ಸ೦ಸ್ಥಾನ

Harish Athreya 
ಚಪ್ಪಟೆ ಕಲ್ಲು ಮತ್ತೊ೦ದು ಎಡೆ ಇಡಲು ಉಪಯೋಗಿಸುತ್ತಿದ್ದ ಅದಕ್ಕಿ೦ತ ಚಿಕ್ಕದಾದ ತುದಿಯಲ್ಲಿ ಬಿಲ್ಲಿನಾಕಾರದಲ್ಲಿ ಕೆತ್ತಿರುವ ಕಲ್ಲು ಅನಾಥವಾಗಿ ಬಿದ್ದಿದ್ದವು. ತುದಿಯಲ್ಲಿ ಬಿಲ್ಲಿನಾಕಾರದಲ್ಲಿದ್ದ ಕಲ್ಲಿನ ಮೇಲೆ ಕೂತ ಕುಪ್ಪಿ ಸುಮ್ಮನಿರಲಾರದೆ ಕಲ್ಲನ್ನು ಕೈಯಿ೦ದ ಕೆರೆಯತೊಡಗಿದಕೈಬೆರಳುಗಳು ಆಗಾಗ ಕಲ್ಲಿನ ಗು೦ಡಿಯಲ್ಲಿಳಿದು ಮತ್ತೆ ಹತ್ತಿ ನ೦ತರ ಬೇರಾಗಿ ಮತ್ತೆ ಇಳಿದು ಹತ್ತಿ ಆಡುತ್ತಿದ್ದವು ಬೆರಳಿಗೆ ಸಿಕ್ಕ ಮಣ್ಣನ್ನು ಕೆರೆಯತೊಡಗಿದ್ದರಿ೦ದ  ಕಲ್ಲಿನಲ್ಲಿ ಅಕ್ಷರಗಳ೦ಥವು ಕ೦ಡುಬ೦ತು. ವಿಹಾರಿಏ ಕುಪ್ಪಿ ಅದೇನೋ ಬರೆದ೦ತಿದೆ ನೋಡು ಎ೦ದಳುಆ ಭಾಷೆ ಅರ್ಥವಾಗದಿದ್ದರಿ೦ದ ಸುಮ್ಮನಾದತಕ್ಷಣ ಚರಿತ್ರೆ ಮೇಷ್ಟ್ರರ ನೆನಪಾಯ್ತು ವಿಹಾರಿಗೆ ಮನೆಗೆ ಹೋಗುವ೦ತೆ ಹೇಳಿ ಮೇಷ್ಟರ ಬಳಿಗೆ ಬ೦ದನ೦ಗೆ ಸಾಸನ ಸಿಕ್ಕಿದೆ ಸರ್ ಅ೦ದ
ಅಚ್ಚರಿಗೊ೦ಡ ಮೇಷ್ಟ್ರು ನಡಿ ನೋಡಾಣ ಎ೦ದವರೇ ಒ೦ದು ಇ೦ಕ್ ಬಾಟಲ್ ಟೂತ್ ಬ್ರಶ್ ಪೆನ್ನು ಪೇಪರು ಹಿಡಿದುಕೊ೦ಡು ಹೊರಟೇ ಬಿಟ್ಟರು
ಕಲ್ಲು ಬ೦ಡೆ ಸಿಕ್ಕಾಗ ಮೊದಲು ಕಲ್ಲನ್ನು ತೊಳೆದು ಸಿಕ್ಕಿಕೊ೦ಡಿದ್ದ ಮಣ್ಣನ್ನು ತೆಗೆದು ಅಕ್ಷರಗಳು ಸ್ಪಷ್ಟವಾಗಿ ಮೂಡುವ ತನಕ ಬ್ರಶ್ ನಿ೦ದ ಉಜ್ಜಿ ಸ್ಪಷ್ಟಗೊಳಿಸಿ ಇ೦ಕ್ ಚೆಲ್ಲಿ ಅದರ ಪ್ರತಿಯನ್ನು ಮಾಡಿಕೊ೦ಡು ಕೈಲಿ ಬರೆದು ಪುರಾತತ್ವ ಇಲಾಖೆಗೆ ಕೊ೦ಡೊಯ್ದಾಗ ನೋಡಿದವರು ಅದು ಹೊಯ್ಸಳರ ಕಾಲದ್ದೆ೦ದೂ ಈ ಸ್ಥಳ ಹೊಯ್ಸಳರ ಪ್ರಮುಖ ನಗರವಾಗಿತ್ತೆ೦ದೂ ತಿಳಿಸಲಾಗಿ ಅಚ್ಚರಿಗೊ೦ಡರು ಅ೦ಥ ಪ್ರಮುಖ ವಿಷಯಗಳು ಇಲ್ಲದಿದ್ದರೂ ಅದು ಶಾಸನವೆ೦ದು ಪರಿಗಣಿಸಲ್ಪಡಲಾಗಿ ಅದಕ್ಕೆ ಐತಿಹಾಸಿಕ ಪ್ರಾಮುಖ್ಯತೆ ಸಿಕ್ಕಿತು ಅದನ್ನು ಅದರ ಸ್ಥಳದಲ್ಲೇ ವಿಚಿತ್ರ ಆಕ್ರುತಿಯಿದ್ದ ಬ೦ಡೆಯ ಪಕ್ಕದಲ್ಲಿ ನೆಟ್ಟು ಕೈತೊಳೆದುಕೊ೦ಡರು ಇದರ ಬಗ್ಗೆ ಪತ್ರಿಕೆಗಳಲ್ಲಿ ಬ೦ದ ಮರುದಿನವೇ ಅವ್ಯಾಹತ ಕಿಲಕರ್ಣಿ ಜಿಲ್ಲೆಯ ಅನಕ್ಷರಸ್ಥ ಎಮ್ ಪಿ ಯನ್ನು ಕರೆಸಿ ಊರಿನ ಮು೦ಭಾಗದಲ್ಲಿ ಹೊಯ್ಸಳರ ಹೆಬ್ಬಾಗಿಲು ಎ೦ಬ ಬೋರ್ಡ್ ಉದ್ಘಾಟಿಸಿಬಿಟ್ಟ
ಈ ಶೋಧನೆಯನ್ನು ಮಾಡಿದ ನ೦ದನ ಕುಪ್ಪಿಗೆ ಶಾಲೆಯಲ್ಲಿ ಬಹುಮಾನ ಕೊಡಲಾಯ್ತು. ಹಾಗೆ ಶುರುವಾದ ಅವನ ಚರಿತ್ರೆ ಶೋಧ ಅವನನ್ನು BA MA ವರೆಗೂ ಕರೆದೊಯ್ಯಿತು.
******
ನ೦ದನ ಕುಪ್ಪಿಯಿ೦ದ ಶೋಧಗೊ೦ಡ ಆ ಕಲ್ಲು, ಶಾಸನವಾಗಿ ಪ್ರಸಿದ್ದವಾಯ್ತು, ಆ ವಿಚಿತ್ರ ಆಕ್ರುತಿಯ ಬ೦ಡೆ ದೇಗುಲವಾದರೂ ಅದು ಅದೇ ಸ್ಥಿತಿಯಲ್ಲಿತ್ತು. BA ಗೆ ಬ೦ದ ಕುಪ್ಪು ಅದರ ಬಗ್ಗೆ ಇನ್ನೂ ಆಳವಾಗಿ ಶೋಧ ಮಾಡುತ್ತಿದ್ದ. ಹೊಯ್ಸಳರ ಕಾಲದ ಆ ಕಲ್ಲಿನ ಹಿ೦ಭಾಗದಲ್ಲೂ ಬರಹಗಳಿದ್ದವು . ಅವು ಅರ್ಥವಿಲ್ಲದ ಪದಗಳನ್ನುಸೇರಿಸಿಟ್ಟ೦ತೆ ಕಾಣುತ್ತಿತ್ತು ಅದನ್ನು ಒಡೆಯಲು ಕುಪ್ಪಿ ಯತ್ನಿಸುತ್ತಿದ್ದ. ಇದ್ದಕ್ಕಿದ್ದ೦ತೆ ಅಲ್ಲಿಗೆ ಒಬ್ಬ ಹುಚ್ಚನ೦ಥ ವ್ಯಕ್ತಿ ಕಾಲಿಟ್ಟ ಬೋಳಿಸದ ಗಡ್ಡ ಕೆದರಿದ ಕೂದಲಿನ ಆ ವ್ಯಕ್ತಿ ಗೂಡಿನ೦ತೆ ಕಾಣುವ ದೇಗುಲದ ಮೇಲೆ ಮಲಗಿಬಿಟ್ಟಿದ್ದ.
ತನ್ನ ಶೋಧದ ಬಗ್ಗೆ ಹೆಮ್ಮೆ ಇದ್ದ ಕುಪ್ಪಿ ದಿನಕ್ಕೊಮ್ಮೆ ಅಲ್ಲಿಗೆ ಬರುತ್ತಿದ್ದನಾದ್ದರಿ೦ದ ಅಲ್ಲಿದ್ದ ಆ ವ್ಯಕ್ತಿಯನ್ನು ನೋಡಿ ಗದರಿಸಿಕೊ೦ಡ. ಅದಕ್ಕೆ ಆ ಗಡ್ಡಧಾರಿ ಅರ್ಥವಾಗದ ಭಾಷೆಯಲ್ಲಿ ಮಾತನಾಡಿಹೂ೦ ಎ೦ದ. ನ೦ತರ ಟವರೇಕ ಪರಿಕುಟಟ್ಳ೦ಗಿರೋಸಿಮೇಟೋಟ ಎ೦ದಿತು. ಅದನ್ನು ಕೇಳಿದ ಕುಪ್ಪಿ ಬಿದ್ದುಬಿಟ್ಟ. ಪೂಜೆಗೆ ಬ೦ದ ಜನಗಳು ಬಿದ್ದ ಕುಪ್ಪಿಯನ್ನೂ ಮಲಗಿದ ಹುಚ್ಚನನ್ನೂ ನೋಡಿ ಏನಾಯ್ತೆ೦ದರು
ಅದಕ್ಕೆ ಆ ತಿರುಕಯಾರೆ೦ದ ಹೂ೦ ಎ೦ದೆ ಬಿದ್ದ ಎ೦ದವನೇ ಮತ್ತೆ ಅರ್ಥವಾಗದ್ದೇನೋ ಒದರಿದ. ಅಷ್ಟೆ ಸಾಕು ಜನ ಕಾಲಿಗೆ ಬಿದ್ದರು ಅಲ್ಲಿ ಪುಟ್ಟದೊ೦ದು ಕುಟೀರವಾಯ್ತು ಕೆಲ ಕುರಿಗಳನ್ನು ಆಶ್ರಮಕ್ಕೆ ದಾನ ಮಾಡಿದರು
ಕುಪ್ಪಿ ಹೊಸ ಶೋಧಕಾರ್ಯ ಆರ೦ಭಿಸಿದಅವನಿಗೆ ತಾನೇಕೆ ಬಿದ್ದೆ೦ದು ತಿಳಿದರೂ ಈಗ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ
**********************
ಅಯಾಚಿತವಾಗಿ ಬ೦ದ ಸ೦ನ್ಯಾಸಿ ಪಟ್ಟಕ್ಕೆ ಬೈರಾಗಿ ಎ೦ದು ಊರವರಿ೦ದ ನಾಮಾ೦ಕಿತಗೊ೦ಡ ಆ ವ್ಯಕ್ತಿ ಮೊದಮೊದಲು ಚಕಿತನಾದ ನ೦ತರ ಹೊ೦ದಿಕೊ೦ಡ ನ೦ತರ ಆಡಳಿತ ನಡೆಸತೊಡಗಿದ.
****
ಮಠ ದೊಡ್ಡದಾದ೦ತೆ ಬೈರಾಗಿಗೆ ಬೋರಾಗತೊಡಗಿ ಏನಾದರೂ ಮಾಡಬೇಕೆನ್ನಿಸಿತು. ಬೈರಾಗಿ ಎ೦ಬ ಹೆಸರು ವಿಚಿತ್ರವಾಗಿ ಕಾಣುತ್ತಿತ್ತು. ಮತ್ತು ಎಲ್ಲೋ ಒ೦ದು ಕಡೆ ವ್ಯ೦ಗ್ಯದಿ೦ದ ಕೂಡಿದ೦ತಿತ್ತು ಕಾರಣ ಆತನ ಇತರ ಕೂಡಿಕೆಗಳುಮಠಕ್ಕೆ ಬಿಟ್ಟ ಕುರಿಗಳಲ್ಲಿ ಕೆಲವನ್ನು ಉಪಯೋಗಿಸಿಕೊ೦ಡಿದ್ದ ಬೈರಾಗಿಗೆ ವ್ಯ೦ಗ್ಯದಿ೦ದ್ದ ಬೈರಾಗಿ ಹೆಸರು ಸರಿ ಬಾರದೆ ತನ್ನ ಶಿಷ್ಯವ್ರು೦ದಕ್ಕೆ ತನಗೊ೦ದು ಸುಸ೦ಸ್ಕ್ರುತ ಹೆಸರಿಡಬೇಕೆ೦ದು ಕೇಳಿದ ತಪ್ಪು ತಪ್ಪು ಆಜ್ಞಾಪಿಸಿದ. ಅಲ್ಲಿ ಇಲ್ಲಿ ಹುಡುಕಲಾಗಿ ಅವರಿಗೆ ಏನೂ ತೋಚದೆ ಪೆಚ್ಚಾಗಿ ನಿ೦ತರು ಅಷ್ಟರಲ್ಲಿ ಬ೦ದ ಕುಪ್ಪಿ ಮಠವನ್ನು ನೋಡಲಾಗಿ ಅಲ್ಲಿದ್ದ ಕುರಿಗಳ ಸ೦ಖ್ಯೆ ನೂರಿನ್ನೂರರ ಗಡಿ ದಾಟಿದ್ದು ಕ೦ಡುಪುಟ್ಟ ಕುಟೀರ ಈಗ ದೊಡ್ಡ ಅರಮನೆಯಾದ೦ತಾದದ್ದನ್ನು ಕ೦ಡುಮೈಮೇಲೆ ಹರಿದ ಬಟ್ಟೆಮಾತ್ರ ಇದ್ದ ಬೈರಾಗಿ ಹುಚ್ಚ ನ ಮೇಲೆ ಖಾದಿಯಿ೦ದ ನೇರವಾಗಿ ತ೦ದ ಖಾವಿಯನ್ನ ಕ೦ಡು ಅವನ ಕುತ್ತಿಗೆಯಲ್ಲಿ ಬ೦ಗಾರದ ಎಳೆಯ ಕೊ೦ಡಿಗಳಿ೦ದ ಬ೦ಧಿತವಾದ ರುದ್ರಾಕ್ಷಿಯನ್ನು ಮತ್ತು ಬೆಳ್ಳಿಯಿ೦ದ ಸುತ್ತಿಸಿಕೊ೦ಡ ಸ್ಪಟಿಕಮಣಿಸರಗಳನ್ನು ಕ೦ಡು ಇದು ಯಾವ ಸ೦ಸ್ಥಾನಕ್ಕೂ ಕಮ್ಮಿ ಇಲ್ಲ ಅಲ್ವೇ ಸ೦ಸ್ಥಾನ ಎ೦ದುಬಿಟ್ಟ ಬೈರಾಗಿಗೆ ಕಣ್ಣು ತೇವವಾಗಿ ಒಳ್ಲೆ ಹೆಸರಿಟ್ಟೆಯಪ್ಪ ನನಗೆ ಎ೦ದು ತನ್ನ ಶಿಷ್ಯರಿಗೆ ಆಜ್ಞೆಹೊರಡಿಸಿದ ಇನ್ನು ಮು೦ದೆ ತನ್ನ ಹೆಸರನ್ನು ಸ೦ಸ್ಥಾನ ಎ೦ದು ಕರೆಯಬೇಕೆ೦ದ  ಶಿಷ್ಯರಿಗೆ ಅಚ್ಚರಿಯೊ೦ದುಕಡೆಯಾದರೆ ನಗುವೊ೦ದುಕಡೆಸ್ವಾಮಿಗಳೊ೦ದಿಗಿನ ಮಾತು ಕತೆ ಹೇಗೆಹೀಗೆ ಹೀಗಿರಬಹುದು
೧) ಸ೦ಸ್ಥಾನಕ್ಕೆ ಅಡ್ಡಬಿದ್ದೆವು
೨) ಸ೦ಸ್ಥಾನಕ್ಕೆ ಜೈ
೩) ಸ೦ಸ್ಥಾನ ಸ್ನಾನ ಮಾಡಬೇಕು
೪) ಸ೦ಸ್ಥಾನ ಪ೦ಚೆ ಉಡಬೇಕು
೫) ಸ೦ಸ್ಥಾನ ಉಪಹಾರಕ್ಕೆ ದಯಮಾಡಿಸಬೇಕು
೬) ಸ೦ಸ್ಥಾನ ವಿಶ್ರಾ೦ತಿ ತೆಗೆದುಕೊ೦ಳ್ಳಬೇಕು
ಕೊನೆ ಕೊನೆಗೆ ಸ೦ಸ್ಥಾನ ಸ೦ಡಾಸಿಗೆ ಹೋಗಬೇಕಿದೆಸ೦ಸ್ಥಾನ ಅಪಾನವಾಯು ಬಿಟ್ಟಿತು ಎ೦ದೆಲ್ಲಾ ಆಡಿಕೊಳ್ಲತೊಡಗಿದರು
ಆದರೆ ಅದಕ್ಕೊ೦ದು ಖದರ್ ಬ೦ದದ್ದ೦ತೂ ಹೌದು. ಹೀಗೆ ಕುಪ್ಪಿ ಅಪರೋಕ್ಷವಾಗಿ ಸ೦ಸ್ಥಾನಕ್ಕೆ ಉಪಯೋಗಕ್ಕೆ ಬರತೊಡಗಿದೆ
**********
ಸ೦ಸ್ಥಾನ ಕುರಿಗಳ ಹಿ೦ಡು ಸೇರಿಕೊಳ್ಲತೊಡಗಿ ಸುಮಾರು ನಾಲ್ಕರಿ೦ದ ಐದು ಕುರಿದೊಡ್ಡಿಗಳನ್ನು ಕಟ್ಟಬೇಕಾಯ್ತುಎರಡೆಕರೆ ಜಾಗದ ನಾಲ್ಕು ಮೂಲೆಯಲ್ಲಿ ಕುರಿದೊಡ್ಡಿಗಳು ಎದ್ದು ನಿ೦ತವು ಹಿನ್ನೀರಿನ ಪ್ರದೇಶದಲ್ಲಿ ಸ೦ಸ್ಥಾನ ಇದ್ದುದರಿ೦ದ ನೀರಿಗೆ ಅಭಾವವಿರಲಿಲ್ಲ. ಊರಿನ ಜನ ನೀರನ್ನು ಯಥೋಚಿತವಾಗಿ ಬಳಸಿಕೊಳ್ಳುತ್ತಿರುವುದು ಸ೦ಸ್ಥಾನಕ್ಕೆ ಯಾಕೋ ಸರಿ ಬರಲಿಲ್ಲ. ಮಾರನೆಯ ದಿನ ನದಿಯಲ್ಲೊ೦ದು ದೇಹ ತೇಲಿ ಬ೦ದದ್ದನ್ನು ಜನ ನೋಡಿದರು
ಸ್೦ಸ್ಥಾನ ನೀರು ಅಪವಿತ್ರವಾಯ್ತು ಇನ್ನು ಮು೦ದೆ ಇದು ಸ೦ಸ್ಥಾನದ ನೀರು ಬಳಸಿಕೊಳ್ಳಬೇಕೆ೦ದುಕೊ೦ಡವರು ಸ೦ಸ್ಥಾನಕ್ಕೆ ಕಾಣಿಕೆ ಸಲ್ಲಿಸತಕ್ಕದ್ದು ಮತ್ತು
ಹಿನ್ನೀರಿನ ಜಾಗ ಸ೦ಸ್ಥಾನದ್ದು ಹಾಗಾಗಿ ನೀರೂ ಸ೦ಸ್ಥಾನದ ಸ್ವತ್ತು ಇದನ್ನು ಜನ ಬಳಸಿಕೊಳ್ಳುವ ಹಾಗಿಲ್ಲ ಎ೦ಬ ಠರಾವು ಪಾಸು ಮಾಡಿದರುಜನ ಸ೦ಸ್ಥಾನಕ್ಕೆ ಅಡ್ಡಬಿದ್ದು ಕೌ೦ಡಿನ್ಯೆಯನ್ನು ಪುಷ್ಕರಣಿಯನ್ನಾಗಿ ಮಾಡಿದಕ್ಕೆ ಶೋಕಿಸಿದರು ತನ್ನ ಶೋಧದಿ೦ದ ಎಷ್ಟೆಲ್ಲಾ ಅನಾಹುತವಾಗುತ್ತಿದೆ ಎ೦ಬುದು ನ೦ದನ ಕುಪ್ಪಿಗೆ ಅರಗಿಸಿಕೊಳ್ಳಾಗುತ್ತಿರಲಿಲ್ಲ. ಬೈರಾಗಿಯ ಚರಿತ್ರೆಯನ್ನು ಬಯಲಿಗೆಳೆಯಬೇಕೆ೦ದು ಸ೦ಸ್ಥಾನವನ್ನು ಶೋಧಿಸಲು ಆರ೦ಭಿಸಿದ ಬೈರಾಗಿಗೆ ಬೇಸರವಾಗಿ ತನ್ನ ತನ್ನ ಈ ವೇಷಕ್ಕೆ ಕಾರಣೀ ಭೂತನಾದ ಕುಪ್ಪಿಯನ್ನು ಕರೆದು ಮಾತನಾಡಲಾರ೦ಭಿಸಿದ ಹೀಗೆ ಹೀಗೆ
ನಿಮ್ಮಿ೦ದ ಉಪಕಾರವಾಯ್ತು
ಆದರೆ ನಾನು ಕ೦ಡು ಹಿಡಿದ ಈ ಕಲ್ಲಿನಲ್ಲಿ ಯಾವ ವಿಶೇಷವೂ ಇಲ ಇದು ಶಾಸನದ೦ತೆ ಕಾಣುತ್ತದೆ ಒ೦ದು ೫೦ ೬೦ ವರ್ಷಗಳ ಹಿ೦ದೆ ಇಲ್ಲಿನ ಶಾನುಭೋಗರು ಬರೆಸಿರಬಹುದಾದ ಶಾಸನರೂಪಿ ಕಲ್ಲು 
ಇರಬಹುದು ಆದರೆ ಈಗ ಇದು ಸ೦ಸ್ಥಾನನಾನು ಸ೦ಸ್ಥಾನ ಎ೦ದರು
ಆ ದಿನ ನಿಮ್ಮ ವಿಕಾರ ಮುಖ ನೋಡಿ ಮತ್ತು ಬೆತ್ತಲೆ ದೇಹ ನೋಡಿ ಮೂರ್ಚಿತನಾದೆನೇ ಹೊರತು ನಿಮ್ಮ ಶಕ್ತಿಯಿ೦ದಲ್ಲ ಎ೦ಬುದು ನಿಮಗೂ ಗೊತ್ತು
ಇರಬಹುದು ಆದರೆ ಈಗ ಇದು ಸ೦ಸ್ಥಾನನಾನು ಸ೦ಸ್ಥಾನ 
ಭಕ್ತಿಯನ್ನು ವ್ಯವಹಾರದ ಮಟ್ಟಕ್ಕಿಳಿಸಿದಿನಿಮಗೆ ಕನಿಷ್ಟ ಪೂಜೆಯೂ ಬರೋದಿಲ್ಲ. ಆದರೂ ನೀವು ದೇವರು
ರಬಹುದು ಆದರೆ ಈಗ ಇದು ಸ೦ಸ್ಥಾನನಾನು ಸ೦ಸ್ಥಾನ 
ನೀವು ಬ೦ದದ್ದು ಸ್ವೀರ್ತೂರಿನಿ೦ದಯಾರೋ ಹುಡುಗಿಯನ್ನ ಚುಡಾಯಿಸಿ ಒದೆ ತಿ೦ದು ಬ೦ದದ್ದು,ಅದಕ್ಕೂ ಮೊದಲು ನಿಮ್ಮ ಲೈ೦ಗಿಕ ಚಟುವಟಿಗೆ ಇಡೀ ಊರಿಗೆ ಫೇಮಸ್ಸುನಿಮಗಿರುವ ಅರ್ಹತೆ ಏನುಸ್ವಲ್ಪವೂ ಮನಸ್ಸಾಕ್ಷಿ ಇಲ್ಲವೇ?
ಇದು ಕೇಳಬಾರದ ಪ್ರಶ್ನೆಮನಸ್ಸಾಕ್ಷಿ ಪುಸ್ತಕದ ಅಕ್ಷರ ಮಾತ್ರಬದುಕಿದ್ದೇನೆ ಬದುಕುತ್ತೇನೆ,ಇಲ್ಲಿವೆಯಲ್ಲ ಕುರಿದೊಡ್ಡಿ ಅದನ್ನೂ ನಾನು ಬಿಟ್ಟಿಲ್ಲಇದೇ ಊರಿನ ಹಲವಾರು ಕುರಿಗಳು ಇಲ್ಲಿಗೆ ಬ೦ದು ಆಶೀರ್ವದಿಸಿಕೊ೦ಡು ಹೋಗುತ್ತದೆ ಕೆಲವು ಸ್ಥಿರವಾಗಿ ಇಲ್ಲೇ ಇವೆ. ನಾನು ಕೇಳಿರಲಿಲ್ಲ ಈ ಪೀಠ ಬ೦ತು ಉಪಯೋಗಿಸಿಕೊ೦ಡೆ ತಪ್ಪೇನಿದೆ?
ನಾನು ಮತ್ತೆ ಶೋಧ ಮಾಡುತ್ತೇನೆ 
ಅಗತ್ಯವಾಗಿ
****************
ಕುಪ್ಪಿಯ ಶೋಧ ಆರ೦ಭ
ನದಿಯ ಮೇಲ್ಭಾಗದಲ್ಲಿ ಹಸುಗಳನ್ನು ಮೇಯಿಸುವ ಸ್ಥಳದಲ್ಲಿ ಬೆರಣಿಗಳನ್ನು ತಟ್ಟಿದ್ದ ಕಲ್ಲು. ಅದು ದು೦ಡಾಗಿ  ಎ೦ಟು ಹತ್ತು ಬೆರಣಿಗಳನ್ನು ತಟ್ಟಲು ಸರಿ ಹೊ೦ದುವ೦ಥ ಆಕ್ರುತಿಯ ಕಲ್ಲಾಗಿತ್ತು ಯಾರೋ ಬೆರಣಿ ತೆಗೆದುಕೊ೦ಡು ಸಗಣಿಯ ಕಲೆ ಮಾತ್ರ ಕಾಣುತ್ತಿತ್ತುತನ್ನ ಶೋಧದ ನೆನಪಾಗಿ ಆ ಕಲ್ಲಿನ ಮೇಲೆ ತನ್ನ ಎಮ್ ಎ ವನ್ನು ಪ್ರಯೋಗಿಸಿದ. ಅರೆ ಅದೂ ಕೂಡ ಒ೦ದು ಶಾಸನದ೦ತೆ ಇತ್ತು ಅದರಲ್ಲಿ ಅ೦ದಿನ ಕಾಲದಲ್ಲಿ ಆ ಊರಿನಲ್ಲಿದ್ದ ಜನಸ೦ಖ್ಯೆ ಮತ್ತು ಕೆರೆ ಕಟ್ಟಿಸಿದ ದಿನಾ೦ಕವನ್ನು ಬರೆದಿದ್ದರು.  ಶುಭ್ರ ಮಾಡಿದ ಕಲ್ಲಿನ ಮು೦ಭಾಗ ಹಿ೦ಭಾಗದಲ್ಲಿ ಕೆತ್ತನೆಗಳಿದ್ದವುಅರಿಶಿನ ಬಳಿದು ಓದಿದ.
***********************
ಸ೦ಸ್ಥಾನ ಸ್ನಾನಕ್ಕೆ ಹೊರಟಿತುಹಿ೦ದೆ ಶಿಷ್ಯರ ಹಿ೦ಡು ಅವರ ವೀರ್ಯಕಲೆಯ ಕಾವಿ ಹಿಡಿದುಕೊಳ್ಳುವುದಕ್ಕೂ ಪೈಪೋಟಿಸ೦ಸ್ಥಾನ ಸ್ನಾನ ಮುಗಿಸಿ ಅಲ್ಲೇ ಧ್ಯಾನಕ್ಕೆ ಕುಳಿತಿತುಜನ ಬ೦ದರು ಅಪಚಾರ ವಾಗಿದೆ ಅನಾಚಾರಿ ಸಿಗುತ್ತಾನೆ ಪ್ಲ್ ೦ಗವಿಲಕಿಲಮೂಕರೂಹೆ ಧಾರಿಸಿರಕೂಪರೇಣು ಎ೦ದಿತು ಸ೦ಸ್ಥಾನ
ನದಿಯ ದಡದಿ೦ದ ಜನ ನೋಡತೊಡಗಿರು ತಮ್ಮತಮ್ಮಲೇ ಗುಸುಗುಸು ಆರ೦ಭವಾಯ್ತುಸ೦ಸ್ಥಾನ ಸ್ನಾನ ಮಾಡಿದ ಜಾಗದಿ೦ದ ಸ್ವಲ್ಪವೇ ಹತ್ತಿರದಲ್ಲಿ ತಿಳಿನೀರ ಮೇಲೆ ನೆರಳಿನ೦ಥದ್ದು ಕಾಣತೊಡಗಿತು ನ೦ತರ ನೆರಳು ನೀರು ತು೦ಬಿ ಉಬ್ಬಿದ ಶರ್ಟಾಯ್ತುಹಾಗೇ ಶರ್ಟೊಳಗಿನ ದೇಹ ಅಡಿಬೆನ್ನಾಗಿ ತೇಲಲು ಆರ೦ಭವಾಯ್ತು ಅಲೆಗಳ ಹೊಡೆತಕ್ಕೆ ನಿಧಾನಕ್ಕೆ ಹತ್ತಿರವಾಗತೊಡಗಿತು ಮೊದಲು ಬಿಳಿಚಿಕೊ೦ಡ ಪಾದಗಳು ಅದರ ಮೇಲೆ ನೀರು ತು೦ಬಿ ಊದಿಕೊ೦ಡದ್ದೆ ಕಾಣುವ ಪ್ಯಾ೦ಟ್ ಮತ್ತು ಉಬ್ಬಿಕೊ೦ಡ ಬೆತ್ತಲೆ ಹೊಟ್ಟೆಯಡಿಯನ್ನು ಮುಚ್ಚಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದ ಶರ್ಟ್ ನ೦ತರ ಒ೦ದು ಬೆನ್ನ ಮೇಲೆ ತೇಲುತ್ತಿರುವ ಕುತಿಗೆಯಿ೦ದ ಬಿಡುಗಡೆಯಾಗದ ಒ೦ದು ತಾಯಿತನ೦ತರ ಒದ್ದೆಯಾಗಿ  ನೀರಿನ ಅಲೆಗಳಿಗನುಸಾರವಾಗಿ ಆಡುತ್ತಿದ್ದ ಕೂದಲು ಕಾಣಿಸಿತು ಭಕ್ತ ಸಮೂಹ ಹೋ ಎ೦ದರು
ಎಳೆದು ತ೦ದ ದೇಹ ಕುಪ್ಪಿಯದಾಗಿತ್ತು.
************************
ಸಗಣಿ ಕಲ್ಲಿನಲ್ಲಿದ್ದುದು
ದಿನಾ೦ಕ ೨೦ - ೫ - ೧೮೬೨
ಜನ ಸ೦ಖ್ಯೆ: ೯೩೮ (ಮೂರು ಹಳ್ಳಿಗಳು ಸೇರಿ)
ಬೆಳೆ ಭತ್ತ ರಾಗಿ
ಕ೦ದಾಯ : ೩೪ ಆಣೆ
ಕಲ್ಲಿನ ಹಿ೦ಭಾಗದಲ್ಲಿ
ನದಿಯ ಕೆಳಭಾಗದಲ್ಲಿ ಹಿನ್ನೀರ ಕಡೆ ಊರಿನ ದುಷ್ಟನ ಹೆಣ ಹೂಳಲಾಗಿದೆ ಮತ್ತು ಅದರ ಮೇಲೆ ಅವನ ಚೇಷ್ಟೆಗಳ ಚಿತ್ರವನ್ನು ನೆಡಲಾಗಿದೆ
ಅಲ್ಲಿಗೆ ಹೋದವರಿಗೆ ಬೆದೆ ಬ೦ದು ಸರ್ವನಾಶ ಆಗುವರುಯಾರೂ ಹೋಗಬಾರದು ಎ೦ಬರ್ಥದ
ಬರಹವಿತ್ತು. ಅದು ಅಪೂರ್ಣವಾಗಿತ್ತು ಪೂರ್ತಿ ಮಾಡುವುದರೊಳಗಾಗಿ ಸ೦ಸ್ಥಾನ ಕುಪ್ಪಿಯನ್ನು ಮುಗಿಸಿಬಿಟ್ಟಿತ್ತು

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website