Posts

Showing posts from 2014

ಮೀನಿಗೊಂದು ಮಿನಿ ಜಾತ್ರೆ

Image
ಇನ್ನೇನು ತಿಂಗಳಲ್ಲಿ ಮಳೆಗಾಲ ಆರಂಭ. ಮಳೆ ಆರಂಭವಾಗುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಪ್ರಸಿದ್ಧ ಅಘನಾಶಿನ ನದಿ ಹಿನ್ನೀರಿನಲ್ಲಿ ಮೀನುಗಾರರ ಸಂಭ್ರಮ. ಎಲ್ಲೆಲ್ಲೂ ಹಬ್ಬದ ವಾತಾವರಣ. ಅದುವೇ ಮೀನಿನ ಹಬ್ಬ, ಇದೊಂದು ಮಿನಿ (ಸಣ್ಣ) ಜಾತ್ರೆಯಂತೆ ಗೋಚರಿಸುತ್ತದೆ. ರೈತರಿಗೆ ಗಜನಿ (ನದಿಯಂಚಿನ ಹೆಚ್ಚುವರಿ ಭೂಮಿ) ಬಿಟ್ಟುಕೊಡುವಾಗ ಮೀನು ಗುತ್ತಿಗೆದಾರರು ವರ್ಷಕ್ಕೊಮ್ಮೆ ನಡೆಸುವ ಸಾಮೂಹಿಕ ದಿನವಿದು. ಗೋವಾ ಮುಂತಾದ ರಾಜ್ಯಗಳಿಗೆ ವರ್ಷ ಪೂರ್ತಿ ರಫ್ತಾಗುವ ಅಘನಾಶಿನಿ ಹಿನ್ನೀರು ಪ್ರದೇಶದ ರುಚಿಕರ ಗಜನಿ ಮೀನು, ಸಿಗಡಿ, ಏಡಿಗಳ ಬೃಹತ್ ಪ್ರಮಾಣದ ಉತ್ಪಾದನೆಯ ಹಿಂದೆ ಸ್ವಾರಸ್ಯಕರ ಕತೆಯೇ ಇದೆ. ಶಿರಸಿ, ಸಿದ್ದಾಪುರ ಹಾಗೂ ಕುಮಟಾ ತಾಲ್ಲೂಕು ಸೇರಿ ಸುಮಾರು 60–70 ಕಿಲೋ ಮೀಟರ್‌ಗಳಷ್ಟು ದೂರ ಹರಿದು ಬಂದು ಅಘನಾಶಿನಿ ಎಂಬ ಊರಿನಲ್ಲಿ ಸಮುದ್ರ ಸೇರುವ ಅಘನಾಶಿನಿ ನದಿ ಹಿನ್ನೀರು ಪ್ರದೇಶ ಸೃಷ್ಟಿಸುತ್ತದೆ. ಅಘನಾಶಿನಿ ಹರಿದು ಬರುವ ಮಾರ್ಗ ದಟ್ಟ ಅರಣ್ಯ, ಕಣಿವೆ, ಜಲಪಾತ ಆಗಿರುವ ಕಾರಣ ಅದು ತನ್ನ ಜೊತೆ ತರುವ ತರಗೆಲೆ, ಕಸ, ಕಡ್ಡಿ ಮುಂತಾದವು 4 ಸಾವಿರ ಹೆಕ್ಟೇರ್‌ನಷ್ಟು ಹಿನ್ನೀರು ಪ್ರದೇಶದಲ್ಲಿ ಬೆಳೆಯುವ ಮತ್ಸ ಸಂಕುಲಕ್ಕೆ ಆಹಾರವಾಗುತ್ತದೆ. ಇಲ್ಲಿ ಬೆಳೆಯುವ ಕಗ್ಗ ಭತ್ತದ ಕೊಯಿಲು ಮುಗಿದ ನಂತರ ಹುಲ್ಲಿನ ಭಾಗ ಗಜನಿಯಲ್ಲಿಯೇ ಉಳಿಯುವುದರಿಂದ ಅವು ವಿಶೇಷವಾಗಿ ಸಿಗಡಿಗೆ ಆಹಾರವೂ ಹೌದು. ಮಳೆಗಾಲ ಆರಂಭವಾದ ನಂತರ ರೈತ...

ಕಾಮದ ಗಾಡಿ ಓಡದು ಏಕೆ?

Image
ಒಂದು ಡಜನ್ ಕಾರಣಗಳು ನೀವು ಅಥವಾ ನಿಮ್ಮ ಸಂಗಾತಿ ಕಾಮಾಸಕ್ತಿಯನ್ನು ಕಳೆದುಕೊಳ್ಳುತ್ತಿದ್ದೀರಾ? ಹಲವಾರು ಬಗೆಯ ಮಾನಸಿಕ ಮತ್ತು ದೈಹಿಕ ಅಂಶಗಳು ಕಾಮದ ಮೇಲೆ ಪರಿಣಾಮ ಬೀರುತ್ತವೆ. ಕಾಮವನ್ನು ತೀರಾ ಕಡಿಮೆ ಮಾಡುವ ಈ ಕೆಲವು ಅಂಶಗಳು ನಿಮ್ಮ ಮೇಲೆ ಪರಿಣಾಮ ಬೀರುತ್ತಿವೆಯಾ ನೋಡಿ. 1. ಕಾಮದ ಗಾಡಿ ಓಡದು: ಒತ್ತಡ ನೀವು ಅನೇಕ ಕೆಲಸಗಳನ್ನು ಒತ್ತಡದಲ್ಲಿ ನಿಭಾಯಿಸುವ ಶಕ್ತಿ ಉಳ್ಳವರಾಗಿರಬಹುದು. ಆದರೆ ಒತ್ತಡದಲ್ಲಿ ಕಾಮ ಒತ್ತರಿಸಿ ಬರುತ್ತದೆ ಎನ್ನುವ ಹಾಗೆ ಯಾರಿಗೂ ಆಗದು. ಕೆಲಸದ ಒತ್ತಡ, ಹಣದ ಸಮಸ್ಯೆ, ಮನೆಯಲ್ಲಿರುವ ಅನಾರೋಗ್ಯದವರ ಆರೈಕೆ-ಇತ್ಯಾದಿ ಒತ್ತಡಗಳು ನಿಮ್ಮ ಕಾಮವನ್ನು ಕಡಿಮೆ ಮಾಡಿಬಿಡುತ್ತವೆ. ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಕೆಲವು ತಂತ್ರಗಳನ್ನು ನಿಮ್ಮ ವೈದ್ಯರಿಂದ ಅಥವಾ ಯೋಗಾಸನದ ಶಿಕ್ಷಕರಿಂದ ಪಡೆಯಿರಿ. 2. ಕಾಮದ ಗಾಡಿ ಓಡದು: ಸಂಬಂಧಗಳ ಸಮಸ್ಯೆ ಭಾವನಾತ್ಮಕವಾಗಿ ಹತ್ತಿರವಾಗಿರಬೇಕೆಂದು ಹೆಣ್ಣು ಬಯಸುವಳು. ಅರ್ಥವಿಲ್ಲದ ವಾಗ್ವಾದ, ಕೆಟ್ಟ ಸಂವಹನ, ನಂಬಿಕೆಯ ದ್ರೋಹ ಮತ್ತಿತರ ಅಡೆತಡೆಗಳು ಪ್ರೇಮಕ್ಕೆ ಅಡ್ಡಗೋಡೆಯಾಗಿಬಿಡುತ್ತವೆ. 3. ಕಾಮದ ಗಾಡಿ ಓಡದು: ಆಲ್ಕೋಹಾಲ್ ಯಾವಾಗಲೂ ನಿಮ್ಮನ್ನು 'ಮೂಡ್‌'ಗೆ ತಂದಿಡೋದಿಲ್ಲ! ಹೆಚ್ಚೆಂದರೆ ಕಾಮದ ಬಗ್ಗೆ ಸ್ವಲ್ಪ 'ನಾಚಿಕೆ' ಕಡಿಮೆ ಮಾಡಿ, ಸ್ವಲ್ಪ ಧೈರ್ಯ ಹೆಚ್ಚಿಸಬಹುದಷ್ಟೇ. ಆದರೆ ನಿಮ್ಮ ಕಾಮದ ಆಸಕ್ತಿಯನ್...

ಅಂದು ಮತ ಹಾಕುವ ಮುನ್ನ ಇವನ್ನೆಲ್ಲ ಯೋಚಿಸಿ!

Image
ಚುನಾವಣೆ ಘೋಷಣೆಯಾಗಿದೆ. ನಾವು ಇದನ್ನು 'ಮಹಾಯುದ್ಧ' ಎಂದು ಕರೆದಿದ್ದೇವೆ. ಇದಕ್ಕಿಂತ ಪ್ರಬಲವಾದ, ಎಲ್ಲರಿಗೂ ಅರ್ಥವಾಗುವ ಪದವಿದ್ದಿದ್ದರೆ, ಆ ಹೊತ್ತಿನಲ್ಲಿ ಹೊಳೆದಿದ್ದರೆ ಅದನ್ನೇ ಇಡುತ್ತಿದೆ. World war ಗೆ ನಾವು ಮಹಾಯುದ್ಧ ಎಂದು ಕರೆದಿದ್ದೇವೆ. ಭಾರತದಲ್ಲಿನ ಚುನಾವಣೆ ಅಂದ್ರೆ ಯಾವ ದೃಷ್ಟಿಯಿಂದಲೂ ಅದಕ್ಕಿಂತ ಕಡಿಮೆ ಇರುವುದಿಲ್ಲ. ಇದನ್ನು mother of all battles ಅಂತಾನೂ ಕರೆಯುವುದುಂಟು. ಅದೂ ಸಹ ನಿಜ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಇದರ ವಿರಾಟದರ್ಶನ ವಿಶ್ವಕ್ಕೆ ಮತ್ತೊಮ್ಮೆ ಗೊತ್ತಾಗಲಿದೆ. ಎಲ್ಲ ರಾಜಕೀಯ ಪಕ್ಷಗಳು, ಆ ಪಕ್ಷಗಳ ನೇತಾರರು, ಹುರಿಯಾಳುಗಳು, ಕಾರ್ಯಕರ್ತರು ತೆರೆಮರೆಯಲ್ಲಿ ಈ ಹೋರಾಟಕ್ಕೆ ಮೌನವಾಗಿ ಸಜ್ಜಾಗುತ್ತಿದ್ದಾರೆ. ಈ ದೇಶ ಕಂಡು ಕೇಳರಿಯದ ಮತ್ತೊಂದು ಮಹಾಯುದ್ಧಕ್ಕೆ ನಾವೆಲ್ಲ ಸಾಕ್ಷಿಯಾಗಲಿದ್ದೇವೆ. ಹಾಗಾದರೆ ಈ ಚುನಾವಣೆಯಲ್ಲಿ ನನ್ನ ಪಾತ್ರವೇನು, ನಾನು ಏನು ಮಾಡಬೇಕು, ನನ್ನ ಮುಂದಿರುವ ಸವಾಲುಗಳೇನು, ಆಯ್ಕೆಯೇನು, ಹೊಸ ಸರ್ಕಾರ ರಚನೆಯಲ್ಲಿ ನಾನು ಹೇಗೆ ತೊಡಗಿಸಿಕೊಳ್ಳಬೇಕು. ಈ ಎಲ್ಲ ಪ್ರಶ್ನೆಗಳೂ ನಮ್ಮೆಲ್ಲರ ಮುಂದೆ ಮೂಡಲಾರಂಭಿಸಿವೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ನಾವೆಲ್ಲ ಈ ಚುನಾವಣೆ ಸುಳಿಯಲ್ಲಿ ಸಿಲುಕಿ ತಿರುಗುತ್ತಿರುವ ಈ ಸಂದರ್ಭದಲ್ಲಿ ಇತ್ತೀಚೆಗೆ ನಾನು 'ಫಾರ್ಚೂನ್‌' ಮ್ಯಾಗಜಿನ್‌ನ ಹಿರಿಯ ಸಂಪಾದಕ ಹಿಂದೋಲ್ ಸೇನಗುಪ್ತಾ...

ಡೀಮ್ಡ್‌ ವಿಶ್ವವಿದ್ಯಾಲಯಗಳ ಹಗರಣ ಸೀಟು ಕಬಳಿಸಿದ ಆಡಳಿತ ಮಂಡಸೀಟು ಕಬಳಿಸಿದ ಆಡಳಿತ ಮಂಡಳಿ

Image
ಬೆಂಗಳೂರು: ರಾಜ್ಯದ 9 ಡೀಮ್ಡ್ ವೈದ್ಯ­ಕೀಯ ವಿಶ್ವವಿದ್ಯಾಲಯಗಳು ಒಟ್ಟು 1042 ಸೀಟುಗಳನ್ನು ಸರ್ಕಾರಕ್ಕೆ ನೀಡದೇ ಇರುವ ಪ್ರಕರಣ ಬೆಳಕಿಗೆ ಬಂದಿದೆ. ಕಾಲೇಜು ಆರಂಭಿಸಲು ನಿರಾ­ಕ್ಷೇಪಣಾ ಪತ್ರ ನೀಡುವಾಗ ಶೇ 25ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾಗೆ ಮೀಸ­ಲಿಡಬೇಕು ಎಂಬ ಷರತ್ತು ವಿಧಿಸ­ಲಾಗಿದೆ. ಸರ್ಕಾರದೊಂದಿಗೆ ಒಪ್ಪಂದ ಮಾಡಿ­ಕೊಳ್ಳು­ವಾಗಲೂ ಇದನ್ನು ಸ್ಪಷ್ಟ­ವಾಗಿ ಹೇಳಲಾಗಿದೆ. 2010ರ ಜೂನ್‌ 26ರಂದು ಆದೇಶ ಹೊರಡಿಸಲಾಗಿದೆ.   ಇಷ್ಟಾದರೂ ಈ ಡೀಮ್ಡ್   ವಿಶ್ವ­ವಿದ್ಯಾಲಯಗಳು ಆದೇಶವನ್ನು ಪಾಲಿಸಿಲ್ಲ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು. ಸರ್ಕಾರಿ ಕೋಟಾದಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗ­ಬೇಕಾದ ಸೀಟುಗಳನ್ನು ಆಡಳಿತ ಮಂಡಳಿ ಕೋಟಾ ಮೂಲಕ ಕೋಟಿಗಟ್ಟಲೆ ರೂಪಾ­ಯಿಗೆ ಮಾರಾಟ ಮಾಡಿರು­ವುದು ಹಲವು ವರ್ಷಗಳಿಂದ ನಡೆದು ಬಂದಿದೆ ಎಂದು ಅವರು ವಿವರಿಸಿದರು. ಭಾಷಾ ಅಲ್ಪಸಂಖ್ಯಾತ ಕಾಲೇಜುಗಳು ಅಲ್ಪಸಂಖ್ಯಾತರಿಗೆ ಸೀಟುಗಳನ್ನು ನೀಡದೆ ಇರುವ ಪ್ರಕರಣ ಬೆಳಕಿಗೆ ಬಂದ ಬೆನ್ನಿಗೇ, ಡೀಮ್ಡ್‌ ವಿಶ್ವವಿದ್ಯಾಲಯಗಳ ಈ ಅಕ್ರಮ  ಬಯಲಾಗಿದೆ. ಕೆ.ಎಸ್‌.ಹೆಗ್ಡೆ ಮೆಡಿಕಲ್‌ ಅಕಾಡೆಮಿ, ಯನಪೋಯ, ಜೆಎಸ್ಎಸ್, ಕಸ್ತೂರ­ಬಾ, ನಿಟ್ಟೆ ವಿಶ್ವವಿದ್ಯಾಲಯ ಶೇ 25ರ ಬದಲು ಶೇ 3ರಿಂದ 4ರಷ್ಟು ಸೀಟು­ಗಳನ್ನು ಮಾತ್ರ ನೀಡಿವೆ.  ಬಿಎಲ್‌ಡಿಇ, ಜೆಎಸ್‌ಎಸ್‌ ವೈದ್ಯ­ಕೀಯ ಕಾಲೇಜ...

ಕಾಸರಕೋಡ್ ಇಕೋ ಬೀಚ್,ಪೊನ್ಮುಡಿ

Image
    ದಣಿದ ಮನಸ್ಸಿಗೊಂದು ವಿಶ್ರಾಂತಿಯ ತಾಣ * ಬಳಕೂರು ವಿ. ಎಸ್ ನಾಯಕ್ ಧರೆಯ ಸೌಂದರ್ಯದ ಮುಕುಟಮಣಿಯಾಗಿ ಮೇಳೈಸಿರುವ ಜಿಲ್ಲೆಯೇ ಉತ್ತರ ಕನ್ನಡ ಒಂದು ಕಾಲದಲ್ಲಿ ಚೆನ್ನಾಬೈರಾದೇವಿ ಆಡಳಿತದ ಸಂದರ್ಭ ಹೊನ್ನಾವರವು ಹೆಚ್ಚಾಗಿ ಕಾಳು ಮೆಣಸನ್ನು ರಫ್ತು ಮಾಡುವ ಪ್ರಮುಖ ಸ್ಥಳವಾಗಿದೆ. ಸರ್ವಧರ್ಮ ಸಮನ್ವಯತೆಗೆ ಒಂದು ಉದಾಹರಣೆಯಾಗಿತ್ತು. ಶಾಂತಿ ಮಂತ್ರವನ್ನು ಉಪದೇಶಿಸುತ್ತಾ ಬಂದ ಜೈನರ ನೆಲೆವೀಡು ಇದಾಗಿತ್ತು. ಇಂದಿನ ಸಂಸ್ಕೃತಿ ಆಧುನಿಕತೆಯ ಭರಾಟೆಯೊಂದಿಗೆ ಸತ್ವ ಕಳೆದುಕೊಂಡರೂ ಹೊನ್ನಾವರವು ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ಮೀನುಗಾರಿಕೆಯು ಮುಖ್ಯ ಉದ್ಯೋಗವಾಗಿದ್ದು ಕೃಷಿ ಆಧಾರಿತ ಕುಟುಂಬಗಳು ಇಲ್ಲಿ ಹಲವಾರು ರೀತಿಯ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಕಾಣಬಹುದು. ಚೌಪದಿ ಬ್ರಹ್ಮ ದಿನಕರ ದೇಸಾಯಿ ಅವರು ಈ ಜಿಲ್ಲೆಯನ್ನು ಈ ರೀತಿಯಾಗಿ ಹಾಡಿ ಹೊಗಳಿದ್ದಾರೆ. 'ಒಂದು ಬದಿ ಸಹ್ಯಾದ್ರಿ ಇನ್ನೊಂದು ಬದಿ ಕಡಲು/ ನಡುಮಧ್ಯದಲ್ಲಿ ಅಡಿಕೆ ತೆಂಗುಗಳ ಮಡಲು /ಸಿರಿಗನ್ನಡದ ಚಪ್ಪರವೇ ನನ್ನ ಈ ಜಿಲ್ಲೆ /ಇನ್ನೊಮ್ಮೆ ಇಲ್ಲಿ ಹುಟ್ಟಿ ಬರುವೇ ನಾ ಅಲ್ಲೆ' ಎಂದು ಹೇಳಿದ್ದು ಅವರ ಅಭಿಮಾನಕ್ಕೆ ಸಾಕ್ಷಿ. ಸದಾ ನಗುಮುಖದವರು ಜ್ಞಾನಿಗಳು, ಸಹೃದಯರು ತುಂಬಿರುವ ಈ ಜಿಲ್ಲೆಯಲ್ಲಿ ಸೊಬಗಿದೆ ಸೌಂದರ್ಯವಿದೆ. ಅದೇ ಕಾಸರಕೋಡು ಇಕೋ ಬೀಚ್ ಎಂದರೆ ಅತಿಶೋಯಕ್ತಿಯಲ್ಲ . ಹೀಗಿದೆ ಹೊನ್ನಾವರ ಹೊನ್ನಾವರದ ಮೊದಲ ಹೆಸರು ಹೊನ್ನಪುರಿ ನ...

KAVALEDURGA FORT

Kavaledurga is a magnificent fort located on a hill at an altitude of 5,056 feet (1,541 m), situated in Shivamogga District in Karnataka. The place can be reached by a 16 km drive from Thirthahalli. Other important places close by are: Thirthahalli Thirthahalli is a taluk head quarters, amidst dense forest and is about 65 Kms. from Shimoga Rameshwara Temple is located on the bank of river Tunga and attracts tourist and pilgrims for holy bath during the month of January every year. Agumbe Agumbe is at a distance of about 80Kms. from Shimoga via Thirthahalli . This is a famous place for viewing sunset. Abbey falls is nearby Agumbe. Kuppahalli This situated at a distance of about 16 Kms. east of Thirthahalli and 81 Kms. from Shimoga. This is fascinating locality which is the birth place of the great poet "KUVEMPU". There is the famous spot here know as Kavishilla where where the poet in his young days used it sit and contemplate. Ambuteertha This is 10 Kms. from Thirthahalli...

ಮಾಳ ಕಾಡಿನ ರಸಕವಳ,ಮಲ್ಯಾಡಿಯಲ್ಲಿ ಪಕ್ಷಿಗಳ ಕಲರವ

Image
ಮಾಳ ಪಶ್ಚಿಮ ಘಟ್ಟದ ತಡಿಯ ಪುಟ್ಟ ತೊಟ್ಟಿಲು, ಬಗಲಲ್ಲಿ ಸಾವಿರಾರು ಜೀವರಾಶಿಗಳನ್ನು, ಪುಟ್ಟ ತೊರೆಗಳನ್ನು ಹೊತ್ತುಕೊಂಡ ಕಾರ್ಕಳ ತಾಲೂಕಿಗೆ ನವಿಲುಗರಿಯಂತಿರೋ ಮಾಳ ಸೌಂದರ್ಯರಾಶಿಗೆ ಅಣಿಯಿಲ್ಲದ ಪುಟ್ಟ ಗ್ರಾಮ. ಮಲೆನಾಡಿನ ಹಸಿರ ಕೇಶ ರಾಶಿಯ ತಪ್ಪಲ್ಲಲ್ಲಿರೋ ಮಾಳದ ಕಾಡ ದಾರಿ, ನೀರ ಹಾದಿ, ಹಸಿರಬೆಟ್ಟ ಎಲ್ಲವೂ ಚಾರಣಿಗರ ಸ್ವರ್ಗ. ಕಾಡಲ್ಲಿ ಪ್ರಕೃತಿಯೊಂದಿಗೆ ಕಾಡೇಗೂಡೇ ಆಡಬೇಕೆನ್ನುವವರಿಗೆ ಮಾಳದ ಚಾರಣ ಬಿಟ್ಟೆನೆಂದರೂ ಬಿಡದ ಮಾಯೆ. ಕಣ್ಣು ಹಾಸಿದ್ದಲ್ಲಿ ಕಾಡುವ ಗಿಡಗಂಟಿಗಳನ್ನು ದಾಟುತ್ತಾ, ಹಾದಿಯೇ ಕಾಣದ ಹುಲ್ಲುರಾಶಿಗಳ ನಡುವೆ ದಾರಿ ಮಾಡಿಕೊಳ್ಳುತ್ತಾ, ಹಕ್ಕಿಗಳ ಕೊರಳ ದನಿಗೆ ತಲೆದೂಗುತ್ತಾ, ಮಾಳದ ಕಾಡ ಹಾದಿ ಹೊಕ್ಕರೆ ಮನಸ್ಸು ನಿರಾಳವಾಗುತ್ತದೆ. ಹರಿಯುವ ಜಲಪಾತದ ವಾದ್ಯ ಸಂಗೀತ ಕಿವಿಗೆ ದಯಪಾಲಿಸುತ್ತದೆ. ಮಾಳ ಕಾಡಿನಲ್ಲಿ ಮೂರುದಿಕ್ಕಿಗೆ ಮೂರು ಜಲಪಾತಗಳು ಬಳಕುತ್ತಾ ಹರಿಯುತ್ತಿರುವುದು ಹಸಿರ ಒಲೆಯಲ್ಲಿ ಕೆನೆ ಹಾಲು ಉಕ್ಕಿದಂತೆ ಕಾಣುತ್ತದೆ. ದಾನಗುಂಡಿ ಜಲಪಾತ, ಕುರೆಂಗಲ್ ಜಲಪಾತ, ಪಶ್ಚಿಮಘಟ್ಟದ ಮೇಲ್ಮೈಯಿಂದ ಜಿಗಿಜಿಗಿದು ಮಲೆನಾಡಿಗೆ ಸೇರುತ್ತದೆ. 500-600 ಅಡಿ ಎತ್ತರದಿಂದ ಕುಣಿಯುತ್ತಾ ಬಂಡೆಗಲ್ಲಿಗೆ ನೂರ್ಮಡಿದು ಬಂದು ರಾಚುವ ದಾನಗುಂಡಿಯ ಧ್ಯಾನಕ್ಕೆ ಎದೆಯರಳಿ ಐಸ್ ಕ್ಯಾಂಡಿಯಾದೀತು. ಕೂಗಳತೆ ದೂರದಿಂದ ನೀರಧಾರೆಯನ್ನು ನೋಡುತ್ತಿದ್ದರೆ ನಿಜಕ್ಕೂ ದುಂಡುಮಲ್ಲಿಗೆ ಮಳೆಗರೆಯುತ್ತಿದೆಯೇನೋ ಅನ್ನಿಸಿ ಒಂದರೆ ಕ್ಷಣ ...

ಪೋಖರಾ ಎಂಬ ಪ್ರೇಮಕಾವ್ಯ

Image
ನೇಪಾಳವು ಭಾರತೀಯರಿಗೆ ಅಪರಿಚಿತವೇನಲ್ಲ, ಭಾರತದ ಒಂದು ರಾಜ್ಯದಂತೆ ಭಾಸವಾಗುವ ನೇಪಾಳದ ಪ್ರವಾಸ ಎಂಥವರನ್ನೂ ಮುದಗೊಳಿಸುತ್ತದೆ. ನೇಪಾಳಕ್ಕೆ ಹೋಗಿಬರುವುದೂ ಅಷ್ಟೇ ಸುಲಭ. ಯಾವುದೇ ವೀಸಾದ ಅವಶ್ಯಕತೆಯಿರುವುದಿಲ್ಲ. ನೇಪಾಳಕ್ಕೆ ಬರುವ ಪ್ರತಿ ಪ್ರವಾಸಿಗನ ಮೊದಲ ಊರು ರಾಜಧಾನಿ ಕಠ್ಮಂಡುವಾದರೆ, ಎರಡನೇ ಭೇಟಿ ಪೋಖರಾಗೆ ಆಗಿರುತ್ತದೆ. ಪೋಖರಾ ನಗರ ಹಿಮಾಲಯದ ಪ್ರೇಮಕಾವ್ಯ, ದೃಶ್ಯಕಾವ್ಯ ಎಲ್ಲವೂ ಆಗಿದೆ. ಹಿಮಾಲಯದ ಚೆಲುವೆಲ್ಲವನ್ನೂ ಮೈಗೂಡಿಸಿಕೊಂಡಂತೆ ಕಾಣುವ ಪೋಖರಾ ನೇಪಾಳದ ಎರಡನೇ ದೊಡ್ಡ ನಗರ. ಆದರೂ ನಗರೀಕರಣದ ಭರಾಟೆ ಅಷ್ಟಾಗಿ ತಾಕಿಲ್ಲ. ನೇಪಾಳದ ಪಶ್ಚಿಮ ಭಾಗದ ಗಂಡಕಿ ವಿಭಾಗದ ಕಾಸ್ಕಿ ಜಿಲ್ಲೆಯ ಜಿಲ್ಲಾ ಮುಖ್ಯ ಕೇಂದ್ರವೂ ಆಗಿರುವ ಪೋಖರಾ, ರಾಜಧಾನಿ ಕಠ್ಮಂಡುವಿನಿಂದ 200 ಕಿ.ಮೀ. ದೂರವಿದೆ. ಜಗತ್ತಿನ ಅತೀ ಎತ್ತರದ ಹತ್ತು ಪರ್ವತ ಶ್ರೇಣಿಗಳಲ್ಲಿ ಮೂರು ಈ ನಗರದ ಸುತ್ತಮುತ್ತ ಇವೆ. ಅವೇ ಅನ್ನಪೂರ್ಣ, ಧವಳಗಿರಿ ಮತ್ತು ಮನಸ್ಲೂ ಶ್ರೇಣಿಗಳು. ಅದರಲ್ಲೂ ನಗರವು ಅನ್ನಪೂರ್ಣ ಶ್ರೇಣಿಯ (ಚಾರಣ) ಮಾರ್ಗಗಳು ಇಲ್ಲಿಂದ ಪ್ರಾರಂಭವಾಗುತ್ತದೆ. ಹಿಮಾಲಯವು ಅತ್ಯಂತ ರೋಮಾಂಚನಕಾರಿ ಅನುಭವ ನೀಡುವ ಚಾರಣ, ಪರ್ವತಾರೋಹಣ, ಪ್ಯಾರಾಗ್ಲೈಡಿಂಗ್, ರಿವರ್ ರ‌್ಯಾಫ್ಟಿಂಗ್‌ನಂಥ ಸಾಹಸಗಳ ತಾಣವಾಗಿದೆ. ಇಲ್ಲಿ ಸದಾ ಮಳೆ ಸುರಿಯುವುದರಿಂದ ಸುತ್ತಮುತ್ತಲಿನ ನದಿಗಳು ವರ್ಷವಿಡೀ ಭೋರ್ಗರೆಯುತ್ತ ರಭಸವಾಗಿ ಹರಿಯುತ್ತವೆ. ಹಾದಿಯುದ್ದಕ್ಕೂ ಹತ್ತಾರೂ ಜಲಪಾತಗಳನ್ನು...

ಹೊರಳು ನೋಟ: ಮೈಸೂರು ವಿವಿ ರೂಪುಗೊಂಡ ಬಗೆ

ವಿಶ್ವವಿದ್ಯಾಲಯದ ಪರಿಕಲ್ಪನೆ ಸಾಕಾ ರ ಗೊಂಡು ಎರಡು ದಶಕಗಳಾಗಿವೆ. ಆದರೆ ತೊಂಬತ್ತೆಂಟು ವರ್ಷಗಳ ಮೊದಲೇ ಮೈಸೂರು ಸಂಸ್ಥಾನದಲ್ಲಿ ಕನ್ನಡ ವಿ ವಿ ಸ್ಥಾಪನೆ ಸಂಬಂಧ ಗಂಭೀರ ಚಿಂತನ-ಮಂಥನ ನಡೆದಿತ್ತು. 1916ರ ಜೂನ್ 29 ರಂದು ಮೈಸೂರಿನ ಅಂದಿನ ದಿವಾನರಾಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು, ಮೈಸೂರು ಯೂನಿವರ್ಸಿಟಿ ಮಸೂದೆ ಯನ್ನು ಅಂದಿನ ವಿಧಾನ ಪರಿಷತ್‌ನಲ್ಲಿ ಮಂಡಿಸಿದಾಗ ನಡೆದ ಚರ್ಚೆ ಹಾಗೂ ಸಂವಾದದಲ್ಲಿ ಅನೇಕ ಸದಸ್ಯರು ಕನ್ನಡ ವಿವಿ ಯೊಂದನ್ನು ಸ್ಥಾಪಿಸಬಾರದೇಕೆ ಎಂಬ ಆಶಯ ವ್ಯಕ್ತಪಡಿಸಿದ್ದರು. ಮೈಸೂರು ಸಂಸ್ಥಾನದ ಒಟ್ಟು ಜನಸಂಖ್ಯೆ 61ಲಕ್ಷ. ಇಷ್ಟೊಂದು ಜನಸಂಖ್ಯೆಯ ಶೈಕ್ಷಣಿಕ ವಿಕಾಸಕ್ಕೆ ಪೂರಕವಾಗಿ ಒಂದು ವಿ ವಿ ಇಲ್ಲ. ಇಂಗ್ಲೆಂಡಿನಲ್ಲಿ ಎರಡೂವರೆ ದಶಲಕ್ಷ ಜನ ಸಂಖ್ಯೆಗೆ ಒಂದೊಂದು ವಿವಿಗಳಿವೆ. ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಹತ್ತು ಸಾವಿರ ಜನಸಂಖ್ಯೆಗೊಂದರಂತೆ ವಿವಿಗಳಿವೆ. ಆದರೆ, ಅರವತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಮೈಸೂರು ಸಂಸ್ಥಾನದಲ್ಲಿ ಜ್ಞಾನ ವಿಕಸನಕ್ಕೆ ಪೂರಕವಾದ ಒಂದು ವಿವಿ ಇಲ್ಲದಿರುವುದು ನಿಜಕ್ಕೂ ದುರದೃಷ್ಟಕರ. ಮೈಸೂರು ಸಂಸ್ಥಾನದಲ್ಲಿ ಸಾಕ್ಷರತೆ ಪ್ರಮಾಣ ನಿಜಕ್ಕೂ ಕಡಿಮೆ ಇದೆ. 1881ರಲ್ಲಿ ಶಿಕ್ಷಣಕ್ಕಾಗಿ ಕೇವಲ ಮೂರು ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದರೆ, 1914-15ರ ಅವಧಿಯಲ್ಲಿ 21ಲಕ್ಷ ರೂಪಾಯಿ ವೆಚ್ಚ ಮಾಡಲಾ ಗುತ್ತಿದೆ. 1881ರ ಅವಧಿಯಲ್ಲಿ 129 ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಪ...