ಪಂಚತೀರ್ಥ, ದೇವರಮನೆ
ಐದು ತೀರ್ಥದಲ್ಲಿಮುಳುಗು ಹಾಕಿ ಚಿಕ್ಕಮಗಳೂರು ಜಿಲ್ಲೆ ಕಳಸದಿಂದ 3 ಕಿ.ಮೀ. ಅಂತರದಲ್ಲಿರುವ ಭದ್ರಾ ತೀರದ ಅಂಬುತೀರ್ಥ ಮನಮೋಹಕ, ರಮಣೀಯ ತಾಣ. ಹೊರನಾಡು, ಶೃಂಗೇರಿಗಳಿಗೆ ಭೇಟಿ ನೀಡಿ ಕಳಸೇಶ್ವರಸ್ವಾಮಿ ದರ್ಶನ ಮಾಡುವ ಭಕ್ತರು ಸಮೀಪವೇ ಇರುವ ಈ ಪಂಚತೀರ್ಥಕ್ಕೆ ಭೇಟಿ ನೀಡದಿದ್ದರೆ ಪವಿತ್ರ ಕ್ಷೇತ್ರ ದರ್ಶನದಿಂದ ವಂಚಿತರಾಗುವುದಂತೂ ದಿಟ. ಸುಮಾರು 5 ಸಾವಿರ ವರ್ಷಗಳ ಹಿನ್ನೆಲೆಯಿರುವ ಕಳಸ ಕ್ಷೇತ್ರ ಮಹಾಮುನಿ ಅಗಸ್ತ್ಯ ಕ್ಷೇತ್ರವೆನಿಸಿದೆ. ಸ್ವಯಂಭು ಕಳಸೇಶ್ವರಸ್ವಾಮಿ ದೇಗುಲ ಹೊಂದಿದ ಖ್ಯಾತಿ. ಕುದುರೆಮುಖ ಬಳಿಯ ಗಂಗಾಮೂಲವೆಂಬ ಪವಿತ್ರ ತಾಣದಲ್ಲಿ ತುಂಗಾ, ಭದ್ರಾ ಹಾಗೂ ನೇತ್ರಾವತಿ ನದಿಗಳು ಉಗಮವಾಗುತ್ತವೆ. ತುಂಗೆಯು ಮುಂದೆ ಸಾಗಿ ಹನುಮನಗುಂಡಿ, ಸುತನಬ್ಬಿ ಜಲಪಾತಗಳನ್ನು ಸೃಷ್ಟಿಸಿ ಶೃಂಗೇರಿಯತ್ತ ಸಾಗಿದರೆ, ನೇತ್ರಾವತಿ ನದಿಯು ಕಾರ್ಕಳದತ್ತ ಮುಖತೋರಿ ಧರ್ಮಸ್ಥಳದತ್ತ ಸಾಗುತ್ತಾಳೆ. ಭದ್ರಾ ನದಿಯು ಕುದುರೆಮುಖ, ಕಳಸ ಹಾದಿಯ ಸಹ್ಯಾದ್ರಿ ಪರ್ವತ ಪ್ರದೇಶಗಳ ಕಣಿವೆಗಳಲ್ಲಿ ಸಾಗುತ್ತಾಳೆ. ಹೀಗೆ ಕಳಸದ ಬಳಿ ಸಾಗುವಾಗ ಅಂಬುತೀರ್ಥ (ಅಂಬಾತೀರ್ಥ ಹಾಗೂ ಮಾತೃಕಾತೀರ್ಥವೆಂದೂ ಹೇಳುತ್ತಾರೆ), ರುದ್ರತೀರ್ಥ, ಕೋಟಿತೀರ್ಥ, ನಾಗತೀರ್ಥ ಹಾಗೂ ವಸಿಷ್ಠ ತೀರ್ಥಗಳಾಗಿ ಹರಿಯುತ್ತಾಳೆ. ಈ ಪಂಚತೀರ್ಥಗಳಲ್ಲಿ ಅಂಬ...