ಕಡು ಬಡ ಗ್ರಾಮ ಇಂದು ಭೂ ಲೋಕದ ಸ್ವರ್ಗ!
ಹಿವರೆ ಬಾಜಾರ್, ಅಹಮದನಗರ, ಮಾ.15: ಆ ಗ್ರಾಮ ಇಂದು ಭೂ ಲೋಕದ ಸ್ವರ್ಗವಾಗಿದೆ. ಆದರೆ ಸುಮಾರು ಮೂರು ದಶಕಗಳ ಹಿಂದೆ ಅದು ಅಪರಾಧ, ಮದ್ಯಪಾನ, ಬರ ಭೂಷಣವಾಗಿತ್ತು. 1989ರಲ್ಲಿ ಪೋಪಟರಾವ ಪವಾರ ಎಂಬ ಸ್ನಾತಕೋತ್ತರ ಪದವೀಧರ ಗ್ರಾಮದ ಮುಖ್ಯಸ್ಥನಾಗಿ ವಾಪಸಾಗಿ ಜಾದು ಮಾಡಿದ ನೋಡಿ. ಅಲ್ಲೀಗ ಹಸಿರು ನಳನಳಿಸುತ್ತಿದೆ. ಜೀವಂತಿಕೆ ಪುಟಿಯುತ್ತಿದೆ. ಈ ಗ್ರಾಮಕ್ಕೆ ಒಬ್ಬೇ ಒಬ್ಬ ವೈದ್ಯನೂ ಇಲ್ಲ. ಆದರೆ 32 ಮಂದಿ MBBS ಮಾಡುತ್ತಿದ್ದಾರೆ! ಯುವಜನತೆಯ ಕೈಕೆಸರಾದರೆ... ವಯೋಸಹಜವಾಗಿ ಕ್ರಿಕೆಟ್ ಹುಚ್ಚು ಬೆಳೆಸಿಕೊಂಡಿದ್ದ ಪೋಪತರಾವ್ ಪವಾರ್ ಆತನೇ ಹೇಳುವಂತೆ ಅಂದು ಗ್ರಾಮಕ್ಕೆ ಮರಳದಿದ್ದರೆ ಅಬ್ಬಬ್ಬಾ ಅಂದರೆ ಒಬ್ಬ ರಣಜಿ ಆಟಗಾರನಾಗಿರುತ್ತಿದನಂತೆ! ಅಥವಾ ಶಿಕ್ಷಣ ಪೂರೈಸಿದ ಮೇಲೆ ವೈಟ್ ಕಾಲರ್ ಜಾಬ್ ಗಿಟ್ಟಿಸಿ, ನಾನು ನನ್ನದು ಎಂದು ಒಂದು ಕುಟುಂಬವನ್ನು ಪೋಷಿಸಬಲ್ಲವನಾಗಿರುತ್ತಿದ್ದ. ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಹಿವರೆ ಬಾಜಾರ್ ಎಂವುದೇ ಈ ಆದರ್ಶ ಗ್ರಾಮ. ಕೃಷಿ ನೀರಾವರಿ ಯೋಜನೆಗಳ ಜತೆಗೆ ಕೆಲ ಜಲ ಸಂಪನ್ಮೂಲ ಯೋಜನೆಗಳನ್ನು ಸಾವಧಾನವಾಗಿ ಕಾರ್ಯಗತಗೊಳಿಸಲಾಗಿದೆ. ಮಳೆ ಕೊಯ್ಲಿಗೆ ಒತ್ತುಕೊಟ್ಟು 52 ಮಣ್ಣು ಕುಂಟೆಗಳು, 32 ಕಲ್ಲು ಕುಂಟೆಗಳು, 9 ಚೆಕ್ ಡ್ಯಾಂಗಳನ್ನು ಗ್ರಾಮಸ್ಥರಿಂದಲೇ ನಿರ್ಮಿಸಿದ. ಈ ಮಧ್ಯೆ, ಗ್ರಾಮದಲ್ಲಿ ಒಂದಾನಂತರ ಒಂದರಂತೆ ತಲೆಯೆತ್ತುತ್ತಿದ್ದ 22 ಸಾರಾಯಿ ಅಂಗಡಿಗಳ ಬಾಗಿಲು ಮುಚ್ಚಿಸಿದ. ರೈತರಿಗೆ ಸಕಾಲಕ್ಕೆ ಸಾಲ ದಕ್ಕುವಂತೆ ಮಾಡಿದ. ಅಂದಹಾಗೆ ಹಿವರೆ ಬಾಜಾರ್ ಹಳ್ಳಿಯು ಅಣ್ಣಾ ಹಜಾರೆಯ ಊರಾದ ರಾಳೇಗಣ ಸಿದ್ಧಿಯಿಂದ 35 ಕಿಮೀ ದೂರದಲ್ಲಿದೆ. ಹಾಗಾದರೆ ಒಮ್ಮೆ ಇಂತಹ ಗ್ರಾಮವನ್ನು ನೋಡಿ ಕಣ್ತುಂಬಿಸಿಕೊಳ್ಳುವ ಆಸೆ ಪುಟಿಯುತ್ತಿದೆಯೇ? ಇಲ್ಲಿರುವ ನಾಲ್ಕಾರು ಚಿತ್ರಗಳನ್ನು ನೋಡಿದ ಮೇಲೆ ನಿಮ್ಮಾಸೆ ಮತ್ತಷ್ಟು ಹೆಚ್ಚಾದರೆ ಸೀದಾ ಆ ಹಳ್ಳೀಗೇ ಒಮ್ಮೆ ಹೋಗಿ ಬನ್ನಿ. ಗ್ರಾಮೀಣಾಭಿವೃದ್ಧಿಯ 'ಓಯಸಿಸ್'5/6 ಗ್ರಾಮೀಣಾಭಿವೃದ್ಧಿಯ 'ಓಯಸಿಸ್' ಗ್ರಾಮದಲ್ಲಿ ವರ್ಷದ ಹಿಂದೆ ಕೇವಲ ಮೂರು ಕುಟುಂಬಗಳು ಬಡತನ ರೇಖೆಗಿಂದ ಕೆಳಗಿದ್ದವು. ಅದೇ 1995ರಲ್ಲಿ 195 ಕುಟುಂಬಗಳು ಕಡುಬಡತನ ಬೇಗೆಯಲ್ಲಿ ಬಸವಳಿದಿದ್ದವು. 1995ರಲ್ಲಿ 100 ಅಡಿ ಆಳದಲ್ಲಿ 90 ತೆರೆದ ಬಾವಿಗಳು ಇದ್ದವು. ಆಹಾ ಇಂದು 15-40 ಅಡಿಯಾಳದ 294 ಬಾವಿಗಳಿವೆಯಂತೆ ಕಣ್ರೀ. ಇದೇ ಜಿಲ್ಲೆಯ ಇತರೆ ಗ್ರಾಮಗಳಲ್ಲಿ 200 ಅಡಿ ಕೆಳಗಿಳಿದರೂ ನೀರು ಸಿಗುವುದು ದುಸ್ತರವಾಗಿದೆ. ಚಿತ್ರದಲ್ಲಿರುವ ಪೋಪಟರಾವ ಪವಾರಗೆ ಒಂದು ಶಹಬ್ಬಾಸ್ ಹೇಳೋಣ!ಇದನ್ನೂ ಓದಿ:

ಮೂಕವಿಸ್ಮಿತರಾದ ಸಚಿವ ಜೈರಾಂ ರಮೇಶ್ : 1995ರಲ್ಲಿ ತಲಾ ಆದಾಯ 830 ರೂ. ಇತ್ತು. ಆದರೆ ಈಗ 30,000 ಸರಾಸರಿ ತಲಾ ಆದಾಯ ಇಲ್ಲಿನ ಜನರದ್ದಾಗಿದೆ. 2012ರಲ್ಲಿ ಇಲ್ಲಿಗೆ ಭೇಟಿ ನೀಡಿದ ಕೇಂದ್ರ ಸಚಿವ ಜೈರಾಂ ರಮೇಶ್ ಅವರು ಗ್ರಾಮದ ಬೆಳವಣಿಗೆಯನ್ನು ಕಂಡು ಮೂಕವಿಸ್ಮಿತರಾದರು. 12 ಕೋಟಿ ರೂ. ವೆಚ್ಚದ ಪಂಚಾಯತ್ ರಾಜ್ ತರಬೇತಿ ಯೋಜನೆಗೆ ಚಾಲೂ ನೀಡಿದರು.
ಸುಸ್ಥಿರ ಅಭಿವೃದ್ಧಿ ಅಂದರೆ ಇದೇನಾ?: ಈ ಹಳ್ಳಿಯಲ್ಲಿರುವುದೆಲ್ಲ ಸಿಮೆಂಟ್ ಗಲ್ಲಿಗಳು. ಜತೆಗೆ, ಶಿಸ್ತು, ಕಾನೂನು ಸುವ್ಯವಸ್ಥೆಯೂ ಇದೆ. ಹೆಚ್ಚು ನೀರು ಬೇಡುವ ಕಬ್ಬು, ಗದ್ದೆ, ಬಾಳೆಗೆ ಇಲ್ಲಿ ಸ್ಥಳವಿಲ್ಲ. ಹನಿ ನೀರಾವರಿ ವ್ಯವಸ್ಥೆಯಲ್ಲಿ ಬೆಳೆಯುವ ಬೆಳೆಗಳಿಗೆ ಪ್ರಾಶಸ್ತ್ಯ. ಬಹು ಬೆಳೆಗೆ ಆದ್ಯತೆ ನೀಡಲಾಗಿದೆ. 20 ಹೆಕ್ಟೇರ್ ಕೃಷಿಯಿಂದ 70 ಹೆಕ್ಟೇರ್ ಕೃಷಿ ಪ್ರದೇಶವಾಗಿ ಮಾರ್ಪಟ್ಟಿದೆ. 10 ಲಕ್ಷ ಮರಗಳನ್ನು ಬೆಳೆಸಲಾಗಿದೆ.
ನೈರ್ಮಲ್ಯೀಕರಣ, ಶಿಸ್ತು ಅಚ್ಚುಕಟ್ಟು: ಪ್ರಾಥಮಿಕ ಶಿಕ್ಷಣ, ಅಂಗನವಾಡಿ, ಆರೋಗ್ಯ, ಕುಡಿಯುವ ನೀರು, ನೈರ್ಮಲ್ಯೀಕರಣ, ವಿದ್ಯುತ್ ಉತ್ಪಾದನೆ ಇವೇ ಮುಂತಾದ ಸಮುದಾಯ ಯೋಜನೆಗಳನ್ನು ಶಿಸ್ತುಬದ್ಧವಾಗಿ, ಅಚ್ಚುಕಟ್ಟಾಗಿ ಇಲ್ಲಿ ಕೈಗೊಳ್ಳಲಾಗಿದೆ. 1995ರಲ್ಲಿ ದಿನಂಪ್ರತಿ 150 ಲೀಟರ್ ಹಾಲು ಕರೆಯುತ್ತಿದ್ದ ಇಲ್ಲಿನ ಗ್ರಾಮಸ್ಥರು ಈಗ 4000 ಟಳಿರ್ ಹಾಲನ್ನು ಕರೆಯುತ್ತಾರೆ. ಗ್ರಾಮ ನಿಜಕ್ಕೂ ನಂದನವಾಗಿದೆ.

ಗ್ರಾಮೀಣಾಭಿವೃದ್ಧಿಯ 'ಓಯಸಿಸ್' ಗ್ರಾಮದಲ್ಲಿ ವರ್ಷದ ಹಿಂದೆ ಕೇವಲ ಮೂರು ಕುಟುಂಬಗಳು ಬಡತನ ರೇಖೆಗಿಂದ ಕೆಳಗಿದ್ದವು. ಅದೇ 1995ರಲ್ಲಿ 195 ಕುಟುಂಬಗಳು ಕಡುಬಡತನ ಬೇಗೆಯಲ್ಲಿ ಬಸವಳಿದಿದ್ದವು. 1995ರಲ್ಲಿ 100 ಅಡಿ ಆಳದಲ್ಲಿ 90 ತೆರೆದ ಬಾವಿಗಳು ಇದ್ದವು. ಆಹಾ ಇಂದು 15-40 ಅಡಿಯಾಳದ 294 ಬಾವಿಗಳಿವೆಯಂತೆ ಕಣ್ರೀ. ಇದೇ ಜಿಲ್ಲೆಯ ಇತರೆ ಗ್ರಾಮಗಳಲ್ಲಿ 200 ಅಡಿ ಕೆಳಗಿಳಿದರೂ ನೀರು ಸಿಗುವುದು ದುಸ್ತರವಾಗಿದೆ. ಚಿತ್ರದಲ್ಲಿರುವ ಪೋಪಟರಾವ ಪವಾರಗೆ ಒಂದು ಶಹಬ್ಬಾಸ್ ಹೇಳೋಣ



Comments
Post a Comment