ನೀವು ಅಥವಾ ನಿಮ್ಮ ಸಂಗಾತಿ ಕಾಮಾಸಕ್ತಿಯನ್ನು ಕಳೆದುಕೊಳ್ಳುತ್ತಿದ್ದೀರಾ? ಹಲವಾರು ಬಗೆಯ ಮಾನಸಿಕ ಮತ್ತು ದೈಹಿಕ ಅಂಶಗಳು ಕಾಮದ ಮೇಲೆ ಪರಿಣಾಮ ಬೀರುತ್ತವೆ. ಕಾಮವನ್ನು ತೀರಾ ಕಡಿಮೆ ಮಾಡುವ ಈ ಕೆಲವು ಅಂಶಗಳು ನಿಮ್ಮ ಮೇಲೆ ಪರಿಣಾಮ ಬೀರುತ್ತಿವೆಯಾ ನೋಡಿ.
1. ಕಾಮದ ಗಾಡಿ ಓಡದು: ಒತ್ತಡ
ನೀವು ಅನೇಕ ಕೆಲಸಗಳನ್ನು ಒತ್ತಡದಲ್ಲಿ ನಿಭಾಯಿಸುವ ಶಕ್ತಿ ಉಳ್ಳವರಾಗಿರಬಹುದು. ಆದರೆ ಒತ್ತಡದಲ್ಲಿ ಕಾಮ ಒತ್ತರಿಸಿ ಬರುತ್ತದೆ ಎನ್ನುವ ಹಾಗೆ ಯಾರಿಗೂ ಆಗದು. ಕೆಲಸದ ಒತ್ತಡ, ಹಣದ ಸಮಸ್ಯೆ, ಮನೆಯಲ್ಲಿರುವ ಅನಾರೋಗ್ಯದವರ ಆರೈಕೆ-ಇತ್ಯಾದಿ ಒತ್ತಡಗಳು ನಿಮ್ಮ ಕಾಮವನ್ನು ಕಡಿಮೆ ಮಾಡಿಬಿಡುತ್ತವೆ. ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಕೆಲವು ತಂತ್ರಗಳನ್ನು ನಿಮ್ಮ ವೈದ್ಯರಿಂದ ಅಥವಾ ಯೋಗಾಸನದ ಶಿಕ್ಷಕರಿಂದ ಪಡೆಯಿರಿ.
2. ಕಾಮದ ಗಾಡಿ ಓಡದು: ಸಂಬಂಧಗಳ ಸಮಸ್ಯೆ
ಭಾವನಾತ್ಮಕವಾಗಿ ಹತ್ತಿರವಾಗಿರಬೇಕೆಂದು ಹೆಣ್ಣು ಬಯಸುವಳು. ಅರ್ಥವಿಲ್ಲದ ವಾಗ್ವಾದ, ಕೆಟ್ಟ ಸಂವಹನ, ನಂಬಿಕೆಯ ದ್ರೋಹ ಮತ್ತಿತರ ಅಡೆತಡೆಗಳು ಪ್ರೇಮಕ್ಕೆ ಅಡ್ಡಗೋಡೆಯಾಗಿಬಿಡುತ್ತವೆ.
3. ಕಾಮದ ಗಾಡಿ ಓಡದು: ಆಲ್ಕೋಹಾಲ್
ಯಾವಾಗಲೂ ನಿಮ್ಮನ್ನು 'ಮೂಡ್'ಗೆ ತಂದಿಡೋದಿಲ್ಲ! ಹೆಚ್ಚೆಂದರೆ ಕಾಮದ ಬಗ್ಗೆ ಸ್ವಲ್ಪ 'ನಾಚಿಕೆ' ಕಡಿಮೆ ಮಾಡಿ, ಸ್ವಲ್ಪ ಧೈರ್ಯ ಹೆಚ್ಚಿಸಬಹುದಷ್ಟೇ. ಆದರೆ ನಿಮ್ಮ ಕಾಮದ ಆಸಕ್ತಿಯನ್ನು ಸಕ್ಕತ್ ಕಡಿಮೆ ಮಾಡುವ ದ್ರವವಿದು! ಈ ದ್ರವ ನಿಮ್ಮ ಅಮಲು ಹೆಚ್ಚಿಸಿದರೂ ನಿಮ್ಮ ಸಂಗಾತಿಯ ಪಾಲಿಗೆ ಉಪದ್ರವವಾಗುತ್ತದೆ. ಮಾದಕ ಪದಾರ್ಥಗಳಿಂದಲೂ ಇದೇ ತೊಂದರೆ ಆಗುವುದು.
4. ಕಾಮದ ಗಾಡಿ ಓಡದು: ತೀರಾ ಕಡಿಮೆ ನಿದ್ರೆ
ಅತಿಬೇಗನೆ ಎದ್ದರೂ, ಅತಿ ತಡವಾಗಿ ಮಲಗಿದರೂ ನಿಮ್ಮ ಏಳುವಿಕೆಯಿಂದಲೂ ವ್ಯತ್ಯಾಸವಾಗುವುದು! ಅಥವಾ ನಿಮಗೆ ನಿದ್ರಾಹೀನತೆ ಅಥವಾ ಸ್ಲೀಪ್ ಅಪ್ನಿಯಾ (ನಿದ್ರಿಸುವ ವೇಳೆ ಆಗುವ ಅಡೆತಡೆ) ಇದ್ದಾಗಲೂ ಅದೇ ಕತೆ. ನಿಮ್ಮ ನಿದ್ರೆಯಲ್ಲಿ ಏನೇ ವ್ಯತ್ಯಾಸವಾದರೂ ನಿಮ್ಮ ಕಾಮಜೀವನದಲ್ಲೂ ಅದು ಅಡ್ಡಿಯಾಗುವುದು. ಅತಿ ಕಡಿಮೆ ನಿದ್ರೆಯಿಂದ ಸುಸ್ತಾಗುವುದು, ಸುಸ್ತಿನಿಂದ 'ಕುಸ್ತಿ' ಕಷ್ಟವಾಗುವುದು.
5. ಕಾಮದ ಗಾಡಿ ಓಡದು: ಪೋಷಕರಾಗಿದ್ದಾಗ
ಕೇವಲ ತಂದೆತಾಯಿಯಾಗುವುದರಿಂದ ಕಾಮದಲ್ಲಿ ನಿರಾಸಕ್ತಿ ಬರದು. ಆದರೆ ಮಗುವನ್ನು ನೋಡಿಕೊಳ್ಳುವ ವೇಳೆ ಪ್ರೇಮಕ್ಕಾಗಿ ಸಮಯ ಮಾಡಿಕೊಳ್ಳುವುದು ಕಷ್ಟವಾಗಬಹುದು. ನಿಮ್ಮ ಮಗುವಿನ ಆರೈಕೆ ಮಾಡಬಲ್ಲ ಕೆಲಸದವರನ್ನು ಹುಡುಕಿ. ಹೊಸ ಮಗು ಮನೆಯಲ್ಲಿದೆಯೇ, ಮಗು ಮಲಗಿರುವಾಗ ಕಾಮಕ್ಕೆ ಸಮಯ ಮಾಡಿಕೊಳ್ಳಿ.
6. ಕಾಮದ ಗಾಡಿ ಓಡದು: ಔಷಧ
ಕೆಲವು ಬೀಪಿ ಔಷಧಗಳು, ಖಿನ್ನತೆ ಹೋಗಿಸುವ ಔಷಧಗಳು, ಅಲರ್ಜಿಗೆ ಉಪಯೋಗಿಸುವ (ಆಂಟಿ ಹಿಸ್ಟಮಿನ್ಗಳು) ಓರಲ್ ಕಾಂಟ್ರಾಸೆಪ್ಟಿವ್ಗಳು (ಗರ್ಭನಿರೋಧಕ ಮಾತ್ರೆಗಳು), ಕೀಮೋಥೆರಪಿ, ಹೆಚ್ಐವಿಗೆ ಬಳಸುವ ಮಾತ್ರೆಗಳು-ಕಾಮದಲ್ಲಿ ನಿರಾಸಕ್ತಿ ತರಬಲ್ಲವು. ಔಷಧ ಬದಲಾಯಿಸುವುದು ಅಥವಾ ಡೋಸ್ ಕಡಿಮೆ ಮಾಡುವುದು ಇರುವ ಮಾರ್ಗ.
7. ಕಾಮದ ಗಾಡಿ ಓಡದು: ದೇಹದ ಆಕಾರ
ನಿಮ್ಮ ದೇಹದ ಬಗ್ಗೆ ನಿಮಗೆ ಕೀಳರಿಮೆ ಇದ್ದಾಗ ಕಾಮದ ಬಗ್ಗೆ ಆಸಕ್ತಿ ಮೂಡುವುದು ಕಷ್ಟವೇ. ತೀರಾ ದಪ್ಪವಾಗಿದ್ದಲ್ಲಿ ನಿಮಗದರ ಬಗ್ಗೆ ಕೀಳರಿಮೆ ಇದಲ್ಲಿ, ನಿಮ್ಮ ಪ್ರೇಮದ ಮೋಂಬತ್ತಿ ಉರಿಯುವುದಿಲ್ಲ. ಒಂದುವೇಳೆ ನಿಮ್ಮ ಸಂಗಾತಿ 'ಇದರಿಂದ ಏನೂ ತೊಂದರೆಯಿಲ್ಲ ಬಿಡಿ' ಎಂದು ಹೇಳಿದಲ್ಲಿ ನೀವು ಬೇಗನೇ ನಿಮ್ಮ ಕೀಳರಿಮೆ ಬಿಡಬಹುದು. ಜೊತೆಗೆ ಜಿಮ್ಗೆ ಹೋಗುವುದು, ಯೋಗಾಭ್ಯಾಸ ಇವೆಲ್ಲವೂ ನಿಮ್ಮ ದೇಹವನ್ನು ಸಮರ್ಥವಾಗಿ ಇಡುವುದರಿಂದ ನಿಮ್ಮ (ಮನೋ)ಸಾಮರ್ಥ್ಯ ಕೂಡಾ ಹೆಚ್ಚುವುದು.
8. ಕಾಮದ ಗಾಡಿ ಓಡದು: ಬೊಜ್ಜು
ಬೊಜ್ಜಿದ್ದಾಗ ಅಥವಾ ಅತಿಯಾದ ತೂಕವಿದ್ದರೆ ತೃಷೆ ಕಡಿಮೆಯಾಗದು ಎಂಬ ಭಾವನೆ ಇರುವುದು ಸಾಮಾನ್ಯ. ಆದರೆ ಆಸೆ, ಬಯಕೆ, ಖುಷಿ-ಇವೆಲ್ಲವೂ ತೀರಾ ದಪ್ಪವಿದ್ದಾಗಲೂ ಸಾಧ್ಯ. ಬೊಜ್ಜಿದ್ದವರ ಕಾರ್ಯ ನಿರ್ವಹಣೆ ಬಗ್ಗೆಸಾಮಾಜಿಕ ಸನ್ನಿಯ ಜೊತೆಗೆ ಮನೋವೈಜ್ಞಾನಿಕ ಕಾರಣವೂ ಇರುವುದರಿಂದ ಹಾಗೆ ಅಭಿಪ್ರಾಯ ಬೆಳೆದು ಬಂದಿರಬಹುದು.
9. ಕಾಮದ ಗಾಡಿ ಓಡದು: ಶಿಶ್ನ ಸರಿಯಾಗಿ ನಿಮಿರದು
ಈ ಸಮಸ್ಯೆಗೆ ಎರೆಕ್ಟೈಲ್ ಡಿಸ್ಫಂಕ್ಷನ್ ಎನ್ನುವರು. ಕಾತರತೆಯ ಕಾರಣವೇ ಕೆಲವು ಪುರುಷರು 'ಹೇಗೆ ನಡೆಯುವುದೋ ಯಾರಿಗೆ ಗೊತ್ತು' ಎಂದು ಮುಂದುವರಿಯುವುದಿಲ್ಲ.
10. ಕಾಮದ ಗಾಡಿ ಓಡದು: ಟೆಸ್ಟಾಸ್ಟೆರೋನ್ ಮಟ್ಟ ಕಡಮೆಯಾದಾಗ
ವಯಸ್ಸಾದಂತೆ ಪುರುಷರ ಈ ಹಾರ್ಮೋನ್ ಕಡಿಮೆ ಆಗುತ್ತಿದ್ದಂತೆ, ಆಸೆಯೂ ಕುಂದಿ ಹೋಗುವುದು ಸಾಮಾನ್ಯ. ಎಲ್ಲಾ ಗಂಡಸರಿಗೂ ಹಾಗೇ ಆಗುತ್ತದೆ ಎಂದೇನೂ ಇಲ್ಲ. ಆದರೆ ಅನೇಕರಿಗೆ ಈ ಟೆಸ್ಟಾಸ್ಟೆರೋನ್ ಕಡಿಮೆ ಆದಾಗ ಅವರ 'ದಂಡಯಾತ್ರೆ'ಗೆ ಅಡ್ಡಿಯಾದಂತಾಗುತ್ತದೆ.
11. ಕಾಮದ ಗಾಡಿ ಓಡದು: ಖಿನ್ನತೆ
ಹಲವು ಖಿನ್ನತೆಯ ಔಷಧಿಗಳಿಂದ ಕಾಮದಲ್ಲಿ ನಿರಾಸಕ್ತಿ ಆಗುವ ಸಂಭವ ಇರುತ್ತದೆ. ಜೊತೆಗೆ ಖಿನ್ನತೆ ಕೂಡಾ ಇನ್ನಷ್ಟು ಕುಸಿಯುವಂತೆ ಮಾಡಿಬಿಡುತ್ತದೆ. ಅರ್ಧದಷ್ಟು ಮಹಿಳೆಯರಿಗೆ ಋತುಚಕ್ರ ನಿಲ್ಲುವ ಸಮಯದಲ್ಲಿ ಕಾಮದಲ್ಲಿ ಆಸಕ್ತಿ ಕುಗ್ಗುವುದು. ಯೋನಿ ಒಣಗುವುದರಿಂದ, ಕಾಮದ ಸಮಯದ ನೋವಿನಿಂದ-ಕಾಮ ಅಷ್ಟೇನೂ ಹಿತ ತರುವುದಿಲ್ಲ-ಎಂಬ ಕಾರಣದಿಂದ ಆಸಕ್ತಿ ಕಡಿಮೆಯಾಗುತ್ತ ಹೋಗುವುದು.
12. ಕಾಮದ ಗಾಡಿ ಓಡದು: ಆಪ್ತತೆ ಇಲ್ಲದ ಮೇಲೆ
ನಿಮ್ಮ ಪ್ರೇಮ 'ನ್ಯೂಟ್ರಲ್'ನಲ್ಲಿ ಹೋಗುತ್ತಿದ್ದರೆ ಅದನ್ನು ಫಸ್ಟ್ ಗೇರ್ಗಾದರೂ ಹಾಕಬೇಕೆಂದರೆ ನಡುವೆ ಪ್ರೀತಿ ಇರಲೇಬೇಕು. ಮಾತಾಡಿ, ಮುದ್ದಿಸಿ, ಪರಸ್ಪರ ಮಸಾಜ್ ಮಾಡಿ. ಪ್ರೇಮ ಮತ್ತು ಮಮತೆಯನ್ನು ಕಾಮದ ಕ್ರಿಯೆ ಇಲ್ಲದೇ ಎಕ್ಸ್ಪ್ರೆಸ್ ಮಾಡುವುದನ್ನು ಕಲಿಯಿರಿ. ನಿಮ್ಮ ನಡುವೆ ಆಪ್ತತೆ ಬೆಳೆದ ಮೇಲೆ ಅಪ್ಪುವುದಕ್ಕೆ ರೆಡಿಯಾಗಿ!
-ಡಾ. ರೋಜ್ ಮೇರಿ ಮಾರ್ಲೋ
ಕೃಪೆ:ಕನ್ನಡಪ್ರಭ
Comments
Post a Comment