ಸ್ಟ್ರಗ್ ಖ್ಯಾತಿಯಲ್ಲಿ ಎಲ್ಲರಿಗಿಂತ ಕಡೆಯವಳು. ನಿಜ ಹೇಳಬೇಕೆಂದರೆ ಅವಳ ಬಗ್ಗೆ ಅಷ್ಟಾಗಿ ಯಾವ ಭರವಸೆಯೂ ಇರಲಿಲ್ಲ. ಇಂತಹ 7 ಜನರ ಅಮೆರಿಕ ತಂಡ ರಷ್ಯಾವನ್ನು ಎದುರಿಸಲು ಸಿದ್ಧವಾಗಿತ್ತು. ಇವತ್ತು ಚೀನಿಯರು, ಜಪಾನಿಯರು, ಕೊರಿಯನ್ನರು ಜಿಮ್ನಾಸ್ಟಿಕ್್ನಲ್ಲಿ ಸಡ್ಡುಹೊಡೆಯುತ್ತಿರಬಹುದು, ಆದರೆ ಅಟ್ಲಾಂಟಾ ಒಲಿಂಪಿಕ್ಸ್್ಗೂ ಮುನ್ನ 40 ವರ್ಷಗಳ ಕಾಲ ಜಿಮ್ನೇಷಿಯಂ ಅಂಗಳವನ್ನು ಆಳಿದ್ದೇ ರಷ್ಯನ್ ಬಾಲೆಯರು. 1948ರಿಂದ ರಷ್ಯನ್ನರನ್ನು ಸೋಲಿಸಲು ಯಾವೊಂದು ತಂಡಕ್ಕೂ ಆಗಿರಲಿಲ್ಲ. 1996ರಲ್ಲೂ ರಷ್ಯನ್ನರದ್ದೇ ದರ್ಬಾರು ನಡೆಯುತ್ತದೆ ಎಂದು ಎಲ್ಲರೂ ಭಾವಿಸಿದ್ದರು. 1996, ಜುಲೈ 23ರಂದು ನಡೆದಿದ್ದೇ ಬೇರೆ! ತಂಡ ಸ್ಪರ್ಧೆಯ ಕೊನೆಯ ಸುತ್ತಿನ ...

ಇಸ್ರೇಲ್ ಎಂಬ ಅದ್ಭುತ ‘ಮರುಳು’ ಭೂಮಿ!

Image
ನನಗಂತೂ ನಂಬಿಕೆ ಬರಲಿಲ್ಲ. ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಕೇಳಿದ್ದು ನಿಜ. ಆದರೆ ಸ್ವತಃ ಅಲ್ಲಿಗೆ ಹೋಗಿ ನೋಡಿದರೂ ನಂಬಿಕೆ ಬರುತ್ತಿಲ್ಲ. ಜೋರ್ಡಾನ್ ರಾಜಧಾನಿ ಅಮ್ಮಾನ್್ನಿಂದ ಡೆಡ್ ಸೀ (ಮೃತ ಸಮುದ್ರ) ಮಾರ್ಗವಾಗಿ, ರಸ್ತೆ ಮೂಲಕ ಇಸ್ರೇಲ್ ಗಡಿಯನ್ನು ದಾಟುತ್ತಿದ್ದರೆ, ಕಣ್ಣಿನ ಜೀಕು ಹಾಯುವ ತನಕ ಬರೀ ಮರಳುಗಾಡು. ದುರ್ಬೀನು ಹಿಡಿದು ಹುಡುಕಿದರೂ ಒಂದು ಮರವಾಗಲಿ, ಹಸಿರು ಎಂಬ ವಸ್ತುವಾಗಲಿ ಕಾಣ ಸಿಗುವುದಿಲ್ಲ. ಎಲ್ಲೆಡೆ ನಿರುಪಯುಕ್ತ ಮಣ್ಣು. ಹನಿ ನೀರಿನ ಲವಲೇಶವೂ ಇಲ್ಲದ ನಿರ್ದಯಿ ಭೂಮಿ. ಮುಗಿಲು ಮುಟ್ಟುವ ಮರುಭೂಮಿ. ದಾರಿ ಸಾಗಿದ್ದೇ ತಿಳಿಯದ ಆ ಮರುಳುಗಾಡಿನಲ್ಲಿ ಹಸಿರು ಎಂಬ ಪದದ ಅರ್ಥವೂ ಆಗುವುದಿಲ್ಲ. ಊಹಿಸಿಕೊಳ್ಳಲೂ ಆಗುವುದಿಲ್ಲ. ಎರಡು ಗಂಟೆ ಪ್ರಯಾಣದ ಬಳಿಕ, ಹತ್ತಿರ ಹತ್ತಿರ ಜೆರುಸಲೆಮ್್ಗೆ ಬರುವ ತನಕವೂ ಇದೇ ದೃಶ್ಯ. ಇಸ್ರೇಲ್್ನ ಸಾಹಸ, ಪರಾಕ್ರಮ, ವೈರಿಗಳನ್ನು ಮಟ್ಟ ಹಾಕುವ ರೀತಿ, ಭಯೋತ್ಪಾದನೆ ವಿರುದ್ಧ ಸೆಣಸುವ ಛಲ, ನಾಲ್ಕೂ ದಿಕ್ಕಿಗೆ ವೈರಿಗಳನ್ನು ಕಟ್ಟಿಕೊಂಡರೂ ಸದಾ ಅವರಿಗೇ ಸಿಂಹಸ್ವಪ್ನವಾಗಿರುವ ಇಸ್ರೇಲ್ ಕಥೆಗಳನ್ನು ಕೇಳಿದ್ದರೂ, ಕೃಷಿ ರಂಗದಲ್ಲೂ ಇದು ಜಗತ್ತಿನಲ್ಲಿಯೇ ಮುಂದುವರಿದ ದೇಶ ಎಂಬುದನ್ನು ಅಲ್ಲಿಗೆ ಹೋದ ಬಳಿಕವೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸುಮಾರು ನಾನೂರು- ಐನೂರು ಕಿಮಿ ಓಡಾಡಿದರೂ ಹಸಿರೇ ಕಾಣದ ದೇಶ, ಬುರುಡೆ ಬರಡುಭೂಮಿ ಹೊಂದಿರುವ ದೇಶ, ಕೃಷಿಯಲ್ಲೂ ಅಗಾಧ ಸಾಧನೆ ಮಾಡಿದೆ ಅ...